ಫ್ಯಾಷನ್

ಬಣ್ಣ ಬಣ್ಣದ ಪ್ಲಾಟ್ ಚಪ್ಪಲಿ ಗಳು ಚೆಂದ..

ನಮ್ಮ ಈ ಫ್ಯಾಶನ್ ಲೋಕದಲ್ಲಿ  ಅಗತ್ಯ ವಸ್ತುಗಳಲ್ಲಿ ಚಪ್ಪಲಿಯೂ ಒಂದಾಗಿದೆ. ಅದು ಕೂಡಾ  ಫ್ಯಾಶನ್ ಹುಡುಗಿಯರ ವಿಷಯಕ್ಕೆ ಬಂದರೆ ಒಂದೊಂದು ಸಭೆ ಸಮಾರಂಭಗಳಿಗೆ ಒಂದೊಂದು ಜೊತೆ ಹಾಗೆ ಡ್ರೆಸ್ ನ್ನು ಹೋಲುವ ಚಪ್ಪಲಿಗಳ ಕೊಳ್ಳುವ ಭರದಲ್ಲಿ ಬ್ಯುಸಿಯಾಗಿರುತ್ತಾರೆ.
ಕೆಲವರು ಚಪ್ಪಲಿ ಸವೆದು ಹೋಗುವವರೆಗೆ ಬಿಡುವುದಿಲ್ಲ. ಅದನ್ನು ಸರಿ ಮಾಡಿ ಹೊಲಿಸಿ ಹಾಕುತ್ತಾರೆ.
ಜನರನ್ನು ಆಕರ್ಷಿಸುವಂತೆ ಹಲವಾರು ಬಗೆಯ ಚಪ್ಪಲಿಗಳು ಅಂಗಡಿಗಳಲ್ಲಿ ವ್ಯಾಪಾರ ಮಾಡಲು ಇಟ್ಟಿರುತ್ತಾರೆ. ಅವುಗಳಲ್ಲಿ ಶೂಸ್, ಸ್ಯಾಂಡಲ್ಸ್  ಚಪ್ಪಲಿಗಳು ಲಭ್ಯವಿರುತ್ತದೆ.
ಹೈ ಹಿಲ್ಡ್ ಚಪ್ಪಲಿ ಗಳು ಹೆಚ್ಚಿನವರ ಫೇವರೆಟ್ ಚಪ್ಪಲಿಯಾಗಿದೆ.
ಗಿಡ್ಡದಾಗಿರುವ ವ್ಯಕ್ತಿ ಗಳನ್ನು ಸ್ವಲ್ಪ ಎತ್ತರ ಕಾಣಿಸಲು ಸಹಕಾರಿ ಎನಿಸುತ್ತದೆ. ಆದರೆ ಹಿಲ್ಡ್ ಗಳು ನೋಡಲಿಕಷ್ಟೇ ಚೆಂದ. ಆರೋಗ್ಯ ದ ದೃಷ್ಟಿಯಿಂದ ಒಳ್ಳೆಯದಲ್ಲ.
ಹಾಗಾಗಿಯೇ  ಫ್ಲಾಟ್ ಚಪ್ಪಲಿಗಳಲ್ಲಿ ಅತೀ ವೇಗವಾಗಿ ನಡೆದಾಡಲು ಸುಂದರವಾಗಿ ಕಾಣಿಸುವುದರ ಜೊತೆಗೆ ಆರಾಮದಾಯಕವಾಗಿವೆ.
ಫ್ಲಾಟ್ ಚಪ್ಪಲಿಗಳನ್ನು ಯಾವ ಸೀಸನ್ ನಲ್ಲಿ ಕೂಡ ಬಳಸಬಹುದು. ಲೆದರ್, ಹೈ ಹೀಲ್ಡ್ , ಮತ್ತು ಫ್ಯಾನ್ಸಿ ಸ್ಯಾಂಡಲ್ಸ್ ಗಳಾದರೆ ಮಳೆಗಾಲದಲ್ಲಿ ಧರಿಸಲು ಸಾಧ್ಯವಿಲ್ಲ .
ಆ ಫ್ಲಾಟ್ಸ್ ಗಳೇ ಹೆಚ್ಚು ಸೂಕ್ತ. ಹಗುರವಾಗಿದ್ದು ಹೆಚ್ಚು ಬಾಳಿಕೆ ಕೂಡ ಬರುತ್ತದೆ.  ಸಿಂಪಲ್ ಲುಕ್ ನಲ್ಲಿ ಚಂದಗಾಣಿಸುತ್ತದೆ. ಫ್ಲಾಟ್ ಚಪ್ಪಲಿಗಳನ್ನು ಎಲ್ಲ ವಯಸ್ಸಿನವರು ಉಪಯೋಗಿಸಬಹುದು.
ಬಣ್ಣ ಬಣ್ಣದ ಚಪ್ಪಲಿಗಳ ಕಡೆಗೆ ಮೊರೆ ಹೋಗುವುದು. ಯುವತಿಯರು ಮಾತ್ರ. ಕಾಲೇಜು ಹುಡುಗಿಯರಿಗಂತು ವೆರೈಟಿ ಚಪ್ಪಲಿಗಳೇ ಬೇಕು.
ಈ ಚಪ್ಪಲಿ ಕಾಲಿನ ಅಂದವನ್ನು ಹೆಚ್ಚಿಸುತ್ತದೆ. ಬೆರಳಿಗೂ ಅಂದದ ನೈಲ್ ಪಾಲೀಶ್ ಗಳು ಹಚ್ಚಿದರೆ ಇನ್ನಷ್ಟೂ ಲುಕ್ ಕೊಡುತ್ತದೆ.
ಜಕೀನ್ಸ್, ಲೆಗ್ಗಿನ್ಸ್ ಉಡುಪುಗಳಿಗೆ ಈ ಚಪ್ಪಲಿ ಇನ್ನಷ್ಟು ಹೆಚ್ಚಿನ ಅಂದವಾಗಿ ಕಾಣಿಸಲು ಸಹಕಾರಿಯಾಗಿದೆ. ಫ್ರೀ ಆಗಿ ಎಲ್ಲಿಗೂ ಹೋಗಬಹುದು. ಎಲ್ಲರೂ ಧರಿಸಿ ಚಂದ ಕಾಣಬಹುದು.
  ✍ಹರ್ಷಿತಾ ಹರೀಶ್ ಕುಲಾಲ್

Related posts

ದಕ್ಷಿಣ ಭಾರತದ ನೆಚ್ಚಿನ ಫ್ಯಾಮಿಲಿ ಫ್ಯಾಶನ್ ಸ್ಟೋರ್ ‘ಜಯಲಕ್ಷ್ಮಿ’ ಮಂಗಳೂರಿನಲ್ಲಿ ನಾಳೆ ಶುಭಾರಂಭ

Upayuktha

‘ಲಿವಾ ಮಿಸ್ ದಿವಾ ಯೂನಿವರ್ಸ್ 2020’ ಆಡ್ಲೈನ್ ಕ್ಯಾಸ್ಟೊಲಿನೊಗೆ ಹುಟ್ಟೂರ ಸ್ವಾಗತ

Upayuktha

ಹಳೆಯ ಸೀರೆಯಿಂದ ಪರಿಸರ ಸ್ನೇಹಿ ಬ್ಯಾಗ್ ತಯಾರಿಸೋದು ಹೇಗೆ? ಇಲ್ಲಿದೆ ನೋಡಿ ಸುಲಭ ವಿಧಾನ…

Upayuktha

Leave a Comment

error: Copying Content is Prohibited !!