ಚಂದನವನ- ಸ್ಯಾಂಡಲ್‌ವುಡ್

ಮೇಘನಾ ರಾಜ್ ಮನೆಯಲ್ಲಿ ಮಗುವಿನ ತೊಟ್ಟಿಲು ಶಾಸ್ತ್ರದ ಕಾರ್ಯಕ್ರಮ

ಬೆಂಗಳೂರು: ಚಿರು ಅವರನ್ನು ಕಳೆದುಕೊಂಡು ಬೇಸರದಲ್ಲಿ ಕುಟುಂಬ ಕ್ಕೆ ಇದೀಗ ಸಂತಸ ಬಂದಿರುವುದು ಪುಟ್ಟ ಕಂದಮ್ಮ ನಿಂದ ಮೇಘನಾ ಮತ್ತು ಚಿರುನ ಮುದ್ದು ಮಗುವಿನ ಜನನ ದಿಂದ ಕುಟುಂಬಸ್ಥ ರಲ್ಲಿ ಸಂತಸ ಮನೆ ಮಾಡಿದೆ.


ಮೇಘನಾ ಕಳೆದ ತಿಂಗಳ ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದರು. ಇದೀಗ 20 ದಿನಗಳ ನಂತರ ಮೇಘನಾ ಮನೆಯಲ್ಲಿ ತೊಟ್ಟಿಲ ಶಾಸ್ತ್ರದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ನಾಳೆ ನವೆಂಬರ್ 12ರಂದು ಬೆಂಗಳೂರಿನ ಜೆಪಿ ನಗರದ ನಿವಾಸದಲ್ಲಿ ಮುದ್ದಾದ ಮಗುವಿಗೆ ತೊಟ್ಟಿಲ ಶಾಸ್ತ್ರ ಸಮಾರಂಭ ನಡೆಯಲಿದೆ. ಸರಿಯಾಗಿ 20 ದಿನಗಳಿಗೆ ಮೇಘನಾ ರಾಜ್ ಅವರ ಮುದ್ದು ಕಂದಮ್ಮನ ತೊಟ್ಟಿಲ ಶಾಸ್ತ್ರ ಮಾಡಲು ಎರಡೂ ಕುಟುಂಬದವರು ನಿರ್ಧರಿಸಿದ್ದಾರೆ.

ತೀರ ಖಾಸಗಿಯಾಗಿ ನಡೆಯುವ ತೊಟ್ಟಿಲ ಶಾಸ್ತ್ರದ ಸಂಭ್ರಮದಲ್ಲಿ ಮೇಘನಾ ರಾಜ್ ಕುಟುಂಬ ಮತ್ತು ಸರ್ಜಾ ಕುಟುಂಬದವರು ಹಾಗೂ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ.


ಅಣ್ಣನ ಮಗುವಿಗಾಗಿ ಧ್ರುವ 10 ಲಕ್ಷದ ವೆಚ್ಚದಲ್ಲಿ ಮಗು ಹುಟ್ಟುವ ಮೊದಲೇ ಬೆಳ್ಳಿ ತೊಟ್ಟಿಲು ಮಾಡಿಸಿದ್ದಾರೆ.

ಅಚ್ಚರಿ ಎಂದರೆ ಮೇಘನಾ ಮಗನಿಗೆ ಏನೆಂದು ಹೆಸರಿಡಲಿದ್ದಾರೆ ಎನ್ನುವುದು ಕುತೂಹಲ ಆಭಿಮಾನಿಗಳಲ್ಲಿ ಮೂಡಿಸಿದೆ.

Related posts

ಚೆಕ್ ಬೌನ್ಸ್ ಪ್ರಕರಣ: ಹಿರಿಯ ನಟಿ ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Harshitha Harish

ಜೈಲು ಸೇರಿದ ಸಂಜನಾ ಗಲ್ರಾನಿ ಇಂದು ಹುಟ್ಟುಹಬ್ಬ

Harshitha Harish

ನಟಿ ಖುಷ್ಬೂ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Harshitha Harish