ಓದುಗರ ವೇದಿಕೆ ಕೃಷಿ ಪ್ರಚಲಿತ ವಿದ್ಯಮಾನಗಳು

ಅಭಿಮತ: ಕಾರ್ಪೊರೇಟ್ ಕೃಷಿಗಿಂತ Co-operative ಕೃಷಿ ಉತ್ತಮ

ಎಲ್ಲಾ ಧರ್ಮಕ್ಕಿಂತ ರೈತ ಧರ್ಮ ದೊಡ್ಡದು. Our Culture is Agriculture, ಈ ಕಲ್ಚರ್ ಮೂಲಕ ನಮ್ಮ ಬಹು ಸಂಸ್ಕೃತಿ, ವೈವಿಧ್ಯತೆ, ಬಹುಬೆಳೆ ಪದ್ಧತಿ ಮೂಲಕ ಶುದ್ಧ ಪರಿಸರ ಉಳಿಸಿಕೊಳ್ಳಬಹುದೇ ಹೊರತು ಯಾವುದೇ ತಾಂತ್ರಿಕತೆ, ಯಾಂತ್ರಿಕತೆ, ಕಂಪನಿ ಮೂಲಕ ಅಲ್ಲ.

ಇಂದು ಭಾರತ ದೇಶದಲ್ಲಿ ಸಣ್ಣ ಹಿಡುವಳಿ ಪ್ರಮಾಣ ಜಾಸ್ತಿಯಾಗುತ್ತಾ ಹೋದಂತೆಲ್ಲ ಆ ಭೂಮಿಯಿಂದ ಬರುವ ಆದಾಯ ಜೀವನ ನಿರ್ವಹಿಸಲು ಸಾಧ್ಯವಾಗದೆ ನಗರಗಳಿಗೆ ವಲಸೆ ಹೋಗುವುದು ಅನಿವಾರ್ಯವಾಗಿದೆ, ಇದು ಮುಂದೆ ಮತ್ತೊಂದು ಭೀಕರ ಸಮಸ್ಯೆಗಳ ಸರಮಾಲೆ ಸೃಷ್ಟಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈಗ ಎಲ್ಲೆಡೆ ಪಾಶ್ಚಿಮಾತ್ಯ ದೇಶಗಳಲ್ಲಿರುವ ಯಾಂತ್ರಿಕೃತ /ಕಂಪನಿ/ ಕಾರ್ಪೊರೇಟ್ ಕೃಷಿ ರೀತಿ ಭಾರತ ದೇಶದಲ್ಲಿ ಕೈಗೊಳ್ಳಬೇಕು ಎಂಬ ಸಲಹೆ, ಚಿಂತನೆ ನೆಡೆಯುತ್ತಿದೆ.

ಅಮೇರಿಕಾ, ಕೆನಡಾ, ಆಸ್ಟ್ರೇಲಿಯಾ, ಜಪಾನ್, ಬ್ರಿಟನ್, ಜರ್ಮನಿ ಮುಂತಾದ ಶ್ರೀಮಂತ ರಾಷ್ಟ್ರಗಳಲ್ಲಿ ಶೇ 10 ಕ್ಕಿಂತ ಕಡಿಮೆ ಜನ ಕೃಷಿಯಲ್ಲಿದ್ದಾರೆ, ಆದರೂ ಉಳಿದ ಜನರಿಗೆ ಆಹಾರ, ಬಟ್ಟೆ ಕೊಟ್ಟು ಕೃಷಿ ಉತ್ಪನ್ನ ರಪ್ತು ಮಾಡುತ್ತಿದ್ದಾರೆ. ಈ ದೇಶಗಳು ಹೆಚ್ಚಿಗೆ ಸಬ್ಸಿಡಿ ಕೊಡುತ್ತಿವೆಯಾದುದರಿಂದ ಆ ದೇಶಗಳ ರೈತರ ಜೊತೆ ಸಬ್ಸಿಡಿ ಸಿಗದ ನಮ್ಮ ದೇಶದ ರೈತರು ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ಈ ದೇಶಗಳು ಬೃಹತ್ ಕೃಷಿ ಉತ್ಪಾದನೆ ಮಾಡಲು ಹೇರಳ ರಾಸಾಯನಿಕ ಕ್ರಿಮಿನಾಶಕಗಳನ್ನು ಹಾಕುವುದರಿಂದ ಭೂಮಿಯ ಫಲವತ್ತತೆ ನಾಶ ಮಾಡಿ ಭೂಮಿಯನ್ನು ಬರಡು ಮಾಡುತ್ತಿವೆ ಹಾಗೂ ಜಾಗತಿಕ ತಾಪಮಾನ ಹೆಚ್ಚಲು ಕಾರಣವಾಗುತ್ತಿವೆ.

ಅಮೇರಿಕಾ ವ್ಯಾಪಕ ರಾಸಾಯನಿಕ ಬಳಕೆ ಪರಿಣಾಮ ಸುಮಾರು 10 ಲಕ್ಷ ಹೆಕ್ಟೇರು ಭೂಮಿ ಕೃಷಿಗೆ ಯೋಗ್ಯವಲ್ಲ ಎಂದು ಬೀಳು ಬಿಡಲಾಗಿದೆ, ಭಾರತಕ್ಕಿಂತ ಅಮೆರಿಕಾ ಭೂ ಪ್ರದೇಶ 3 ಪಟ್ಟು ಹೆಚ್ಚಿರುವುದರಿಂದ ಅವರು ಜೀರ್ಣಿಸಿಕೊಳ್ಳಬಹುದೇನೋ, ಆದರೆ ಭಾರತದ ದೇಶದಲ್ಲಿ 1 ಗುಂಟೆ ಭೂಮಿ ಕಳೆದುಕೊಳ್ಳಲು ಸಾಧ್ಯವೇ? ಉಗ್ರ ಕೃಷಿ ವಿಧಾನಕ್ಕೆ ಪ್ರಕೃತಿಯೇ ಪ್ರತಿಭಟನೆ ವ್ಯಕ್ತಪಡಿಸುತ್ತದೆ, ರೋಗಗಳಿಗೆ ತುತ್ತಾಗುವರ ಸಂಖ್ಯೆ ಹೆಚ್ಚುತ್ತಿದೆ, ತಾಪಮಾನ ಹೆಚ್ಚುತ್ತಿದೆ, ಅಂತರ್ಜಲ ಕಲುಷಿತವಾಗುತ್ತಿದೆ.

ಸಹಜ ಕೃಷಿ ಪಿತಾಮಹ ಮಸನೊಬು ಫುಕುವೊಕ ಅವರ ಹಾದಿಯಲ್ಲಿ ಸಾಗಬೇಕಿರುವುದು ಇಂದಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ, ಶೇ 10% ಜನ ಕೃಷಿ ಮಾಡಿ ಉಳಿದ ಶೇ 90% ಜನರಿಗೆ ಶುದ್ಧ ಆಹಾರ, ಗಾಳಿ, ನೀರು ಪೂರೈಕೆ ಸಾಧ್ಯವಿಲ್ಲ,ಅದು ಆಗಬೇಕಾದರೆ ಕನಿಷ್ಠ 80% ಜನ ಕೃಷಿಯಲ್ಲಿ ತೊಡಗಿಕೊಳಬೇಕಾದ ಅನಿವಾರ್ಯತೆ ಬಗ್ಗೆ ತಿಳಿಸಿದ್ದಾರೆ.

*ಅಮೇರಿಕಾ ದೇಶದ ಆಹಾರ ಉತ್ಪಾದನೆ ಭಾರತ ದೇಶಕ್ಕೆ ಹೋಲಿಸಿದರೆ ಅಮೇರಿಕಾ ಉತ್ಪಾದನೆಯಲ್ಲಿ ತುಂಬಾ ಮುಂದಿದೆ.

*ಭಾರತ/ ಅಮೇರಿಕಾ ಇಳುವರಿ ವ್ಯತ್ಯಾಸ ಟನ್ /hectare ಇಂತಿದೆ:
Rice-3/7, Corn-1.8/8.6, Sorghum-0.8/2.8, Peanut-1/2.6, Soyabean-1.1/2.8, Cotton-200 kg/600kg, Milk/Cow/year-3000ltrs/9000ltrs. ಗೋಧಿ ಉತ್ಪಾದನೆಯಲ್ಲಿ ಭಾರತ ಶೇಕಡಾವಾರು ಇಳುವರಿಯಲ್ಲಿ ಅಮೇರಿಕಾಗಿಂತ ಮುಂದಿದೆ.

*ಅಮೆರಿಕಾ ಹಾಗು ಮುಂದುವರೆದ ದೇಶಗಳು Hybrid ಬೀಜಗಳು ಶ್ರೇಷ್ಠವೆಂದು ತಿಳಿದಿದ್ದಾರೆ, ಇವೆಲ್ಲಾ ಷಂಡ ಬೀಜಗಳು, ಸಂತಾನೋತ್ಪತ್ತಿ ಸಾಮರ್ಥ್ಯ ಇಲ್ಲದ ಇಂಥ ದುರ್ಬಲ ಬೀಜಗಳಿಂದ ಬರುವ ಆಹಾರಗಳನ್ನು ತಿನ್ನುವುದರಿಂದ ನಾವು ಇನ್ನೇನಾಗಲು ಸಾಧ್ಯ? ಅಮೇರಿಕಾದಿಂದ ಬಂದಿರುವ ವರದಿ ಪ್ರಕಾರ, ಈ ತಂತ್ರಜ್ಞಾನದಿಂದ ತಯಾರಾದ ಮುಸುಕಿನ ಜೋಳವನ್ನು ತಿಂದ್ರೆ ಗಂಡಸರಲ್ಲಿ ವೀರ್ಯಾಣುವಿನ ಚಟುವಟಿಕೆಯೇ ನಿಂತುಹೋಗುತ್ತೆ, ಸ್ತ್ರೀ ಗರ್ಭಿಣಿ ಅವಕಾಶವೇ ಇಲ್ಲವಾಗುತ್ತೆ.

*ಅಮೇರಿಕಾ ರೈತನ ತಲವಾರು ಜಮೀನು ಹಿಡುವಳಿ ಸುಮಾರು 400 ಎಕ್ರೆ, ಭಾರತ ಸುಮಾರು 2 ಎಕ್ರೆ.

*ಅಮೇರಿಕಾ ಹೊಂದಿರುವ ನೀರಾವರಿ ಪ್ರದೇಶ 80% ಕ್ಕೂ ಹೆಚ್ಚು, ಭಾರತ ಶೇ 35%.

*ಅಮೇರಿಕಾ ದೇಶದ ರೈತರ ಸಂಖ್ಯೆ ಸುಮಾರು 20 ಲಕ್ಷ, ಭಾರತ 12 ಕೋಟಿ.

*ಅಮೇರಿಕಾ ದೇಶದ ಕೃಷಿ GDP 5%, ಭಾರತ ಶೇ 18%(2014 ರಲ್ಲಿ), ಈಗ ಅಮೇರಿಕಾ ಇನ್ನು ಕಡಿಮೆ ಆಗಿದೆ, ಭಾರತ ಜಾಸ್ತಿಯಾಗಿದೆ.

*ಅಮೇರಿಕಾ ದೇಶದ ಶೇಕಡಾವಾರು ಇಳುವರಿ ಪ್ರಮಾಣ ಜಾಸ್ತಿಯಿದೆ, ಆದರೆ ಉತ್ಪಾದನಾ ವೆಚ್ಚ ಜಾಸ್ತಿಯಿದೆ, ಅಷ್ಟೆಲ್ಲಾ ತಾಂತ್ರಿಕತೆ ಬಳಕೆ ಮಾಡಿ ಕೃಷಿ ಮಾಡಿದರೂ ಅವರು ಆಹಾರವನ್ನು ಭಾರತ ದೇಶದ ರೈತರು ಕೊಡುವ discount rate ಗೆ ಕೊಡುವುದಿಲ್ಲ. ಇದನ್ನು ಅಮೇರಿಕಾ ದೇಶದ ಕೃಷಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವವರು ಗಮನಿಸಬೇಕು.

*ಭಾರತ ದೇಶದಲ್ಲಿ ಕೊಡುವ ಕನಿಷ್ಠ ಬೆಂಬಲ ಬೆಲೆಗಿಂತ (Minimum Support Price) ಅವರ ಉತ್ಪಾದನಾ ವೆಚ್ಚ ಜಾಸ್ತಿಯಿದೆ. ಭಾರತ ದೇಶದಲ್ಲಿ ಪ್ರತಿ ಹಸು/ವರ್ಷಕ್ಕೆ 3000 ಲೀಟರ್ ಹಾಲು, ಮಾರಾಟ ಬೆಲೆ: ರೂ 22/. ಅಮೇರಿಕಾ ಪ್ರತಿ ಹಸು/ವರ್ಷಕ್ಕೆ 9000 ಲೀಟರ್, ಉತ್ಪಾದನಾ ವೆಚ್ಚ ಪ್ರತಿ ಲೀಟರ್ ಗೆ ಸುಮಾರು 34 ರೂಪಾಯಿಗಳು.
ಇದು ಎಲ್ಲಾ ಬೆಳಗಳಿಗೂ ಅವರ ಉತ್ಪಾದನಾ ವೆಚ್ಚ ಜಾಸ್ತಿಯಿರುತ್ತದೆ.

*ಅಮೇರಿಕಾ ದೇಶ 20 ವರ್ಷಗಳ ಹಿಂದೆ ಅವರ ದೇಶದ ಒಟ್ಟಾರೆ ಬಜೆಟ್ ನಲ್ಲಿ ಶೇ 88% ಹಣ ಕೃಷಿ ಕ್ಷೇತ್ರದ ಸಬ್ಸಿಡಿ ನೀಡಲು ಬಳಕೆ ಮಾಡುತ್ತಿತ್ತು,ಈಗಲೂ ಸಹ ಕೃಷಿ ಕ್ಷೇತ್ರಕ್ಕೆ 40 ರಿಂದ 60% ವರಗೆ ಸಬ್ಸಿಡಿ ನೀಡುತ್ತಾ ಬಂದಿದೆ.

*ಮುಂದುವರೆದ ದೇಶಗಳಲ್ಲಿ ರೈತರು ಮತ್ತು ಗ್ರಾಹಕರಿಗೆ ಉತ್ಪಾದನೆ ಮಾಡಲು ಮತ್ತು ಖರೀದಿಸಲು ಹೊರೆಯಾಗದ ರೀತಿ ಸರ್ಕಾರಗಳು ಸಬ್ಸಿಡಿ ನೀಡುತ್ತಾ ಬಂದಿವೆ.

*ಭಾರತ ದೇಶದ 2018 ರ ಬಜೆಟ್ ಪ್ರಕಾರ ಕೃಷಿ ಕ್ಷೇತ್ರಕ್ಕೆ 1%,ಆಹಾರ ಮತ್ತು ಪೆಟ್ರೋಲಿಯಂ ಮೇಲೆ 1.5% ಸಬ್ಸಿಡಿ ಇದೆ.

India’s total farm subsidies is much smaller than the America and other wealthy countries,this point should be carefuly consider before those who criticise indian agricultural system and blame indian farmers without knowing the fact.

*ಅಮೇರಿಕಾ ಮತ್ತು ಇನ್ನಿತರೆ ದೇಶದ ಕೃಷಿ ಮತ್ತು ರೈತರನ್ನು ಭಾರತ ದೇಶದ ಕೃಷಿ ಮತ್ತು ರೈತರೊಂದಿಗೆ ಹೋಲಿಕೆ ಮಾಡಿ ನಮ್ಮ ಕೃಷಿ ಮತ್ತು ರೈತರನ್ನು ಹೀಯಾಳಿಸುವ ಮುನ್ನ ಆ ದೇಶಗಳ ಕೃಷಿ ನೀತಿ,ಸಬ್ಸಿಡಿ ನೀತಿ,ಮಾರಾಟ ವ್ಯವಸ್ಥೆಯೊಂದಿಗೆ,ಮುಕ್ತ ವ್ಯಪಾರ ಒಪ್ಪಂದ ಇವುಗಳೊಂದಿಗೆ ನಮ್ಮ ದೇಶದ ಸ್ಥಿತಿ-ಗತಿ ಹೋಲಿಕೆ ಮಾಡಿ ನೋಡಿ ತೀರ್ಮಾನಿಸುವುದು ಸೂಕ್ತ.

*ಅಮೇರಿಕಾ ಮತ್ತು ಮುಂದುವರೆದ ದೇಶಗಳು ಅಷ್ಟೆಲ್ಲಾ ತಾಂತ್ರಿಕತೆ ಬಳಸಿ ಹೆಚ್ಚು ಇಳುವರಿ ಪಡೆಯುತ್ತಿರಬಹುದು ನಿಜ, ಆದರೆ ಉತ್ಪಾದನಾ ವೆಚ್ಚ ಜಾಸ್ತಿಯಿದೆ,ಶುದ್ಧ ನೀರು, ಗಾಳಿ ಕಡಿಮೆಯಾಗುತ್ತಿದೆ, ಮಣ್ಣು ಸಾಯುತ್ತಿದೆ, ಜಾಗತಿಕ ತಾಪಮಾನ ಹೇರಿಕೆಯಾಗುತ್ತಿದೆ, ಕ್ಯಾನ್ಸರ್ ಮುಂತಾದ ಮಾರಣಾಂತಿಕ ಕಾಯಿಲೆ ಜಾಸ್ತಿಯಾಗುತ್ತಿದೆ. ಬಡ ದೇಶಗಳ ಮೇಲೆ ಆರ್ಥಿಕವಾಗಿ ಹಿಡಿತ ಸಾಧಿಸಲು ಮುಂದುವರೆದ ದೇಶಗಳು ಮಾಡುತ್ತಿರುವ ನೀತಿಗಳು ಮುಂದೆ ಮನುಕುಲವೇ ನಾಶವಾದರು ಅಚ್ಚರಿಯಿಲ್ಲ.

*ದೇಶದ ಶ್ರೀಮಂತಿಕ್ಕೆ ಯಾವುದೇ ದೇಶಗಳು ತಮ್ಮ ಬ್ಯಾಂಕ್ ನಲ್ಲಿರುವ ಹಣದಿಂದಲ್ಲ “Richness of a country lies in its soil health” ಭಾರತ ದೇಶದ ಮಣ್ಣಿನಲ್ಲಿ ಆ ಶ್ರೀಮಂತಿಕೆ ಉಳಿದಿದೆ ಎಂದು ಭಾವಿಸುತ್ತೇನೆ.

*ಮುಂದುವರೆದ ದೇಶಗಳಲ್ಲಿ ರೈತರು ಪಡೆಯುತ್ತಿರುವ ಉತ್ತಮ ನೀರಾವರಿ ವ್ಯವಸ್ಥೆ, ಸಬ್ಸಿಡಿ, ಇನ್ನಿತರೆ ವ್ಯವಸ್ಥೆಯೊಂದಿಗೆ ನಮ್ಮ ರೈತರನ್ನು ಹೋಲಿಕೆ ಮಾಡಿದಾಗ ನಾವು ಅವನು ಬೆಳೆದ ಆಹಾರವನ್ನು ಕನಿಷ್ಠ 100% ಡಿಸ್ಕೌಂಟ್ ಬೆಲೆಗೆ ಪಡೆಯುತ್ತಿರುವ ನಾವೆಲ್ಲರೂ ಪುಣ್ಯವಂತರು!

Indian farmers are great even in their sufferings,they provide food for all.So Respect our Farmers and honour them.

ಏಕರೂಪದ ಕೃಷಿ ಜಾರಿಗೆ ಬಂದು ಬೆಳೆ ವೈವಿಧ್ಯವನ್ನು ಕಳೆದುಕೊಂಡು ಏನೇನು ಹಾನಿಯಾಯಿತು ಎಂಬುದರ ಅನುಭವವು ಆಗಿದೆ,ಕಾರ್ಪೊರೇಟ್ ಕೃಷಿ Monoculture ಬೆಳೆ ಪದ್ಧತಿ ಮಾಡೋದ್ರಿಂದ Agriculture, Food Culture, Biodiversity ಇವೆಲ್ಲಾ ನಾಶ ಆಗುತ್ತದೆ.

ಕಾರ್ಪೊರೇಟ್ ಕೃಷಿ ಬೆಂಬಲಿಸುವ ಬಹುರಾಷ್ಟ್ರೀಯ ಕಂಪನಿಗಳು ಶ್ರೀಮಂತವಾಗುತ್ತವೆ, ಸರ್ಕಾರಗಳಿಗೆ ಆ ಕಂಪನಿಗಳ ಮೂಲಕ ದೇಣಿಗೆ ಸಿಗುವುದರಿಂದ ಅವುಗಳ ತಾಳಕ್ಕೆ ಕುಣಿಯುತ್ತಿವೆ.

ಕಾರ್ಪೊರೇಟ್ ಕೃಷಿಗೆ ಬೇಕಾಗುವ ಬೃಹತ್ ಯಂತ್ರಗಳಿಗೆ ನಾವು ಪಾಶ್ಚಿಮಾತ್ಯ ದೇಶಗಳ ಬಳಿ ಅಂಗಲಾಚಬೇಕಾಗುತ್ತದೆ,ಈ ಕೃಷಿ ಯಂತ್ರಗಳು ಶೇ 60% ರಷ್ಟು ಕೃಷಿ ಉದ್ಯೋಗ ಅವಲಂಬನೆ ಮಾಡಿಕೊಂಡಿರುವ ಜನಗಳ ಉದ್ಯೋಗ ಕಳೆಯುತ್ತದೆ,ಪಶ್ಚಿಮಾತ್ಯ ದೇಶಗಳಲ್ಲಿ ಜನಸಂಖ್ಯೆ ಕಡಿಮೆ ಇರುವುದರಿಂದ ಅದು ಅವರಿಗೆ ಸರಿ ಹೊಂದಬಹುದು,ನಮ್ಮ ಜನ ಸಂಖ್ಯೆಗೆ ಯಾಂತ್ರಿಕರಣ ಮಾರಕವಾಗಬಹುದು.

ಆಹಾರ ಭದ್ರತೆ ಹೆಸರಿನಲ್ಲಿ ನಮಗೆ ಅಗತ್ಯಕ್ಕಿಂತ ಹೆಚ್ಚು ಉತ್ಪಾದನೆ ಮಾಡುತ್ತಿದ್ದೇವೆ,ಹಾಗೇ ರೈತರ ಆತ್ಮಹತ್ಯೆಗಳು ದಾಖಲೆ ಪ್ರಮಾಣದಲ್ಲಿ ನಡೆದಿದೆ. ಕರ್ಪೊರೇಟ್ ಕೃಷಿಯ ದುಷ್ಪರಿಣಾಮ, ಭಾರತದ ಜನಸಂಖ್ಯೆ, ಆರ್ಥಿಕ ಸ್ಥಿತಿ, ಕೃಷಿ ಹಿಡುವಳಿ, ಸಂಸ್ಕೃತಿ, ವೈವಿದ್ಯತೆ ಇವುಗಳಿಗೆ ಸೂಕ್ತವಾಗಿ ಸಹಕಾರ ತತ್ವದಡಿಯಲ್ಲಿ ಕೃಷಿಕರ ಗುಂಪು ರಚಿಸಿ ಆಯಾಯ ಪ್ರದೇಶಗಳಿಗೆ ಹೊಂದುವ ಬೆಳೆ ಬೆಳೆದು, ಸ್ಥಳೀಯವಾಗಿ ಮಾರಾಟ ಮಾಡುವ ವ್ಯವಸ್ಥೆ ಮಾಡಲು Corporate ಕೃಷಿಗಿಂತ Co-operative ಕೃಷಿ ಇಂದಿನ ಕೃಷಿ ಬಿಕ್ಕಟಿಗೆ ಪರಿಹಾರವಾಗಬಲ್ಲದು.

-ಪ್ರಶಾಂತ್ ಜಯರಾಮ್
ಕೃಷಿಕರು
9342434530

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (20-08-2020)

Upayuktha

ಮಿತಿಯಿಲ್ಲದ ಮಾನವನ ವೇಗಕ್ಕೆ ಬಿತ್ತು ಕಡಿವಾಣ… ಧಾವಂತದ ಬದುಕಿಗೊಂದು ವಿರಾಮ

Upayuktha

ಗೋವಿನ ಬಗ್ಗೆ ಕಾಳಜಿ: ಸಂತ ದೇವಕೀನಂದನ್ ಠಾಕೂರ್ ಅವರ ಖಡಕ್ ಮಾತು ಕೇಳಿ…

Upayuktha