ಪ್ರಮುಖ ರಾಜ್ಯ

ರಾಜ್ಯಪಾಲ ಭೇಟಿ ಮಾಡಿದ ಸಿಎಂ ಬಿಎಸ್‌ವೈ: ಕೋವಿಡ್ ಸ್ಥಿತಿಗತಿ ವಿವರಣೆ

ಆಯುರ್ವೇದ, ಹೋಮಿಯೋಪಥಿ ಔಷಧ ವಿತರಣೆಗೆ ಕ್ರಮ ವಹಿಸಲು ರಾಜ್ಯಪಾಲರ ಸೂಚನೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಇಂದು ರಾಜ್ಯಪಾಲ ವಜೂಭಾಯಿವಾಲಾ ಅವರನ್ನು ಭೇಟಿ ಮಾಡಿ ಕೊರೊನಾ ಸಾಂಕ್ರಾಮಿಕ ಪಿಡುಗಿನ ಸ್ಥಿತಿ ಮತ್ತು ವೈರಸ್ ಪರೀಕ್ಷೆ ಹಾಗೂ ವರದಿ ಮಾಡಲು ಮತ್ತು ಚಿಕಿತ್ಸೆ ನೀಡಲು ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ರಾಜ್ಯಪಾಲರು, ರಾಜ್ಯದಲ್ಲಿ ಯುವಕರು ಮತ್ತು ಮತ್ತು ವಿದ್ಯಾರ್ಥಿಗಳನ್ನು ಮಾದಕ ದ್ರವ್ಯದ ಜಾಲದತ್ತ ಸೆಳೆಯುವ ಶಕ್ತಿಗಳನ್ನು ಮಟ್ಟಹಾಕುವಂತೆ ಸೂಚಿಸಿದರು. ಅಲ್ಲದೆ ತಂಬಾಕು, ಗುಟ್ಕಾ, ಪಾನ್ ಮಸಾಲ ಪ್ಯಾಕೆಟ್‌ಗಳಲ್ಲಿ ಮಾರಾಟವಾಗುವ ಮಾದಕ ದ್ರವ್ಯಗಳನ್ನು ಸಂಪೂರ್ಣ ನಿಷೇಧಿಸುವಂತೆ ಸಲಹೆ ನೀಡಿದರು.

ಈ ಬಗ್ಗೆ ಪರಿಶೀಲಿಸಿ ಅಗತ್ಯವಿದ್ದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ರಾಜ್ಯಪಾಲರಿಗೆ ತಿಳಿಸಿದರು.

ಕೊರೊನಾ ವೈರಸ್ ರ್ಯಾಪಿಡ್ ಪರೀಕ್ಷೆಯನ್ನು ಮತ್ತಷ್ಟು ತ್ವರಿತಗೊಳಿಸುವಂತೆ ಹಾಗೂ ಆಯುರ್ವೇದ ಮತ್ತು ಹೋಮಿಯೋಪಥಿ ಔಷಧಿಗಳನ್ನು ವೈರಸ್ ನಿಯಂತ್ರಣಕ್ಕಾಗಿ ಬಳಸುವಂತೆ ಹಾಗೂ ಕೊರೊನಾ ಬಾಧಿತ ಪ್ರದೇಶಗಳಲ್ಲಿ ವಿತರಿಸುವಂತೆ ರಾಜ್ಯಪಾಲರು ಸೂಚಿಸಿದರು.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಕಾಶ್ಮೀರ: ಮುಂದಿನ ವಾರ ಶಾಲೆಗಳ ಪುನರಾರಂಭ

Upayuktha

ಇತಿಹಾಸದಲ್ಲಿ ಈ ದಿನ: ಜಲಿಯನ್‌ವಾಲಾ ಬಾಗ್ ಕರಾಳ ಘಟನೆಗೆ 101 ವರ್ಷ

Upayuktha

ಕೃಷಿ ಬದುಕು: ದುಡ್ಡು ಮಾಡಲು ಇಲ್ಲಿ ಅಡ್ಡದಾರಿಗಳಿಲ್ಲ, ನಿರಂತರ ಕಠಿಣ ದುಡಿಮೆ ಮಾಡುವವರು ಮಾತ್ರ ಬನ್ನಿ

Upayuktha