ನಗರ ಸ್ಥಳೀಯ

ಹಿಂದಿನ ಸೇವೆಯನ್ನೂ ಪರಿಗಣಿಸಿ: ರಾಜ್ಯ ವೃತ್ತಿ ಶಿಕ್ಷಣ ಅರೆಕಾಲಿಕ ನೌಕರರ ಮನವಿ

ಪುತ್ತೂರು: ಕರ್ನಾಟಕ ರಾಜ್ಯ ವೃತ್ತಿ ಶಿಕ್ಷಣ ಅರೆಕಾಲಿಕ ನೌಕರರ ಸೇವೆ ವಿಲೀನಗೊಳಿಸುವ ವಿಧೇಯಕ-2011 ಅನ್ವಯ ಸೇವಾ ವಿಲೀನಗೊಳ್ಳುವ ಹಿಂದಿನ ಸೇವೆಯನ್ನು ಪರಿಗಣಿಸುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವೃತ್ತಿ ಶಿಕ್ಷಣ ಇಲಾಖೆ (ಜೆಓಸಿ)ಯಿಂದ ಸೇವಾ ಸಕ್ರಮಾತಿ ಹೊಂದಿ ವಿವಿಧ ಇಲಾಖೆ ಹಾಗೂ ಅನುದಾನಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ವಿಲೀನಗೊಳ್ಳುವ ಮುಂಚೆ ವೃತ್ತಿಶಿಕ್ಷಣ ಇಲಾಖೆ (ಜೆಓಸಿ) ಯಲ್ಲಿ ಸಂಭಾವನೆ ಆಧಾರದ ಮೇಲೆ ಹಲವಾರು ವರ್ಷಗಳಿಂದ ನಿರಂತರವಾಗಿ ಸೇವೆಯನ್ನು ಸಲ್ಲಿಸಿದ್ದೇವೆ. ಬಹುತೇಕ ಸಿಬ್ಬಂದಿಗಳು ನಿವೃತ್ತಿಯ ಅಂಚಿನಲ್ಲಿರುವುದರಿಂದ ಮತ್ತು ನಿವೃತ್ತಿ ಆಗಿದ್ದರಿಂದ ಅವರಿಗೆ ಕೊನೆಯ ತಿಂಗಳ ವೇತನ ಬಿಟ್ಟು ನಿವೃತ್ತಿ ನಂತರದ ಯಾವುದೇ ರೀತಿಯ ಪಿಂಚಣಿ ಮತ್ತು ಇನ್ನಿತರ ಸೌಲಭ್ಯಗಳು ಸಿಗುತ್ತಿಲ್ಲ. ಆದ್ದರಿಂದ ವಿಲೀನತೆಯ ಹಿಂದಿನ ಸೇವೆಯನ್ನು ಪರಿಗಣಿಸಿ ಹಳೆಯ ನಿಶ್ಚಿತ ಪಿಂಚಣಿ ನೀಡಿದರೆ ನಿವೃತ್ತಿ ಜೀವನವನ್ನಾದರೂ ಗೌರವಯುತವಾಗಿ ನಡೆಸಲು ಅನುಕೂಲವಾಗುತ್ತದೆ. ನಾವು ವಿಲೀನತೆಗೊಳ್ಳುವ ಹಿಂದಿನ ಸೇವೆಯ ಅವಧಿಯನ್ನು ಪರಿಗಣಿಸಬೇಕು ಮತ್ತು ಹಿಂದಿನ ಸೇವೆಯ ಅವಧಿಯ ಬಾಕಿ ವೇತನವನ್ನು ಕೇಳುವುದಿಲ್ಲ ಎಂದು ಮನವಿ ಮೂಲಕ ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಿಲೀನಗೊಂಡಿರುವ ಜೆಓಸಿ ಸಿಬ್ಬಂದಿಗಳಾದ ಬಾಲಚಂದ್ರ ಹೆಬ್ಬಾರ್, ಶೈಲೇಶ, ತೋಟರ ಎಮ್.ಎಸ್., ಗೀತಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್ ಸುದ್ದಿಜಾಲ)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ವೀರರಾಣಿ ಅಬ್ಬಕ್ಕ ಉತ್ಸವ ಕ್ರೀಡಾ ಪಂದ್ಯಾಟ ಫೆ.23ಕ್ಕೆ

Upayuktha

ಶ್ರೀರಾಮ ನೈವೇದ್ಯಕ್ಕೆ ಭತ್ತದ ನಾಟಿ

Upayuktha

ಟೆನ್ನಿಕಾಯ್ಟ್‌ ಸ್ಫರ್ಧೆ: ವಿವೇಕಾನಂದ ಪ.ಪೂ ಕಾಲೇಜಿನ ಅನನ್ಯ ಭಟ್ ಮತ್ತು ಎಂ. ಎಸ್ ದೀಪಾಲಿ ರಾಜ್ಯ ಮಟ್ಟಕ್ಕೆ ಆಯ್ಕೆ

Upayuktha