ದೇಶ-ವಿದೇಶ

ತೃಣಮೂಲ ಕಾಂಗ್ರೆಸ್ ಸಂಸದ ದಿನೇಶ್ ತ್ರಿವೇದಿ ಬಿಜೆಪಿ ಸೇರ್ಪಡೆ

ನವದೆಹಲಿ: ರೈಲ್ವೆ ಖಾತೆಯ ಮಾಜಿ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ದಿನೇಶ್ ತ್ರಿವೇದಿ ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಟಿಎಂಸಿ ಮುಖಂಡರ ಪಕ್ಷಾಂತರದ ಸುದೀರ್ಘ ಪಟ್ಟಿಯಲ್ಲಿ ಇದು ಹೊಸ ಸೇರ್ಪಡೆಯಾಗಿದೆ.

ಟಿಎಂಸಿ ಮತ್ತು ಬಿಜೆಪಿ ಎರಡು ರಾಜಕೀಯ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಸಮರ ಏರ್ಪಟ್ಟಿದ್ದು ಉಭಯ ಪಕ್ಷಗಳು ಬಂಗಾಳವನ್ನು ತಮ್ಮ ಕೈವಶ ಮಾಡಿಕೊಳ್ಳುವ ಕಾತುರತೆಯಲ್ಲಿವೆ.

ತ್ರಿವೇದಿ ಅವರು ಇತ್ತೀಚೆಗಷ್ಟೇ ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಮಾರ್ಚ್ 27 ರಿಂದ ಏಪ್ರಿಲ್ 29 ರವರೆಗೆ ಎಂಟು ಹಂತಗಳಲ್ಲಿ ಅಲ್ಲಿ ಚುನಾವಣೆ ನಡೆಯಲಿದ್ದು, ಅದರ ಫಲಿತಾಂಶವನ್ನು ಮೇ 2 ರಂದು ಪ್ರಕಟವಾಗಲಿದೆ

Related posts

ಫಡ್ನವಿಸ್‌ಗೆ ನೆರವಾದ ʼಡಬಲ್‌ ಎಂಜಿನ್‌ʼ; ಖಟ್ಟರ್‌ಗೆ ತೊಡಕಾದ ಜಾಟ್‌ ತಿರುಗೇಟು

Upayuktha

ಯುಜಿಸಿ – ಎನ್ಇಟಿ ಪರೀಕ್ಷೆ ಮೇ ತಿಂಗಳಲ್ಲಿ- ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್

Harshitha Harish

ಕೊರೊನಾ: ದೇಶದಲ್ಲಿ ನಿನ್ನೆ ಒಂದೇ ದಿನ 11 ಸಾವು, ಹೊಸದಾಗಿ 157 ಮಂದಿಗೆ ಸೋಂಕು

Upayuktha