ಜಿಲ್ಲಾ ಸುದ್ದಿಗಳು

ಪರಿಸರ ಸ್ನೇಹಿ ಪೆನ್ನುಗಳ ಮೇಲೆ ವಚನಗಳ ಮುದ್ರಿಸಿ ಸಾಹಿತ್ಯ ಪ್ರಸಾರ

ಕಲಬುರಗಿಯ ‘ಮಂದಹಾಸ ಶಿಕ್ಷಣ ಮತ್ತು ಸೇವಾಸಂಸ್ಥೆ’ಯ ಶ್ಲಾಘನೀಯ ಪ್ರಯತ್ನ

ಕಲಬುರಗಿ: 12ನೇ ಶತಮಾನದ ವಚನಕಾರರನ್ನು ಪರಿಚಯಿಸುವ ಜೊತೆಗೆ ಅವರ ವಚನಗಳು ಸುಲಭವಾಗಿ ಓದಲು ಸಿಗಲಿ ಎಂಬ ಉದ್ದೇಶದಿಂದ ಹಾಗೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ಕಲಬುರಗಿ ತಾಲೂಕಿನ ಗರೂರ (ಬಿ) ಗ್ರಾಮದ ‘ಮಂದಹಾಸ ಶಿಕ್ಷಣ ಮತ್ತು ಸೇವಾ ಸಂಸ್ಥೆ’ ವತಿಯಿಂದ ಪರಿಸರ ಸ್ನೇಹಿ (ಪೇಪರ್‌ ಪೆನ್‌) ಪೆನ್ನುಗಳನ್ನು ತಯಾರಿಸಿ ಅವುಗಳ ಮೆಲೆ ವಚನಗಳನ್ನು ಮುದ್ರಿಸಲಾಗಿದೆ.

ಈ ಪೆನ್ನು ಬಳಕೆಯಿಂದ ಬರೆಯುವ ವೇಳೆಯಲ್ಲೇ ವಚನಗಳನ್ನು ಸುಲಭವಾಗಿ ಓದಿ ಮನದಟ್ಟು ಮಾಡಿಕೊಳ್ಳಬಹುದಾಗಿದೆ. ಒಂದು ಪೆನ್ನಿನ ಇಂಕು ಮುಗಿಯೊದರೊಳಗೆ ಮಕ್ಕಳಿಗೆ ಹಾಗೂ ಹಿರಿಯರಿಗೆ ವಚನದ ಅದರ ಅರ್ಥ ತಿಳಿದುಕೊಳ್ಳಲು ಅನುಕುಲವಾಗುತ್ತದೆ.

ಗ್ರಾಮೀಣ ಪರಿಸರದಲ್ಲಿ ಇಂತಹದೊಂದು ಉತ್ತಮ ಚಟುವಟಿಕೆಯಲ್ಲಿ ನಿರತವಾಗಿರುವ ಮಂದಹಾಸ ಶಿಕ್ಷಣ ಮತ್ತು ಸೇವಾ ಸಂಸ್ಥೆಯ ಪ್ರಯತ್ನ ನಿಜಕ್ಕೂ ಸ್ತುತ್ಯರ್ಹವಾಗಿದೆ. ಶಿವರಾಜಕುಮಾರ ಹಳ್ಳಿ ಅವರು ಮಂದಹಾಸ ಶಿಕ್ಷಣ ಮತ್ತು ಸೇವಾ ಸಂಸ್ಥೆಯ ಅಧ್ಯಕ್ಷರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಸಿರಿಬಾಗಿಲು ಪ್ರತಿಷ್ಠಾನ, ಬೊಂಬೆಯಾಟ ಸಂಘದ ಸಹಭಾಗಿತ್ವದಲ್ಲಿ ‘ಕೊರೊನಾ ಯಕ್ಷ ಜಾಗೃತಿ’

Upayuktha

ಅನ್‌ಲಾಕ್‌ 5: ಕೋವಿಡ್ -19 ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳು

Upayuktha

ವೃಕ್ಷಾಭಿಯಾನಕ್ಕೆ ಚಾಲನೆ – ಕಾವು ತುಡರ್ ಯುವಕ ಮಂಡಲ

Harshitha Harish