ಕ್ಯಾಂಪಸ್ ಸುದ್ದಿ

ಮುಸ್ಸಂಜೆಯ ಕ್ರಿಕೆಟ್ ಮೈದಾನ…

ಆಟ, ಆಟ, ಆಟ ಅಬ್ಬಬ್ಬಾ ಈ ಎರಡು ಪದವನ್ನು ಕೇಳಿದರೆ ಸಾಕು ಒಂದಿಷ್ಟು ಹುಮ್ಮಸ್ಸು ಯುವಜನರಲ್ಲಿ ಮೂಡುತ್ತದೆ. ಅದರಲ್ಲೂ ಕ್ರಿಕೆಟ್, ಕಬಡ್ಡಿಯಂತಹ ಆಟ ಆಡಲು ಹುಡುಗರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಕ್ರಿಕೆಟ್ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲಿಯೂ ಹುಡುಗರಿಗಂತೂ ಕೇಳೋದೇ ಬೇಡ, ಕಾಲೇಜಿಗೆ ಬಂದಾಕ್ಷಣ ಹುಡುಗರ ಕಣ್ಣೋಟ ಹೋಗೋದೇ ಮೈದಾನದ ಕಡೆಗೆ.

ಯಾರಾದರೂ ಕ್ಲಾಸಿನ ಗೆಳೆಯರಿದ್ದಾರೆ ಎಂದರೆ ಸಾಕು. ಬಹುಶಃ ಫಸ್ಟ್ ಹವರ್ ಇಲ್ಲ ಎಂದುಕೊಂಡೆ ಕ್ಲಾಸಿಗೆ ಎಂಟ್ರಿಕೊಡುವ ಮೊದಲು ಗ್ರೌಂಡ್ ಗೆ ಹೆಜ್ಜೆ ಇಡೋದು ಹೆಚ್ಚು. ಕೆಲವೊಮ್ಮೆ ಲೆಕ್ಚರ್ಸ್ ಗಳ ಕಣ್ತಪ್ಪಿಸಿ ದಿನವಿಡೀ ಗ್ರೌಂಡ್ ನಲ್ಲಿ ಆಟ ಆಡೋರಿಗೇನು ಕಮ್ಮಿ ಇಲ್ಲ. ಜ್ಯೂನಿಯರ್ಸ್ ಇರಲಿ ಸೀನಿಯರ್ಸ್ ಇರಲಿ, ಬ್ಯಾಟ್ ಬಾಲ್ ಹಿಡಿದುಕೊಂಡು ಅಬ್ಬರಿಸಲು ರೆಡಿ ಇರುತ್ತಾರೆ.

ಕ್ಲಾಸ್ ಫ್ರೀ ಇದೆ ಎಂದರೆ ಕೇಳಬೇಕೆ? ಹುಡುಗರ ಕಾಲುಗಳು ತರಗತಿಯಲ್ಲಿ ನಿಲ್ಲೋದೇ ಇಲ್ಲ.. ಬಾ ಮಗಾ ಒಂದು ಮ್ಯಾಚ್ ಆಡಿ ಬರೋಣ ಎಂದು ತನ್ನ ಇಡೀ ಸೈನ್ಯವನ್ನೂ ಗ್ರೌಂಡ್ ನತ್ತ ಕರೆದುಕೊಂಡು ಹೋಗೋದು ಹುಡುಗರ ಜಾಯಾಮಾನ. ಶಾಲೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಮುಸ್ಸಂಜೆ ರಿಲಾಕ್ಸ್ ಆಗಲು ಮೈದಾನದ ಕಡೆಗೆ ಸದ್ದಿಲ್ಲದೇ ಹೊರಡುವಾಗ ಅವರಿಗೆ ಹೊತ್ತು ಕಳೆಯೋದು ತಿಳಿಯೋದೇ ಇಲ್ಲ.

ಬಾಲ್ಯದಲ್ಲಿಯೆ ಸಣ್ಣ ಬ್ಯಾಟ್ ಬಾಲ್ ಹಿಡಿದುಕೊಂಡು ಮನೆಯಂಗಳದಲ್ಲಿ ಆಟವಾಡೋ ಹುಡುಗರಿಗೆ ದೊಡ್ಡವರಾಗುತ್ತಲೇ ಕ್ರಿಕೆಟ್ ಮೇಲಿನ ಹುಚ್ಚು ಪ್ರೀತಿ ಸಹಜ. ಅದರಲ್ಲೂ ಈ ಗಲ್ಲಿ ಕ್ರಿಕೆಟ್ ಎಂದರೆ ಒಂಥರ ವಿಭಿನ್ನ, ಸರಿಯಾಗಿ ಬುದ್ಧಿ ಬರದ ವಯಸ್ಸಿನಲ್ಲಿ ಆಡೋ ಕ್ರಿಕೆಟ್ ಆಟವನ್ನಂತು ವರ್ಣಿಸಲೂ ಅಸಾಧ್ಯ. ನಮ್ಮದೇ ರೂಲ್ಸ್ ಗಳು ತುಂಬಿದ ಆಟದಲ್ಲಿ ಆಡೋದೆ ಒಂದು ಮಜಾ. ಬ್ಯಾಟ್ ನ ವಾರಸುದಾರನೇ ಮೊದಲು ಬ್ಯಾಟ್ ಮಾಡೋದು ನಿಯಮ, ಫಸ್ಟ್ ಬಾಲ್ ಎಲ್ಲಿಯಾದರು ಔಟ್ ಆದರೆ ಟ್ರಯಲ್ ಬಾಲ್ ಎಂದು ಆಟವನ್ನೂ ಮುಂದುವರಿಸುವ ಆಟಗಾರರಿಗೇನು ಕಮ್ಮಿ ಇರಲಿಲ್ಲ.

ಮೊದಲ ಮೂರು ಚೆಂಡುಗಳಿಗೆ ಬಾರಿಸದಿದ್ದರೆ ಆತ ಔಟ್ ಎನ್ನುವ ಮನಸ್ಸುಗಳು… , ಒಂದು ಸಿಕ್ಸ್ ಹೊಡೆದರೆ ಸಾಕು ಹೀರೋರೇಂಜ್ ಗೆ ಹೋಗಿಬಿಡುತ್ತಾರೆ. ಅಕಸ್ಮಾತ್ ಆಗಿ ಬ್ಯಾಟ್ಸಮನ್ ಚೆಂಡನ್ನು ಬೌಂಡರಿ ಲೈನ್ ದಾಟಿ ಹೊಡೆದು ಚೆಂಡು ಕಾಣೆಯಾದರೆ, ಆತನೇ ಹೊಸ ಚೆಂಡು ಖರೀದಿಸೋದು ಆತನ ಜವಾಬ್ದಾರಿ.

ಆ ಗ್ರೌಂಡ್ ನಲ್ಲಿ ರನ್ ಮಳೆ ಸುರಿಸುತ್ತಾರೊ ಇಲ್ವೋ ಗೊತ್ತಿಲ್ಲ ಆದರೆ ಮನೆಯಲ್ಲಂತು ಅಮ್ಮನ ಕೈಯಿಂದ ಸಾವಿರ ಬೈಗಳು ತಿನ್ನೋದು ಮಾತ್ರ ತಪ್ಪೋದಿಲ್ಲ. ಅಂತೂ ಬಾಲ್ಯದ ಗಲ್ಲಿ ಕ್ರಿಕೆಟ್ ನಲ್ಲಿ ಇರುವ ಖುಷಿಯನ್ನು ವರ್ಣಿಸಲು ಅಸಾಧ್ಯವೇ ಸರಿ. ಕಳೆದು ಹೋದ ಬಾಲ್ಯಕ್ಕೆ ಸರಿಸಾಟಿಯೇ ಇಲ್ಲ.

-ನೀತಾ ರವೀಂದ್ರ
ದ್ವಿತೀಯ ಪತ್ರಿಕೋದ್ಯಮ
ವಿವೇಕಾನಂದ ಕಾಲೇಜ್ ಪುತ್ತೂರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸ್ನೇಹಿತರ ದಿನದಂದು ನೆನಪಾದ ‘ನಾನು ಮತ್ತು ಅವಳು …’

Upayuktha

ಪರಿಶ್ರಮ, ಛಲವಿದ್ದರೆ ಭಾರತೀಯ ಸೇನೆಯಲ್ಲಿ ಉದ್ಯೋಗ ಸುಲಭ: ಹವ್ಯಾಸ್ ಗೌಡ

Upayuktha

ಸೈನಿಕರಿಗೆ ಗೌರವ ನೀಡುವುದು ನಮ್ಮ ಕರ್ತವ್ಯ : ಡಾ. ಮನಮೋಹನ ಎಂ

Upayuktha