ರಾಜ್ಯ

ಹಿಂದಿನ ಮಾನದಂಡದಂತೆ ಬಿಪಿಎಲ್ ಕಾರ್ಡ್ ಮುಂದುವರಿಕೆ- ಬಿಎಸ್ ವೈ

ಶಿವಮೊಗ್ಗ: ಬಿಪಿಎಲ್‌ ಕಾರ್ಡ್‌ಗಳಿಗೆ ಸಂಬಂಧಪಟ್ಟಂತೆ 2017 ರ ಮಾನದಂಡವೇ ಮುಂದುವರಿಯಲಿದೆ. ಆದರೆ ಬಡತನ ರೇಖೆಗಿಂತ ಮೇಲ್ಪಟ್ಟವರು ಬಿಪಿಎಲ್‌ ಕಾರ್ಡುಗಳನ್ನು ಹೊಂದಿದ್ದು ಸರ್ಕಾರದ ಗಮನಕ್ಕೆ ಬಂದಿದೆ. ಅಕ್ರಮವಾಗಿ ಕಾರ್ಡುಗಳನ್ನು ಪಡೆದುಕೊಂಡಿರುವವರು ಅವುಗಳನ್ನು ಹಿಂತಿರುಗಿಸುವಂತೆ ಮಾಡಿದ್ದಾರೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದ್ದಾರೆ.

ಬಡವರಿಗೆ ಸಿಗಬೇಕಾದ ಆಹಾರ ಭದ್ರತೆಯಲ್ಲಿ ಅಕ್ರಮಗಳಾಗುವುದನ್ನು ತಡೆಯಬೇಕಿದೆ. ಶ್ರೀಮಂತರೂ ಸಹ ಬಿಪಿಎಲ್‌ ಕಾರ್ಡ್‌ ಮೂಲಕ ಸಾಮಾನ್ಯರ ಆಹಾರ ಅಗತ್ಯತೆಗಳಲ್ಲಿ ಅಕ್ರಮ ಎಸಗುತ್ತಿದ್ದಾರೆ.

ಈ ಕಾರಣದಿಂದ ಅನಗತ್ಯವಾಗಿ ಬಿಪಿಎಲ್‌ ಕಾರ್ಡುಗಳನ್ನು ಪಡೆದಿರುವವರಿಂದ ಅವುಗಳನ್ನು ವಶಕ್ಕೆ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿಯೂ ಅವರು ಹೇಳಿದ್ದಾರೆ.

ರಾಜ್ಯದ ಬಡ ಜನರಿಗೆ ಆಹಾರ ಸಮಸ್ಯೆ ಉದ್ಭವವಾಗಬಾರದು ಎಂಬ ಕಾರಣದಿಂದ ಬಿಪಿಎಲ್‌ ಕಾರ್ಡ್‌ಗಳ ಮೂಲಕ ಆಹಾರ ಹಂಚಿಕೆ ಮಾಡಲಾಗುತ್ತಿದೆ.

ಹಾಗೆಯೇ ಬಿಪಿಎಲ್‌ ಕಾರ್ಡು ಹೊಂದುವುದಕ್ಕೆ ಸಂಬಂಧಿಸಿದಂತೆ 2017 ರ ನಿಯಮಗಳೇ ಅನ್ವಯವಾಗಲಿದ್ದು, ಈ ಬಗ್ಗೆ ಜನರಲ್ಲಿ ಸಂದೇಹಗಳು, ಗೊಂದಲಗಳು ಬೇಡ ಎಂದು ವಿವರಿಸಿದ್ದಾರೆ.

Related posts

ಯೋಜನಾ ಮಂಡಳಿ ಸದಸ್ಯರಾಗಿ ಎಸಿ ಲಕ್ಷ್ಮಣ್ ನೇಮಕ

Upayuktha

ಋಷಿಯುಗ- ಕಲಿಯುಗ ಶಿಕ್ಷಣದ ಸಮನ್ವಯ ಅಗತ್ಯ: ರಾಘವೇಶ್ವರ ಶ್ರೀ

Upayuktha

ಅರಣ್ಯ ನಾಶಕ್ಕೆ ಕಾರಣರಾಗುವವರ ಮೇಲೆ ಕ್ರಮ- ಅರವಿಂದ ಲಿಂಬಾವಳಿ

Harshitha Harish