ಪ್ರತಿಭೆ-ಪರಿಚಯ ಲೇಖನಗಳು

ಚಿತ್ರ ಸಂದೇಶ

ಈ ಬದುಕ್ಕೊಂದು ಕೌತುಕ..ದಿನಾ ಹಗಲು-ರಾತ್ರಿ…ಮಿಂಚು ಸಿಡಿಲು ಗಾಳಿ…ಅಕಾಲ ಮಳೆ…ರೈತರ ಬೆಳೆ ನಾಶ…ಬೆಳೆದ ಬೆಳೆಗೆ ಬೆಲೆಯಿಲ್ಲ…ಭರಪೂರಾ ಆಶ್ವಾಸನೆ.ಆಕಾಶನೋಡಿ ಕಾಲ ಕಳೆವರೆಷ್ಟೋ…ಕಾಡುವ ವೈರಸ್ಸ್ ಕಾಟಕೆ ಮುದುಡಿ ಕೂತವರೆಷ್ಟೋ…ಅಂತೂ ಇಂತೂ ಬದುಕಿನ ಗಾಡಿ ಮುಂದಕೆ ಸಾಗುತ್ತದೆ.


      ಈ ಪರಿಸರದಲ್ಲಿ ನಿಸ್ವಾರ್ಥವಾಗಿ ಸದ್ದಿಲ್ಲದೆ ತಮ್ಮ ಕಾಯಕ ಮಾಡುವ ಜೀವಕೋಟಿಗಳೆಷ್ಟೋ…ಅದರ ಲಾಭ ಪಡೆವವರು ಯಾರು ? ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಮಾಡದೆ ನಮ್ಮದೇ ಲೋಕದಲ್ಲಿ ಭವನಗಳ ನಿರ್ಮಿಸಿ ಭುವನ ಆಳುವ ರಾಜರಾಗುವ ಕನಸ ಬಾನಲ್ಲಿ ಹಾರಾಡುತ್ತೇವೆ.
      ಇಂದು ಈ ಭುವನ ಸಮೃದ್ಧಿಯಾಗಿರಬೇಕಾದರೆ…ಹಸಿರು ಎಲ್ಲಾದರೂ ಉಳಿದಿದ್ದರೆ..ಹೂವು ಮೊಗ್ಗು,ಹಿಂಗಾರ ಅರಳಿ ಅಡಕೆ,ತೆಂಗು,ಹಣ್ಣು-ಹಂಪಲು,ಧಾನ್ಯ..ಇತ್ಯಾದಿ ನಮ್ಮ ಹಸಿವು ಇಂಗಿಸಲು ಬದುಕು ಸಾಗಿಸಲು ಬೇಕೆಂದಾದರೆ..ಪರಾಗಸ್ಪರ್ಶಕೆ ಮೂಲಕಾರಣವಾದ ಜೇನುನೊಣಗಳ ನಾವು ಮರೆತರೆ ಉಳಿದೀತೇ ಈ ಧರೆ..‌???
      ಪ್ರವೀಣ್ ಕಕ್ಕಿಂಜೆ ಉಜಿರೆ ಮೂಡಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ  ವಾಚನಾಲಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಬಹುಮುಖ ಪ್ರತಿಭೆಯ ಈ ಯುವ ಕನಸುಗಾರ ಚಿತ್ರಕಲಾ ಪ್ರವೀಣ.ದೈವ ಸೇವಕರೂ ಹೌದು.ನಮ್ಮ ಮಧುಪ್ರಪಂಚದ ಆಶಯ ಕೇಳಿ ತಿಳಿದ ಪ್ರವೀಣ್ ನಮಗಾಗಿ ಒಂದು ಸುಂದರ ಸಂದೇಶ ಭರಿತ ಚಿತ್ರ ಕಳಿಸಿರುತ್ತಾರೆ.
   *”ಜೇನನ್ನು ಹೂವಿನಿಂದ ಸ್ವಾಗತ ಮಾಡೋಣ…ಗಿಡ-ಮರ ಬೆಳೆಸಿ ಹಸಿರುಗಳ ನಡುವೆ ಬಾಳೋಣ.‌..ಅದೆಷ್ಟೋ ದೂರ ಹೂವನರಸಿ ಹಾರಿ ಮಧು ಹೀರಿ ಗೂಡು ಸೇರಿ ಅತ್ಯಂತ ಶಿಸ್ತು ಸಮಯ ಪ್ರಜ್ಞೆಯೊಂದಿಗೆ ಗೂಡುಗಳಲಿ ಎರಿತುಂಬ ಜೇನು ಶೇಖರಿಸುವ ಅವುಗಳ ಕಾರ್ಯವನ್ನು.. ಯಾವ ಇಂಜಿನಿಯರಿಂದಲೂ ನಿರ್ಮಿಸಲು  ಸಾಧ್ಯವಿಲ್ಲ.ಈಗ ಅವುಗಳ ಬದುಕೂ ಸಂಕಷ್ಟದಲ್ಲಿದೆ..ಅಕಾಲಿಕ ಮಳೆ ವಾತಾವರಣ ವೈಪರೀತ್ಯ ಕಾಡುವ ನಾನಾ ರೋಗಗಳ ಕಾರಣ ಸಂಸಾರ ಸುಗಮ ಸಾಗುವುದಿಲ್ಲ..‌ವಲಸೆ ಹೋಗುತ್ತವೆ…ಇಲ್ಲ ಮರಣ ಹೊಂದುತ್ತವೆ.ನಾವಾದರೋ ಇದ್ಯಾವುದರ ಪರಿವೇ ಇಲ್ಲದೆ ಭವನವಾಸಿಗಳಾಗುತ್ತೇವೆ.ಕಾಂಕ್ರೀಟು ಕಾಡುಗಳ ನಿರ್ಮಿಸಿ ಏನೂ ಆಗಿಲ್ಲವೆಂದು ಮತ್ತೆ ಅದೇ ಕನಸಿನ ಭ್ರಮಾಲೋಕದಲಿ ವಿಹರಿಸುತ್ತೇವೆ…ಜೇನುಗಳಿಂದ ಲಾಭ ಪಡೆದ ನಾವು ಅವುಗಳನ್ನು ವಿಧವಿಧ ಹೂವುಗಳಿಂದ ಸ್ವಾಗತಿಸೋಣ…ಹೂ ಗಿಡಗಳ ಬೆಳೆಸಿ ಆಹಾರ ನೀಡುವ ಪುಣ್ಯಕಾರ್ಯ ಮಾಡೋಣ..ನಾವೂ ಬದುಕೋಣ..ಅವುಗಳ ಬದುಕಲು ಬಿಡೋಣ.ಪರಿಸರ ಪ್ರೇಮಿಗಳಾಗೋಣ…”*
     

*✍️*ನಾರಾಯಣ ರೈ ಕುಕ್ಕುವಳ್ಳಿ.*

Related posts

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-9

Harshitha Harish

ಮಧ್ಯಾಹ್ನದ ಕಿರು ನಿದ್ರೆಯ ಲಾಭಗಳು

Upayuktha

ಬಡಗು ತಿಟ್ಟಿನ ಮೇರು ಕಲಾವಿದ ಆಜ್ರಿ ಗೋಪಾಲ ಗಾಣಿಗರ ಮುಡಿಗೆ ಸಾಲಿಗ್ರಾಮ ಮೇಳದ ಕಲಾ ಬಾಂಧವ್ಯ ಪ್ರಶಸ್ತಿ

Upayuktha