ಪ್ರಮುಖ ವಾಣಿಜ್ಯ ವ್ಯಾಪಾರ- ವ್ಯವಹಾರ

ಕೋವಿಡ್ 19 ಲಾಕ್‌ಡೌನ್‌: ಇಂದಿನ ವಾಣಿಜ್ಯ ಸುದ್ದಿ ಮುಖ್ಯಾಂಶಗಳು

(ಚಿತ್ರ ಕೃಪೆ: ಯೂಟ್ಯೂಬ್)

ಹೊಸದಿಲ್ಲಿ: ಕೊರೊನಾ ಮಹಾಮಾರಿ ಭಾರತದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಸರಕಾರ 21 ದಿನಗಳ ಲಾಕ್‌ಡೌನ್‌ ಘೋಷಿಸಿದೆ. ಇದರಿಂದಾಗಿ ಎಲ್ಲ ವ್ಯವಹಾರ- ವಹಿವಾಟುಗಳು ಸ್ತಬ್ಧಗೊಂಡಿದ್ದು, ಸಾಮಾನ್ಯ ಜನಜೀವನದ ಮೇಲೆ ತೀವ್ರ ದುಷ್ಪರಿಣಾಮವಾಗಿದೆ. ಅರ್ಥ ವ್ಯವಸ್ಥೆಯ ಮೇಲೂ ಕೋವಿಡ್ 19 ಕರಾಳ ಪ್ರಭಾವ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಇಂದಿನ ವಾಣಿಜ್ಯ ಸುದ್ದಿಗಳ ಮುಖ್ಯಾಂಶಗಳತ್ತ ಒಂದು ನೋಟ ಇಲ್ಲಿದೆ:

* ಭಾರತದ ಹಣಕಾಸು ವಲಯ ಗಂಭೀರ ಅಪಾಯದಲ್ಲಿದೆ: ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಎಚ್ಚರಿಕೆ.
ವಸೂಲಾಗದ ಸಾಲಗಳನ್ನು ಅನುತ್ಪಾದಕ ಆಸ್ತಿಗಳೆಂದು ಯೆಸ್ ಬ್ಯಾಂಕ್‌ ಘೋಷಿಸುವಂತಿಲ್ಲ: ಹೈಕೋರ್ಟ್.
* ಭಾರತದ ಆರ್ಥಿಕ ಬೆಳವಣಿಗೆ 2021ನೇ ಹಣಕಾಸು ವರ್ಷದಲ್ಲಿ ಶೇ 3ಕ್ಕೆ ಕುಸಿಯಬಹುದು: ಕೆಪಿಎಂಜಿ
* ಲಾಕ್‌ಡೌನ್‌ ಇನ್ನಷ್ಟು ಮುಂದುವರಿದರೆ ಲೋಹಗಳು ಮತ್ತು ಗಣಿಗಾರಿಕೆ ವಲಯಕ್ಕೆ ತೀವ್ರ ಹೊಡೆತ ಬೀಳಲಿದೆ.
* ಮಾರ್ಚ್‌ ತಿಂಗಳಲ್ಲಿ ಪೆಟ್ರೋಲ್ ಮಾರಾಟ ಶೇಕಡಾ 15.5 ಮತ್ತು ಡೀಸೆಲ್ ಮಾರಾಟ ಶೇ. 24ರಷ್ಟು ಕುಸಿದಿದೆ.
* ಜಪಾನ್ ಪ್ರಧಾನಿ ಅಬೆ ಅವರು 1 ಟ್ರಿಲಿಯನ್‌ ಡಾಲರ್‌ ಮೊತ್ತದ ಉದ್ದೀಪನಾ ಪ್ಯಾಕೇಜ್‌ ಘೋಷಿಸಿದ್ದಾರೆ.

************

* ಕೋವಿಡ್-19 ಕ್ಲೇಮುಗಳಿಗೆ ಎಲ್‌ಐಸಿ ‘ಫೋರ್ಸ್ ಮೆಜ್ಯೂರ್’ ಉಪ ನಿಬಂಧನೆಯನ್ನು ಅನ್ವಯಿಸುವುದಿಲ್ಲ.
* 2020ನೇ ಆರ್ಥಿಕ ವರ್ಷದಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಟ್ಟು 3,979 ಕಿ.ಮೀ ಉದ್ದದ ಹೆದ್ದಾರಿಗಳನ್ನು ನಿರ್ಮಾಣ ಮಾಡಿದೆ. ಇದು ಇತಿಹಾಸದಲ್ಲೇ ಅತ್ಯಧಿಕವಾಗಿದೆ.
* ಆರ್‌ಬಿಐ ಮಾರ್ಗದರ್ಶಿ ಸೂತ್ರಗಳ ಅಡಿಯಲ್ಲಿ ಭೂತಾನ್‌ಗೆ ರಫ್ತು ಮಾಡುವ ವಸ್ತುಗಳಿಗೆ ರೂಪಾಯಿಯಲ್ಲೇ ಪಾವತಿ ಸ್ವೀಕರಿಸಲು ಅನುಮತಿ ನೀಡಲಾಗಿದೆ: ಆರ್ಥಿಕ ತಜ್ಞರು.
* ಕೋವಿಡ್‌-19 ಒಂದು ಆರ್ಥಿಕ ತುರ್ತು ಪರಿಸ್ಥಿತಿ ಎಂದ ಆರ್‌ಬಿಐ ಮಾಜಿ ಗವರ್ನರ್ ರಾಜನ್‌; ತಜ್ಞರ ಸಲಹೆ ಪಡೆಯಲು ಒತ್ತಾಯ.
* ಕೋವಿಡ್-19: ಮ್ಯೂಚ್ಯುವಲ್ ಫಂಡ್‌ಗಳ ಕಟ್‌ ಆಫ್‌ ಸಮಯವನ್ನು ಸೆಬಿ ಅಪರಾಹ್ನ 3 ಗಂಟೆಯಿಂದ 1 ಗಂಟೆಗೆ ಕಡಿತ ಮಾಡಿದೆ.
* ರೋಲ್ಸ್‌ ರಾಯ್ಸ್‌ ಲಾಭ, ಪೂರೈಕೆ ಗುರಿಗಳು ಮತ್ತು ಡಿವಿಡೆಂಡ್ ನೀಡಿಕೆಯನ್ನು ಅಮಾನತುಗೊಳಿಸಿದೆ.

***********

* ಬಂಗಾಳದ ಸೆಣಬಿನ ಮಿಲ್‌ಗಳ ಲಾಕ್‌ಡೌನ್ ಅನ್ನು ಇನ್ನಷ್ಟು ವಿಸ್ತರಿಸಿ ಕಾರ್ಮಿಕ ಸಚಿವಾಲಯ ಆದೇಶ ಹೊರಡಿಸಿದೆ.
* ಉದ್ಯಮದ ಬಲವರ್ಧನೆಗೆ ಸಿಐಐ-ಕೇರಳ ಕರೆ.
* ಸರಕಾರದ ಪಾರುಗಾಣಿಕೆ ಯೋಜನೆ ಬಗಗೆ ವೈಮಾನಿಕ ಉದ್ಯಮದ ನಿರೀಕ್ಷೆಗಳು ಅವಾಸ್ತವಿಕವಾದವು.
* ಪರವಾನಿಗೆಯಿಲ್ಲದ ಹೋಮ್ ಟೆಸ್ಟಿಂಗ್ ಕಿಟ್‌ಗಳ ಮಾರಾಟಕ್ಕಾಗಿ ಬಯೋನ್‌ಗೆ ಔಷಧ ನಿಯಂತ್ರಣ ಪ್ರಾಧಿಕಾರದಿಂದ ತರಾಟೆ.
* ಇಂಡಿಗ್ರಿಡ್ ಮಾರ್ಕೆಟ್ ಲಿಂಕ್ಡ್‌ ಡಿಬೆಂಚರ್‌ಗಳ ಬಗ್ಗೆ ಇಂಡಿಯಾ ರೇಟಿಂಗ್ಸ್‌ನಿಂದ ‘ಸ್ಥಿರತೆ’ಯ ಮುನ್ನೋಟ.

***********

* ವಿದ್ಯುತ್ ವಿತರಣಾ ಕಂಪನಿಗಳು (ಡಿಸ್ಕಾಂ) ಸಕಾಲದಲ್ಲಿ ಬಿಲ್‌ಗಳನ್ನು ಪಾವತಿಸದಿದ್ದರೆ ಸೂಕ್ತ ಕ್ರಮ: ವಿದ್ಯುತ್ ಸಚಿವಾಲಯ ಎಚ್ಚರಿಕೆ.
* ಕೊರೊನಾ ವೈರಸ್ ಸಾಂಕ್ರಾಮಿಕವನ್ನು ಹತ್ತಿಕ್ಕಲು ‘ಮಾಸ್ಕ್‌’ ಒಂದೇ ಅಸ್ತ್ರವಲ್ಲ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

* ಕೋವಿಡ್ 19: ಚೀನಾದಲ್ಲಿ ಬೇಗನೆ ಚೇತರಿಕೆಯ ಲಕ್ಷಣಗಳಿವೆ: ಐಎಂಎಫ್‌
* ಬಕಾರ್ಡಿಯಿಂದ 70,000 ಲೀಟರ್‌ಗಳಷ್ಟು ಹ್ಯಾಂಡ್‌ ಸ್ಯಾನಿಟೈಸರ್‌ಗಳ ಉತ್ಪಾದನೆ.
* ಲಾಕ್‌ಡೌನ್‌ ಕೊನೆಗೊಂಡ ಬಳಿಕ ಉತ್ಪಾದನೆಯನ್ನು ತೀವ್ರಗತಿಯಲ್ಲಿ ಏರಿಸಲು ಎಫ್‌ಎಂಸಿಜಿ ಉದ್ಯಮದ ಸಿದ್ಧತೆ.

* ಕೋವಿಡ್ 19 ಸಾವಿನ ಪ್ರಕರಣಗಳಲ್ಲಿ ಕ್ಲೇಮುಗಳನ್ನು ವಿಮಾ ಕಂಪನಿಗಳು ನಿರಾಕರಿಸುವಂತಿಲ್ಲ.
* ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿಯ ಸ್ಥಾನ 17ಕ್ಕೆ ಕುಸಿತ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

Upayuktha

ಕೋಲಾರದಲ್ಲಿ ಆಂಜನೇಯ ದೇಗುಲ ಅಪವಿತ್ರಗೊಳಿಸಿದ ದುಷ್ಕರ್ಮಿ

Upayuktha

ರಕ್ತ, ಪ್ಲಾಸ್ಮಾ ದಾನದ ಬಗ್ಗೆ ಜಾಗೃತಿ ಹೆಚ್ಚಲಿ: ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ

Upayuktha

Leave a Comment