ದೇಶ-ವಿದೇಶ

ಸೈಬರ್ ಯುದ್ಧಕ್ಕೆ ತಯಾರಾದ ಚೀನಾ..!

ನವದೆಹಲಿ : ದೇಶದ ಗಡಿಯಲ್ಲಿ ನಿರಂತರವಾಗಿ ದಾಳಿ ನಡೆಸಲು ಯತ್ನಿಸುತ್ತಿರುವ ಕುತಂತ್ರಿ ಚೀನಾ ಇದೀಗ ಸೈಬರ್ ಯುದ್ದಕ್ಕೆ ಸಂಚು ನಡೆಸುತ್ತಿರುವುದು ತಿಳಿದು ಬಂದಿದೆ. ಚೀನಾ ದೇಶದ ಈ ಕುತಂತ್ರ ಬಯಲಾಗಿದ್ದು, ಮೋದಿ‌ ಸೇರಿ ಹತ್ತು ಸಾವಿರ ಗಣ್ಯರ ಮಾಹಿತಿಯನ್ನು ಟಾರ್ಗೆಟ್ ಮಾಡಿ ಮಾಹಿತಿಯನ್ನು ಕದಿಯುತ್ತಿರುವುದು ವಿಚಾರ ಬಹಿರಂಗವಾಗಿದೆ.

ಸೈಬರ್ ಕಳ್ಳರು ಟಾರ್ಗೆಟ್ ಮಾಡಿರುವ ಗಣ್ಯರ ವಿವರ:

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಭಾರತದ ಸುಮಾರು 10 ಸಾವಿರ ಗಣ್ಯರನ್ನು ಟಾರ್ಗೆಟ್ ಮಾಡಿ ಚೀನಾದ ಸೈಬರ್ ಕಳ್ಳರು ಮಾಹಿತಿ ಕದಿಯುತ್ತಿದ್ದು. 24 ಮುಖ್ಯಮಂತ್ರಿಗಳು ಹಾಗೂ 350 ಸಂಸದರು ಮತ್ತು 700 ರಾಷ್ಟ್ರೀಯ ನಾಯಕರು ಮಾಹಿತಿಯನ್ನು ಪಡೆಯಲು‌ ಸಂಚು ಮಾಡಿರುವುದು ತನಿಖೆ ವೇಳೆ ಖಚಿತವಾಗಿದೆ.

ಈ ಪಟ್ಟಿಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಹೆಸರು ಕೂಡ ಇದೆ. ಅಲ್ಲದೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಪಂಜಾಬ್ ಸಿಎಂ ಅಮರೀಂದರ್ ಸಿಂಗ್, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕೂಡ ಸೈಬರ್ ಖದೀಮರ ಟಾರ್ಗೆಟ್ ಲಿಸ್ಟ್‌ನಲ್ಲಿ ಇದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಹಾಗೇ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ರವಿ ಶಂಕರ್ ಪ್ರಸಾದ್, ನಿರ್ಮಲಾ ಸೀತಾರಾಮನ್, ಪಿಯೂಶ್ ಗೋಯಲ್, ಸ್ಮೃತಿ ಇರಾನಿ ಹೆಸರು ಕೂಡ ಚೀನಿ ಸೈಬರ್ ಗ್ಯಾಂಗ್‌ನ ಟಾರ್ಗೆಟ್ ಲಿಸ್ಟ್‌ನಲ್ಲಿ ಕಂಡುಬಂದಿದೆ.

ಝೆನ್‌ಹುವಾ ಡೇಟಾ ಇನ್ಫಾರ್ಮೇಷನ್ ಟೆಕ್ನಾಲಜಿ ಕಂಪನಿ ಲಿಮಿಟೆಡ್’ ಮುಖಾಂತರ ಭಾರತದ ಸುಮಾರು 10 ಸಾವಿರ ಗಣ್ಯರನ್ನು ಟಾರ್ಗೆಟ್ ಮಾಡಲಾಗಿದೆ. ಶೆನ್‌ಝೆನ್ ಮೂಲದ ಕಂಪನಿ ನಿರಂತರವಾಗಿ ಗೂಢಚಾರಿಕೆ ನಡೆಸುತ್ತಿದ್ದು, ಇತರ ದೇಶಗಳ ಮೇಲೆ ಕಣ್ಣಿಟ್ಟಿದ್ದು ಇದೇ ಕೆಲಸ ಈ ಕಂಪನಿಯಾದ್ದಾಗಿದೆ. ಭಾರತದ ಗಣ್ಯರ ಡೇಟಾ ಸಂಗ್ರಹಿಸುತ್ತಿರುವ ಕಂಪನಿ ಅದನ್ನು ಚೀನಾ ಸರ್ಕಾರಕ್ಕೆ ರವಾನಿಸುತ್ತಿರುವುದು ಇದೀಗ ಖಚಿತವಾಗಿದೆ.

Related posts

ದಂಗೆಕೋರರ ಆಸ್ತಿ ಮುಟ್ಟುಗೋಲು: ಯೋಗಿ ಸರಕಾರದ ದಿಟ್ಟ ಕ್ರಮ

Upayuktha

ಬಿಜೆಪಿಯಿಂದ ಕಲಿತ ಪಾಠ: ‘ರಾಷ್ಟ್ರೀಯತೆ’ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ತರಬೇತಿ

Upayuktha

ಆರೋಗ್ಯ ಸಮಸ್ಯೆಯಿಂದ ಪುನಃ ಏಮ್ಸ್ ಆಸ್ಪತ್ರೆ ದಾಖಲಾದ ಕೇಂದ್ರ ಗೃಹ ಸಚಿವ

Harshitha Harish

Leave a Comment

error: Copying Content is Prohibited !!