ಕತೆ-ಕವನಗಳು

*ಚೆಂದದ ಮಗು*

ಯಾವುದೇ ಚಿಂತೆ ಮಾಡದೇ ಮುಗುಳ್ನಗುತ್ತಾ
ಕೈಕಾಲು ಆಡಿಸುತ್ತಾ ಮಲಗಿದೆ ತೊಟ್ಟಿಲ *ಕಂದ*|
ಬಾಲ ಕೃಷ್ಣನ ರೂಪದಲ್ಲಿ ಮಿಂಚುವ
ಮುಗ್ಧಮಗು ಎಷ್ಟು ನೋಡಿದರೂ *ಚೆಂದ*||

ಮಗುವಿನ ಸಣ್ಣ ಅಳುವಿಗೂ ತಾಯಿ ಥಟ್ಟನೇ
ಸ್ಪಂದಿಸುವ ಕರುಳಿನ ಕೂಗು ಬಿಡಿಸದ *ಬಂಧ|*
ಕತ್ತಲಲ್ಲೂ ಕೂಡಾ ಚಂದಮಾಮನ ಹಾಗೆ
ಹೊಳೆಯುವ ಪಾಪು ಚಂದ್ರನಿಗಿಂತ *ಅಂದ*||

ತಾಯಿ ಮಗುವನ್ನು ಜಳಕ ಮಾಡಿಸಿದ ತಕ್ಷಣ
ಆಗ ಚಿನ್ನು ಸುವಾಸನೆ ಥೇಟ್ *ಗಂಧ*|
ಲಗ್ನವಾಗಿ ಏಳು ವರ್ಷಗಳ ತರುವಾಯ ಮಗು
ತನ್ನ ತಂದೆ ತಾಯಿಗೆ ಸಂತೋಷವನ್ನು *ತಂದ*||

ಕುಟುಂಬದ ಎಲ್ಲರಿಗೂ ಖುಷಿ ನೀಡಲು ಮಗು
ಹುಣ್ಣಿಮೆಯ ಬೆಳದಿಂಗಳ ದಿನವೇ *ಬಂದ|*
ಎಲ್ಲರೂ ಮಗುವನ್ನು ಮುದ್ದಾಡುವವರೇ
ಯಾಕಂದ್ರೆ ಅವರ ಪಾಲಿಗೆ ಬೆಳಗಾಂ *ಕುಂದ*||

ಬರಹ: ಎಚ್ .ಭೀಮರಾವ್ ವಾಷ್ಠರ್ , ಸುಳ್ಯ

Related posts

ತೊಟ್ಟಿಲು ತೂಗುವ ಕೈ…!!! (ಸಣ್ಣ ಕಥೆ)

Upayuktha

*ನನ್ನಾಕೆ*

Harshitha Harish

ಕವನ: ನೆನಪುಗಳು

Upayuktha