ನಗರ ಸ್ಥಳೀಯ

ಸಂವಿಧಾನವನ್ನು ಅರಿಯುವುದೇ ಸಂವಿಧಾನ ದಿನದ ಉದ್ದೇಶ: ಶಾಸಕ ಡಾ. ಭರತ್ ಶೆಟ್ಟಿ

ಮಂಗಳೂರು: ಭಾರತೀಯ ಜನತಾ ಪಾರ್ಟಿಯ ವತಿಯಿಂದ ನಾವು ಸಂವಿಧಾನ ದಿನವನ್ನು ಆಚರಿಸುತ್ತಿದ್ದೇವೆ. ಇದರ ಮುಖ್ಯ ಉದ್ದೇಶ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರು ಮಾಡಿರುವ ಸಂವಿಧಾನವನ್ನು ಪೂರ್ಣ ಪ್ರಮಾಣದಲ್ಲಿ ಅರಿಯಲು ಒಂದು ಪ್ರಯತ್ನ ಎಂದು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಹೇಳಿದರು.

ಅವರು ವಾಮಂಜೂರಿನ ಅಂಬೇಡ್ಕರ್ ನಗರದ ಅಂಬೇಡ್ಕರ್ ಭವನದಲ್ಲಿ ಭಾಜಪಾ ಮಂಗಳೂರು ನಗರ ಉತ್ತರ ಎಸ್ ಸಿ ಮೋರ್ಚಾ ಮತ್ತು ಅಂಬೇಡ್ಕರ್ ಯುವಕ ಸಂಘ ಜಂಟಿಯಾಗಿ ಆಯೋಜಿಸಿದ ಸಂವಿಧಾನದ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸಂವಿಧಾನವನ್ನು ರಚಿಸುವಾಗಲೇ ಕಾಲಕಾಲಕ್ಕೆ ಅಗತ್ಯವಿರುವ ಬದಲಾವಣೆಗಳನ್ನು ಮಾಡಲು ಸಂವಿಧಾನ ನಿರ್ಮಾತೃ ಡಾ.ಬಿ.ಆರ್. ಅಂಬೇಡ್ಕರ್ ಅವಕಾಶ ಇಟ್ಟಿದ್ದರು. ಇನ್ನು ಸಂವಿಧಾನವನ್ನು ನಮಗೆ ನೀಡಿರುವ ಹಕ್ಕು ಮತ್ತು ಹೊಣೆಗಾರಿಕೆಯನ್ನು ಅರಿತುಕೊಂಡು ನಾವು ಕಾರ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಆನಂದ್ ಪಾಂಗಾಳ್ ಅಧ್ಯಕ್ಷರು ಎಸ್ ಸಿ ಮೋರ್ಚಾ, ಸಂದೀಪ್ ಪಚ್ಚನಾಡಿ ಪ್ರಧಾನ ಕಾರ್ಯದರ್ಶಿ ಉತ್ತರ ಮಂಡಲ, ಮನಪಾ ಸದಸ್ಯರುಗಳಾದ ಹೇಮಲತಾ ರಘು ಸಾಲಿಯಾನ್, ಮನೋಜ್ ಕುಮಾರ್, ಉತ್ತರ ಮಂಡಲ ಉಪಾಧ್ಯಕ್ಷರುಗಳಾದ ಗಣೇಶ ಪಾಕಾಜೆ, ಅಮರೇಶ ಬೇಕಲ್, ಹರೀಶ್ ಅಧ್ಯಕ್ಷರು ಅಂಬೇಡ್ಕರ್ ಯುವಕ ಸಂಘ, ಅಶೋಕ್ ವಾಮಂಜೂರ್ ಪ್ರದಾನ ಕಾರ್ಯದರ್ಶಿ ಎಸ್ ಸಿ ಮೋರ್ಚಾ, ಹರೀಶ್ ಪಣಂಬೂರು ಪ್ರಧಾನ ಕಾರ್ಯದರ್ಶಿ ಆಶಾಲತಾ, ಸಹಾಯ ಪ್ರಾಧ್ಯಾಪಕರು ಗೋವಿಂದ ದಾಸ್ ಕಾಲೇಜ್ ಹಾಗೂ ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

 

Related posts

ಮಣಿಯಂಪಾರೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ 23ನೇ ವಾರ್ಷಿಕೋತ್ಸವ ಸಂಪನ್ನ

Upayuktha

ಕನಕದಾಸರು ಇಂದಿಗೂ ಪ್ರಸ್ತುತ: ಉಡುಪಿ ಜಿಲ್ಲಾಧಿಕಾರಿ ಜಗದೀಶ್

Upayuktha

ರಕ್ತದಾನ ಶ್ರೇಷ್ಠದಾನ: ಡಾ| ಚೂಂತಾರು

Upayuktha