ಪ್ರಮುಖ ವಾಣಿಜ್ಯ

ಕೋವಿಡ್ 19 ವಿರುದ್ಧ ಸಮರ: ಇಎಂಐ ಪಾವತಿಗೆ 3 ತಿಂಗಳ ವಿನಾಯಿತಿ, ಬಡ್ಡಿದರ ಕಡಿತ

ಆರ್‌ಬಿಐನಿಂದ ಹಲವು ತುರ್ತು ಆರ್ಥಿಕ ಕ್ರಮಗಳು ಪ್ರಕಟ

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತುರ್ತು ಸುದ್ದಿಗೋಷ್ಠಿ

ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ (ಪಿಟಿಐ ಚಿತ್ರ, ಕೃಪೆ: ಲೈವ್‌ಮಿಂಟ್)

ಹೊಸದಿಲ್ಲಿ: ಕೊರೊನಾ ವೈರಸ್ ವಿರುದ್ಧದ ಸಮರದಿಂದಾಗಿ 21 ದಿನಗಳ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು 1.70 ಲಕ್ಷ ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ ಬೆನ್ನಿಗೇ ಭಾರತೀಯ ರಿವರ್ವ್‌ ಬ್ಯಾಂಕ್‌ ಕೂಡ ಬ್ಯಾಂಕ್‌ ಬಡ್ಡಿದರಗಳನ್ನು 75 ಮೂಲಾಂಶಗಳಷ್ಟು ಕಡಿತ ಮಾಡಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ್‌ ದಾಸ್ ಈ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಬಡ್ಡಿದರಗಳನ್ನು ಶೇ 4.4ಕ್ಕೆ ಇಳಿಸಲಾಗಿದೆ ಎಂದರು. ಆರ್ಥಿಕ ವ್ಯವಸ್ಥೆಗೆ 3.74 ಲಕ್ಷ ಕೋಟಿ ರೂ.ಗಳನ್ನು ಹರಿಸಲು ಹಲವಾರು ಕ್ರಮಗಳನ್ನು ಪ್ರಕಟಿಸಿದರು.

ಮುಖ್ಯಾಂಶಗಳು:

ಮಾರುಕಟ್ಟೆಗೆ 1 ಲಕ್ಷ ಕೋಟಿ ರೂ.ಗಳನ್ನು ಸೇರಿಸುವ ಮೂಲಕ ದ್ರವ್ಯತೆಯನ್ನು ಹೆಚ್ಚಿಸಲು ರೆಪೋ ದರಗಳನ್ನು ತಗ್ಗಿಸಲಾಗುತ್ತಿದೆ.
– ಬ್ಯಾಂಕ್‌ಗಳಲ್ಲಿ ನಿಧಿಗಳು ಸುರಕ್ಷಿತವಾಗಿವೆ. ಹಣ ಹಿಂಪಡೆಯುವ ವಿಚಾರದಲ್ಲಿ ಜನತೆ ಯಾವುದೇ ಆತಂಕ್ಕೆ ಒಳಗಾಗುವ ಅಗತ್ಯವಿಲ್ಲ.
– ಶೇರು ಬೆಲೆಗಳನ್ನು ಬ್ಯಾಂಕ್ ಠೇವಣಿಗಳ ಸುರಕ್ಷತೆ ಜತೆಗೆ ತಳುಕು ಹಾಕುವುದು ತಪ್ಪು.
– ಅರ್ಥವ್ಯವಸ್ಥೆಯ ಮೇಲೆ ಆರ್‌ಬಿಐ ಸತತ ನಿಗಾ ಇರಿಸಿದ್ದು, ಕೋವಿಡ್ 19 ಪರಿಣಾಮವನ್ನು ನಿವಾರಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತದೆ.

– 2.8 ಲಕ್ಷ ಕೋಟಿ ರೂ.ಗಳಷ್ಟು ಲಿಕ್ಷಿಡಿಟಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
– ಹಣಕಾಸು ಮಾರುಕಟ್ಟೆ ಒತ್ತಡದಲ್ಲಿದೆ; ಮಾರುಕಟ್ಟೆ ಸ್ಥಿರತೆ ಕಾಪಾಡಲು ಮತ್ತು ಆರ್ಥಿಕ ಬೆಳವಣಿಗೆಯನ್ನು ಖಾತ್ರಿಪಡಿಸಲು ಕೇಂದ್ರ ಬ್ಯಾಂಕ್ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ.

-ಎನ್‌ಎಫ್‌ಎಸ್‌ಎಆರ್ ಅನುಷ್ಠಾನವನ್ನು 6 ತಿಂಗಳ ಕಾಲ ಮುಂದೂಡಲಾಗುತ್ತಿದೆ.

ಮಧ್ಯಮಾವಧಿ ಸಾಲ ಮರುಪಾವತಿ ವಿಚಾರದಲ್ಲಿ ಎಲ್ಲ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಮೂರು ತಿಂಗಳ ಕಾಲ ವಿನಾಯಿತಿ ನೀಡಲಾಗುತ್ತದೆ. ಇದು ಮಾರ್ಚ್ 1ರಿಂದಲೇ ಅನ್ವಯ.

ಕೋವಿಡ್-19 ಸಾಂಕ್ರಾಮಿಕದಿಂದಾಗಿ ಆರ್ಥಿಕ ವ್ಯವಸ್ಥೆಯು ಮೇಲ್ನೋಟಕ್ಕೆ ತೀವ್ರ ಅಸ್ಥಿರವಾಗಿದೆ ಮತ್ತು ನಕಾರಾತ್ಮಕ ಪರಿಣಾಮ ಬೀರುತ್ತಿದೆ.

– ಅನಿಶ್ಚಿತತೆಯಿಂದಾಗಿ ಮುಂಬರುವ ಹಣಕಾಸು ವರ್ಷಕ್ಕೆ ಹಣದುಬ್ಬರ ಮತ್ತು ಆರ್ಥಿಕ ಬೆಳವಣಿಗೆಯ ಮುನ್ನೋಟವನ್ನು ನೀಡಲು ಹಣಕಾಸು ನಿಗಾವಣಾ ಸಮಿತಿಗೆ ಸಾಧ್ಯವಾಗುತ್ತಿಲ್ಲ.

– ಆಹಾರ ಧಾನ್ಯಗಳು ದಾಖಲೆ ಪ್ರಮಾಣದಲ್ಲಿ ಉತ್ಪಾದನೆ ಆಗಿರುವುದರಿಂದ ಅವುಗಳ ಬೆಲೆ ಇನ್ನಷ್ಟು ಇಳಿಕೆಯಾಗಬಹುದು.

– ಕೋವಿಡ್-19 ಸಾಂಕ್ರಾಮಿಕದ ತೀವ್ರತೆ, ಹರಡುವಿಕೆ ಮತ್ತು ಅವಧಿಯ ವಿಚಾರದಲ್ಲಿ ತೀವ್ರ ಪ್ರಮಾಣದ ಅನಿಶ್ಚಿತತೆ ತಲೆದೋರಿದೆ. ಜಗತ್ತಿನ ಬಹುಭಾಗ ಆರ್ಥಿಕ ಹಿಂಜರಿತಕ್ಕೆ ಒಳಗಾಗಬಹುದು.

ಬ್ಯಾಂಕ್‌ಗಳ ನಗದು ಮೀಸಲು ಅನುಪಾತ (ಸಿಆರ್‌ಆರ್‌)ವನ್ನು 100 ಮೂಲಾಂಶಗಳಷ್ಟು ಕಡಿತ ಮಾಡಲಾಗಿದ್ದು, ಶೇ 3ಕ್ಕೆ ಇಳಿಸಲಾಗಿದೆ.: ಶಕ್ತಿಕಾಂತ್ ದಾಸ್.
– ಸುಗಮ ಹಣಕಾಸಿನ ಹರಿವನ್ನು ಖಾತ್ರಿಪಡಿಸಲು ಆರ್‌ಬಿಐ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತದೆ.

– ನಾವೆಲ್ಲರೂ ಈಗ ಅತ್ಯಂತ ವಿಲಕ್ಷಣ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ; ಕೊರೊನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ವಿಧಾನಗಳ ಮೂಲಕ ನಾವು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಬೇಕಿದೆ.

ಕೋವಿಡ್-19 ಉಂಟುಮಾಡುತ್ತಿರುವ ಅನಾಹುತವನ್ನು ಎದುರಿಸಲು ಆರ್‌ಬಿಐ ತನ್ನ ಬತ್ತಳಿಕೆಯಲ್ಲಿರುವ ಎಲ್ಲಾ ಅಸ್ತ್ರಗಳನ್ನೂ ಪ್ರಯೋಗಿಸಲಿದೆ.

ಅರ್ಥವ್ಯವಸ್ಥೆಯ ಮೂಲ ಆಧಾರವೇ ಹಣಕಾಸು. ಬಲಿಷ್ಠವಾಗಿ ವಿತ್ತೀಯ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗುತ್ತದೆ.: ಶಕ್ತಿಕಾಂತ್ ದಾಸ್.
– ಕಚ್ಚಾತೈಲದ ಬೆಲೆ ಇಳಿಕೆಯಾಗಿರುವುದು ಸ್ವಲ್ಪ ಮಟ್ಟಿಗೆ ನಿರಾಳತೆ ತಂದಿದೆ.

ಹಣಕಾಸು ನೀತಿ ಸಮಿತಿ 4:2ರ ಬಹುಮತದಲ್ಲಿ ಸಮರೋಪಾದಿಯ ವಿತ್ತೀಯ ಕ್ರಮಗಳನ್ನು ಬೆಂಬಲಿಸಿದೆ: ಆರ್‌ಬಿಐ.

ರಿವರ್ಸ್‌ ರೆಪೋ ದರವನ್ನು 90 ಮೂಲಾಂಶಗಳಷ್ಟು ಅಂದರೆ ಶೇ 4ಕ್ಕೆ ತಗ್ಗಿಸಲಾಗಿದೆ.

ಬಡ್ಡಿದರ ಕಡಿತ ಮಾಡಲು ಎಂಪಿಸಿ (ಮಾನಿಟರಿ ಪಾಲಿಸಿ ಕಮಿಟಿ) ಶಿಫಾರಸು ಮಾಡಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

Related posts

ಪೇಜಾವರ ಶ್ರೀ, ಸುಷ್ಮಾ, ಜೇಟ್ಲಿ, ಜಾರ್ಜ್‌ ಫರ್ನಾಂಡಿಸ್‌ಗೆ ಪದ್ಮವಿಭೂಷಣ

Upayuktha

ಕೊರೊನಾ ಹರಡದಂತೆ ದ.ಕ ಜಿಲ್ಲೆಯಾದ್ಯಂತ ಸೆಕ್ಷನ್‌ 144(3)ರ ಅಡಿ ನಿರ್ಬಂಧ ಜಾರಿ

Upayuktha

ಶಬರಿಮಲೆ ಪ್ರಕರಣ: ವಿಸ್ತೃತ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟ್

Upayuktha