ನಗರ ಸ್ಥಳೀಯ

ಸ್ವಚ್ಛತೆಯಿಂದಲೇ ಆರೋಗ್ಯ ವೃದ್ಧಿ: ಡಾ|| ಚೂಂತಾರು

ಮಂಗಳೂರು: ಪರಿಸರದ ಸ್ವಚ್ಛತೆ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ. ಪರಿಸರ ಸ್ವಚ್ಛವಾಗಿದ್ದರೆ ಶುದ್ಧ ಗಾಳಿ, ನೀರು, ಬೆಳಕು ದೊರಕುತ್ತದೆ. ಸ್ವಚ್ಛ ಪರಿಸರದಿಂದ ಪ್ರಜೆಗಳ ಆರೋಗ್ಯ ವೃದ್ಧಿಸುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ನಮ್ಮ ಜವಾಬ್ದಾರಿ ಅರಿತು ನಿರ್ವಹಿಸಲ್ಲಿ ಸುದೃಢ ಮತ್ತು ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಮತ್ತು ಪೌರರಕ್ಷಣಾ ಪಡೆಯ ಮುಖ್ಯಪಾಲಕರಾದ ಡಾ|| ಮುರಲೀ ಮೋಹನ ಚೂಂತಾರು ಅಭಿಪ್ರಾಯಪಟ್ಟರು.

ಜನವರಿ 01ರ ಶುಕ್ರವಾರ ದ.ಕ. ಜಿಲ್ಲಾ ಗೃಹರಕ್ಷಕ ದಳ, ಪೌರರಕ್ಷಣಾ ಪಡೆ ಮತ್ತು ಲಯನ್ಸ್ ಕ್ಲಬ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ನಗರದ ಮೇರಿಹಿಲ್‍ನಲ್ಲಿರುವ ಇನ್‍ಫ್ಯಾಂಟ್ ಜೀಸಸ್ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಹೊಸ ವರುಷದ ಸಂಭ್ರಮಾಚರಣೆ ಅಂಗವಾಗಿ ಸ್ವಚ್ಛತಾ ಆಂದೋಲನ ನಡೆಯಿತು. ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಕೆ. ಕೃಷ್ಣಾನಂದ ಪೈ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹೊಸ ವರ್ಷವನ್ನು ಸ್ವಚ್ಛತಾ ಆಂದೋಲನದಿಂದ ಆರಂಭಿಸಲು ಬಹಳ ಸಂತಸ ಮತ್ತು ಹೆಮ್ಮೆಯಾಗುತ್ತಿದೆ ಮತ್ತು ಲಯನ್ಸ್ ಕ್ಲಬ್ ಸದಸ್ಯರು ಸಮಾಜದ ಆರೋಗ್ಯಪೂರ್ವಕವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ನುಡಿದರು.

ಲಯನ್ಸ್ ಕ್ಲಬ್‍ನ ಸದಸ್ಯರಾದ ಹೇಮ ರಾವ್, ರಾಜೇಶ್ ಹೇರಿ, ನಿರ್ಮಲಾ ಹೇರಿ, ನ್ಯಾನ್ಸಿ ಮಸ್ಕರೇನ್ಹಸ್, ಪ್ರಿಂತಿ ರೊಡ್ರಿಗಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಆರೋಣ್ ಹೇರಿ, ಎಡ್ರಿಯಾ ಹೇರಿ, ಕ್ರಿಸ್ಟನ್ ಹೇರಿ, ರಿಯಾನ್ ರೊಡ್ರಿಗಸ್, ರಾಯನ್ ರೊಡ್ರಿಗಸ್ ಉಪಸ್ಥಿತರಿದ್ದರು.

ಇನ್‍ಫ್ಯಾಂಟ್ ಜೀಸಸ್ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಸುಜ್ಯೋತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಸ್ಟರ್ ಜೆನಿಟಾ ವಂದನಾರ್ಪಣೆ ಮಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸುನಿಲ್, ರಮೇಶ್ ಭಂಡಾರಿ, ಮಹೇಶ್, ದಿವಾಕರ, ದಿವ್ಯಾ, ಜಯಂತಿ ಮುಂತಾದವರು ಉಪಸ್ಥಿತರಿದ್ದರು. ಸುಮಾರು 25 ಮಂದಿ ಗೃಹರಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕೇರಳ ರಾಜ್ಯ ಮಟ್ಟದ ವಿಜ್ಞಾನ ಮೇಳದಲ್ಲಿ ‘ಎ’ ಗ್ರೇಡ್ ಗಳಿಸಿದ ಶೇಣಿ ಶಾಲಾ ವಿದ್ಯಾರ್ಥಿಗಳು

Upayuktha

ಅಬ್ಬಕ್ಕ ಪ್ರಶಸ್ತಿಗೆ ಮಹಿಳಾ ಸಾಧಕರಿಂದ ಅರ್ಜಿ ಅಹ್ವಾನ

Upayuktha

ಪುತ್ತೂರು: ಜ. 23ಕ್ಕೆ ನಿರಂಜನ ಪ್ರಶಸ್ತಿ, ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ

Upayuktha