ಕ್ಯಾಂಪಸ್ ಸುದ್ದಿ ಗ್ರಾಮಾಂತರ ಶಿಕ್ಷಣ ಸ್ಥಳೀಯ

ಎಸ್.ಡಿ.ಎಂ.ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರುಗಳ ಸಹಭಾಗಿತ್ವದಲ್ಲಿ ಪಠ್ಯಪುಸ್ತಕಗಳ ರಚನೆ

ಡಾ‌.ಡಿ.ವೀರೇಂದ್ರ ಹೆಗ್ಗಡೆಯವರಿಂದ ಅನಾವರಣ

ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ (ಸ್ವಾಯತ್ತ) ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರು ಸಹಭಾಗಿತ್ವದಲ್ಲಿ ರಚಿಸಿದ ಪಠ್ಯಪುಸ್ತಕಗಳ ಬಿಡುಗಡೆ ಕಾರ್ಯಕ್ರಮವು ನಡೆಯಿತು.

“Cost & Management Accounting- I”, “Personal Investment Management” ಮತ್ತು “Principles and practices of Tourism” ಎಂಬ ಮೂರು ಪುಸ್ತಕಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಎಸ್.ಡಿ.ಎಂ. ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.

ಈ ಪುಸ್ತಕವು ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಲಿದೆ, ಇಂತಹ ಇನ್ನಷ್ಟು ಪ್ರಯತ್ನಗಳು ಲೇಖಕರಿಂದ ಮೂಡಿಬರಲಿ ಎಂದು ಪುಸ್ತಕದ ಲೇಖಕರಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶುಭಹಾರೈಸಿದರು.

ಹಿಮಾಲಯ ಪ್ರಕಾಶನ ಸಂಸ್ಥೆಯಡಿಯಲ್ಲಿ ಮೂಡಿಬಂದಿರುವ ಈ ಪುಸ್ತಕಗಳು ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಪಠ್ಯಕ್ಕನುಸಾರವಾಗಿ ರೂಪಿಸಲಾಗಿದೆ.

ಪುಸ್ತಕಗಳ ಲೇಖಕರುಗಳಾದ ಡಾ.ಪಿ.ಎನ್. ಉದಯಚಂದ್ರ, ಡಾ.ಕುಶಾಲಪ್ಪ, ಡಾ.ರಾಕೇಶ್ ಟಿ.ಎಸ್., ಡಾ.ಲಕ್ಷ್ಮೀನಾರಾಯಣ ಕೆ.ಎಸ್. ಹಾಗೂ ಪ್ರಕಾಶನ ಸಂಸ್ಥೆಯ ಮಹಮದ್ ಇರ್ಫಾನ್ ಹಾಗೂ ಮಹೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾ.ವೀ. ಕೃಷ್ಣದಾಸ್ ಪದಗ್ರಹಣ

Upayuktha

ಗಣೇಶನ ಕೈಯ್ಯಲ್ಲಿ ಮೈದಳೆಯುವ ಗಣಪ

Upayuktha

ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟ: ವಿವೇಕಾನಂದ ಪ.ಪೂ ಕಾಲೇಜಿನ ಚರಿತ್ ಪ್ರಕಾಶ್‌ಗೆ ಬಹುಮಾನ

Upayuktha