ಪ್ರಮುಖ ರಾಜ್ಯ

ಜಾರಕಿಹೊಳಿ ವಿರುದ್ಧ ಮತ್ತೊಂದು ದೂರು ದಾಖಲು…!

ಬೆಂಗಳೂರು: CD ವಿವಾದದಲ್ಲಿ ಸಿಲುಕಿಕೊಂಡಿರುವ ಬಿಜೆಪಿ ಮುಖಂಡ ರಮೇಶ್​ ಜಾರಕಿಹೊಳಿ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.

ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಮಹಿಳೆಗೆ ವಂಚಿಸಿದ್ದಾರೆ ಎಂದು ಆರೋಪಿಸಿ ಕನ್ನಡಿಗರ ರಕ್ಷಣಾ ವೇದಿಕೆಯ ಪ್ರಕಾಶ್ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ರಮೇಶ್ ಜಾರಕಿಹೊಳಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಮಹಿಳಾ ಆಯೋಗವು ಸಂತ್ರಸ್ತ ಮಹಿಳೆಗೆ ಸೂಕ್ತ ರಕ್ಷಣೆ ಒದಗಿಸಬೇಕು. ಮುಕ್ತವಾಗಿ ಹೊರಬಂದು ಹೇಳಿಕೆ ನೀಡಲು ಅವಕಾಶ ಮಾಡಿಕೊಡಬೇಕು. ಕಬ್ಬನ್ ಪಾರ್ಕ್ ಠಾಣೆಗೆ ಬಂದು ಅವರ ವಿರುದ್ಧ ದೂರು ದಾಖಲಿಸಲು ಸಹಾಯ ಮಾಡಬೇಕು. ಮಹಿಳೆಗೆ ನ್ಯಾಯ ಒದಗಿಸಿಕೊಡಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

Related posts

ಭಯೋತ್ಪಾದನೆ ವಿರುದ್ಧ ನಿರ್ಣಾಯಕ ಸಮರ: ‘ಹೌಡಿ ಮೋದಿ’ ರ‍್ಯಾಲಿಯಲ್ಲಿ ಪ್ರಧಾನಿ ಕರೆ

Upayuktha

ಎಸ್‌ಎಸ್‌ಎಲ್‌ಸಿ : ದ.ಕ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿರುವ 30,835 ವಿದ್ಯಾರ್ಥಿಗಳು

Upayuktha

ಬಾಲಿವುಡ್ ಖ್ಯಾತ ನಟ ಫರಾಜ್ ಖಾನ್ ನಿಧನ

Harshitha Harish