ರಾಜ್ಯ ಸಿನಿಮಾ-ಮನರಂಜನೆ

ಮುಂದಿನ ತಿಂಗಳು ಬಿಡುಗಡೆಗೊಳ್ಳಲಿದೆ ಮಕ್ಕಳ ಚಲನಚಿತ್ರ “ರಾಜಮಾರ್ಗ”

ಮೈಸೂರು:  ‘ರಾಜಮಾರ್ಗ’ ಎನ್ನುವ ಹೆಸರಿನ ಮಕ್ಕಳ ಚಲನಚಿತ್ರ ಮುಂದಿನ ತಿಂಗಳು ಬಿಡುಗಡೆಗೆ ತಯಾರಾಗಿದೆ.

ಹಳ್ಳಿಯೊಂದರಲ್ಲಿ ವಾಸಿಸುವ ವಿಶೇಷ ಚೇತನ ಹುಡುಗ ಶಾಲೆಯಲ್ಲಿ ಅನುಭವಿಸುವ ಅವಮಾನ ಮತ್ತು ಬೆದರಿಕೆಯ ಕಥೆ ಈ ಚಿತ್ರ ದಲ್ಲಿ ಒಳಗೊಂಡಿದೆ.

ಈ ಮಕ್ಕಳ ಚಲನಚಿತ್ರ ವೂ 2 ಗಂಟೆ 12 ನಿಮಿಷಗಳ ಕಾಲ ಚಿತ್ರ ನಿಸರ್ಗ ಸಿರಿ ಬ್ಯಾನರ್ ಅಡಿಯಲ್ಲಿ ನವೆಂಬರ್ ತಿಂಗಳಲ್ಲಿ ತೆರೆ ಮೇಲೆ ಮೂಡಿ ಬರಲಿದೆ.

ಮೈಸೂರು, ಕೂರ್ಗ್, ಶ್ರೀನಿವಾಸ ಸಾಗರ ಹಾಗೂ ಚಿಕ್ಕಬಳ್ಳಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದೆ.

ಮೈಸೂರಿನ ಪ್ರಿಯಾ ದರ್ಶನ್ (12) ವರ್ಷದ ಬಾಲಕ ಸಿನಿಮಾದಲ್ಲಿ ರಾಜುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಚಿತ್ರೀಕರಣ ಮಾಡುವ ಮೊದಲೇ ಐದು ದಿನಗಳ ಕಾಲ ತರಬೇತಿ ಪಡೆದಿದ್ದನು. ಹಾಗೆಯೇ ಇದು ನನಗೆ ಹೊಸ ಅನುಭವವಾಗಿದೆ ಎಂದು ರಾಜು ಸಂತಸ ವ್ಯಕ್ತಪಡಿಸಿದ್ದಾನೆ.

ಡಾ. ವಿಷ್ಣು ಪ್ರಿಯಾನ್ ಈ ಚಿತ್ರದ ನಿರ್ಮಾಪಕರಾಗಿದ್ದು, ಪ್ರಿಯಾದರ್ಶನ್, ಭೈರವಿ, ಡಾ. ಕೆ. ರಮಾನಂದ್, ವಿಷ್ಣು ಪ್ರಿಯಾ, ಅಮೃತ ಮತ್ತಿತರರು ಈ ಚಿತ್ರದಲ್ಲಿದ್ದಾರೆ.

ವಿನು ಮಾನಸು, ಸಂಗಿತ ಸಂಯೋಜನೆ ಮಾಡಿದ್ದಾರೆ. ಚಲನಚಿತ್ರ ಕ್ಕೆ ವಾಸನ್ ಅವರ ಛಾಯಾಗ್ರಹಣವಿದೆ.

 

Related posts

ಮಧ್ಯಪ್ರದೇಶ: ಬಿಜೆಪಿ ಸಂಸದ ಕಾಂಡ್ವಾ ನಂದಕುಮಾರ್ ಸಿಂಗ್ ಚೌಹಾಣ್ ನಿಧನ

Harshitha Harish

ಹಲ್ಲೆ ಪ್ರಕರಣ: ಮೂವರು ಕಾರ್ಯಕರ್ತರ ಬಂಧನ

Harshitha Harish

ದ್ವಿತೀಯ ಪಿಯುಸಿ ಫಲಿತಾಂಶದ ನಾಳೆ (ಜುಲೈ 14) ಬೆಳಗ್ಗೆ 11:30ಕ್ಕೆ ಪ್ರಕಟ: ಸಚಿವ ಸುರೇಶ್ ಕುಮಾರ್

Upayuktha