ಕ್ಷೇತ್ರಗಳ ವಿಶೇಷ ಪ್ರಮುಖ ರಾಜ್ಯ

ಉಡುಪಿ: ಕರಂಬಳ್ಳಿ ಬ್ರಹ್ಮಕಲಶೋತ್ಸವಕ್ಕೆ ಇಂದು ಬರಲಿದ್ದಾರೆ ಮುಖ್ಯಮಂತ್ರಿ

ಉಡುಪಿ: ಅತ್ಯಂತ ಪ್ರಾಚೀನ ದೇವಗಳಗಳಲ್ಲಿ ಒಂದಾಗಿರುವ ಕರಂಬಳ್ಳಿ ಶ್ರೀ ವೇಂಕಟರಮಣ ದೇವಸ್ಥಾನದಲ್ಲಿ ಸೋಮವಾರ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ನಾಡಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಆಗಮಿಸಿ ಸಂಜೆ ನಡೆಯುವ ಧರ್ಮಸಭೆಯಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರರು ಹಾಗೂ ಶಾಸಕರಾದ ಕೆ. ರಘುಪತಿ ಭಟ್‌ ತಿಳಿಸಿದರು.

ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾಹಿತಿ ನೀಡಲು ಇಂದು ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕ್ಷೇತ್ರದ ಇತಿಹಾಸದ ಪುಟಗಳಲ್ಲಿ ಇದೊಂದು ಚಾರಿತ್ರಿಕ ಸಂದರ್ಭವಾಗಿ ದಾಖಲಾಗಲಿದೆ.

ಈ ಹಿಂದೆ 2004 ರಲ್ಲಿ ಮತ್ತು‌ 2010 ರಲ್ಲಿ ವಿವಿಧ ಜೀರ್ಣೋದ್ಧಾರ ಕಾರ್ಯಗಳನ್ನು ರಾಜ್ಯ ಸರಕಾರ ಮತ್ತು ಊರ ಪರವೂರ ಭಕ್ತಾಭಿಮಾನಿಗಳ ಸಹಕಾರದಲ್ಲಿ ನೆರವೇರಿಸಿ ವೈಭವದ ಬ್ರಹ್ಮಕಲಶೋತ್ಸವವನ್ನು ನೆರವೇರಿಸಲಾಗಿತ್ತು. ಅದರಲ್ಲೂ 2010ರಲ್ಲಿ ಬ್ರಹ್ಮಕಲಶೋತ್ಸವ ದೊಂದಿಗೆ ನಡೆದ ತಿರುಪತಿ ಶ್ರೀನಿವಾಸ ಕಲ್ಯಾಣೋತ್ಸವವು ಒಂದು ಅಪೂರ್ವ ದಾಖಲೆಯಾಗಿದೆ.

ಈ ಬಾರಿ ಸುಮಾರು 90 ಲಕ್ಷ ರೂ ವೆಚ್ಚದಲ್ಲಿ ಪರಿವಾರ ದೇವರುಗಳಾದ ಶ್ರೀ ಗಣಪತಿ,‌ ಶ್ರೀ ಉಮಾಮಹೇಶ್ವರ, ಶ್ರೀ ಆಂಜನೇಯ ಗುಡಿಗಳು ಹಾಗೂ ಪರಿವಾರ ದೈವಗಳಾದ ರಕ್ತೇಶ್ವರಿ ನಂದಿಗೋಣ, ಬೊಬ್ಬರ್ಯ, ಪಂಜುರ್ಲಿ, ಬೈಕಾಡ್ತಿ ಗುಡಿಗಳನ್ನು ನೂತನವಾಗಿ ನಿರ್ಮಿಸಲಾಗಿದೆ.‌

ಶ್ರೀದೇವಳದಲ್ಲಿ ನಿತ್ಯದ ಹಾಗೂ ಕಾಲಾವಧಿ ಧಾರ್ಮಿಕ ವಿಧಿ ವಿಧಾನಗಳ ಜೊತೆಗೆ ಸಮಾಜಮುಖಿಯಾದ ಅನೇಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟು ಒಂದು ಮಾದರಿ ಶ್ರದ್ಧಾಕೇಂದ್ರವಾಗಿ ರೂಪಿಸಲು ನಿರಂತರ ಶ್ರಮಿಸಲಾಗುತ್ತಿದೆ.

ದೇವಳದ ಚಾವಡಿಯಲ್ಲಿ ಮಕ್ಕಳಿಗಾಗಿ ಯಕ್ಷಗಾನ ಭರತನಾಟ್ಯ ಕರಾಟೆ, ಯೋಗ, ಭಜನೆ ತರಗತಿಗಳು ಆರೋಗ್ಯ ಶಿಬಿರಗಳು, ಕೃಷಿ ಸಂವಾದಗಳು ಪ್ರಸಿದ್ಧ ವಿದ್ವಾಂಸರಿಂದ ಸ್ವಚ್ಛತಾ ಜಾಗೃತಿ ಚಿಂತನೆಗಳು ಸಪ್ತಾಹ ಹಾಗೂ ಅನೇಕ ಕಲಾಕಾರ್ಯಕ್ರಮಗಳು ನಡೆಯುತ್ತಿವೆ.

2004 ರಲ್ಲಿ ನಡೆದ ಪ್ರಥಮ ಹಂತದ ನವೀಕರಣದ ಸಮಯ ಹಳೆಯ ಗರ್ಭಗುಡಿಯ ಗೋಡೆಯಲ್ಕಿ ದೊರೆತ ತಾಮ್ರ ಶಾಸನವು ಈ ದೇವಳದ ಪ್ರಾಚೀನತೆಗೆ ಸಾಕ್ಷಿಯಾಗಿದೆ . ನಂದಿ ನಾಗರೀ ಲಿಪಿಯಲ್ಲಿರುವ ಈ ಶಾಸನದ ಪ್ರಕಾರ ದೇವಳವು ಹದಿಮೂರನೇ ಶತಮಾನದಲ್ಲಿ ನವೀಕರಣಗೊಂಡಿದ್ದು ಅದಕ್ಕೂ ಮೊದಲು ಸುಮಾರು ‌9ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದಾಗಿದೆ. ಆ ಕಾಲದಲ್ಲಿ ಇಲ್ಲಿ ವಿದ್ಯಾಪೀಠ‌,ವೂ ನಡೆಯುತ್ತಿತ್ತು ಎಂಬ ಉಲ್ಲೇಖವಿರುವ ವಿಚಾರಗಳು ದೇವಳದ ಭಕ್ತರಿಗೆ ಅತ್ಯಂತ ಸಂತೋಷ ತರುವ ವಿಚಾರ.

ನಾಳೆ ಬೆಳಿಗ್ಗೆ 10:21ರ ಸುಮುಹೂರ್ತದಲ್ಲಿ ಶ್ರೀ ದೇವರಿಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು ಮಧ್ಯಾಹ್ನ 12.30ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.‌ ಸಂಜೆ ಪೇಜಾವರ ಶ್ರೀಗಳೂ ಭೇಟಿ ನೀಡಲಿರುವರು.

ರಾತ್ರಿ 9ರಿಂದ ಹನುಮಗಿರಿ ಮೇಳದ ಕಲಾವಿದರಿಂದ ತೆಂಕುತಿಟ್ಟು ಯಕ್ಷಗಾನ ಪ್ರಸಂಗ: ಶ್ರೀನಿವಾಸ ಕಲ್ಯಾಣ- ಮಾಯಾ ಮಾರುತೇಯ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹಾಗೂ ನ್ಯಾಯವಾದಿ ದಿವಾಕರ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರುಗಳಾದ ಕೆ ಗೋಪಾಲ ಶೆಟ್ಟಿ, ಶೇಖರ ಜತ್ತನ್ನ, ಲಕ್ಷ್ಮಣ ಸೇರಿಗಾರ, ಲಕ್ಷ್ಮೀನಾರಾಯಣ ಆಚಾರ್ಯ, ಸುಂದರ ಅಮೀನ್, ಶೈಲಶ್ರೀ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಬೆಳಗಾವಿಯಿಂದ ಧರ್ಮಸ್ಥಳಕ್ಕೆ: 40 ವರ್ಷಗಳಿಂದ ಪಾದಯಾತ್ರೆ ಮಾಡುತ್ತಿರುವ 76 ವರ್ಷದ ಗೊರಪಜ್ಜ

Upayuktha

ಗಾಯನ ಲೋಕದ ದಿಗ್ಗಜ ಎಸ್‌ಪಿಬಿಗೆ ಐಲೇಸಾ ತಂಡದಿಂದ ಗಾನ ನುಡಿನಮನ

Upayuktha

ವಿದ್ಯುತ್ ಗ್ರಿಡ್ ಕುಸಿತ ಕುರಿತ ಸಂದೇಶಗಳು ಸುಳ್ಳು: ಕೇಂದ್ರ ಸರಕಾರ ಸ್ಪಷ್ಟನೆ

Upayuktha