ಚಂದನವನ- ಸ್ಯಾಂಡಲ್‌ವುಡ್

ಹಾಸ್ಯ ನಟ ಚಿಕ್ಕಣ್ಣ ನಾಯಕ ನಾಗಿ ಉಪಾಧ್ಯಕ್ಷ ಚಿತ್ರದಲ್ಲಿ ನಟನೆ

ಬೆಂಗಳೂರು : ಹಾಸ್ಯದ ಮೂಲಕ ಜನರನ್ನು ನಗಿಸುತ್ತಾ ಬಂದಿರುವ ಚಿಕ್ಕಣ್ಣ ಇವರು ಇದೀಗ ನಾಯಕ ಪಾತ್ರದಲ್ಲಿ ಉಪಾಧ್ಯಕ್ಷ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ರಾಬರ್ಟ್ ಹಾಗೂ ಮದಗಜದ ನಂತರ ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಚಿತ್ರವನ್ನು ಉಮಾಪತಿ ಶ್ರೀನಿವಾಸ ನಿರ್ಮಾಣಕ್ಕೆ ಮುಂದಾಗಿದ್ದು , ಸ್ಮಿತಾ ಉಮಾಪತಿ ಹಾಗೂ ನಿರ್ಮಲಾ ಶ್ರೀನಿವಾಸ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರವನ್ನು ಚಂದ್ರ ಮೋಹನ್ ಉಪಾಧ್ಯಕ್ಷ ಅವರು ನಿರ್ದೇಶಿಸುತ್ತಿದ್ದಾರೆ.

ನಾಯಕ ನಟನಾಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಚಿಕ್ಕಣ್ಣ ಅವರು, ಚಿತ್ರರಂಗದಲ್ಲಿ ಪ್ರತಿಯೊಬ್ಬ ನಟನಿಗೂ ಇದೊಂದು ಅತ್ಯಂತ ಪ್ರಮುಖವಾಗ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

ಉಪಾಧ್ಯಕ್ಷ ಚಿತ್ರದಲ್ಲಿ ನಟಿಸಲು ಕಾರಣ, ಚಿತ್ರದ ಒಂದೇ ಒಂದು ಸಾಲು ನನ್ನನ್ನು ಒಪ್ಪಿಕೊಳ್ಳುವಂತೆ ಮಾಡಿತ್ತು. ಚಿತ್ರ ಕಥೆ ನನಗೆ ಒಪ್ಪುವಂತಿತ್ತು ಎಂದು ಹೇಳಿದ್ದಾರೆ.

ಲಾಕ್ಡೌನ್ ಸಮಯವನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಂಡಿದ್ದು ನನಗೆ ಸಂತಸವಿದೆ. ಇದೀಗ ನಾನು ಹೀರೋ ಆಗುತ್ತಿರುವುದು ಮತ್ತೊಂದು ಸಂತೋಷ ಎಂದು ಚಿಕ್ಕಣ ತಿಳಿಸಿದ್ದಾರೆ.

 

Related posts

ರಾಬರ್ಟ್’ ಸಿನಿಮಾದ ಪೋಸ್ಟರ್ ಅನಾವರಣಗೊಳಿಸಿದ ಕೃಷಿ ಸಚಿವ ಬಿಸಿ ಪಾಟೀಲ್

Harshitha Harish

ಕಿರುತೆರೆ ನಟಿ ರಶ್ಮಿ ಜಯರಾಜ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜು

Harshitha Harish

ರಾಘವೇಂದ್ರ ರಾಜ್‌ಕುಮಾರ್ ಮಗ, ಖ್ಯಾತ ನಿರ್ದೇಶಕ ರಾಜಮೌಳಿ ಯವರನ್ನು ಭೇಟಿ

Harshitha Harish