ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮತ್ತು ಪೌರ ರಕ್ಷಣಾ ಪಡೆಗಳು ಜಂಟಿಯಾಗಿ ಸಾರ್ವಜನಿಕರಲ್ಲಿ ಕೊರೊನಾ ಸಾಂಕ್ರಾಮಿಕದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಬಂದಿದೆ ಕೊರೊನಾ, ಇರಲಿ ಜೋಪಾನ ಎಂಬ 10:37 ನಿಮಿಷಗಳ ಅವಧಿಯ ಕಿರುಚಿತ್ರವೊಂದನ್ನು ನಿರ್ಮಿಸಿದ್ದಾರೆ.
ಈ ಕಿರುಚಿತ್ರಕ್ಕೆ ಮಂಜೇಶ್ವರದ ಖ್ಯಾತ ವೈದ್ಯ ಡಾ. ರಮಾನಂದ ಬನಾರಿ ಅವರು ರಚಿಸಿದ ಕೊರೊನಾ ಜಾಗೃತಿ ಗೀತೆಯನ್ನು ಅಳವಡಿಸಲಾಗಿದೆ. ಗೀತೆಗೆ ರಾಗ ಸಂಯೋಜಿಸಿ ಜಾನಪದ ಶೈಲಿಯಲ್ಲಿ ಹಾಡಿಸಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಹಾಗೂ ಪೌರ ರಕ್ಷಣಾ ಪಡೆಯ ಚೀಫ್ ವಾರ್ಡನ್ ಆಗಿರುವ ಡಾ. ಮುರಲೀ ಮೋಹನ್ ಚೂಂತಾರು ಈ ಕಿರುಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪೊಸಕುರಲ್ ಬಳಗದ ವಿದ್ಯಾಧರ ಶೆಟ್ಟಿ ಮತ್ತು ತಂಡದವರು ಚಿತ್ರೀಕರಣ ಮಾಡಿದ್ದಾರೆ.
ಈ ಕವನವನ್ನು ಉಪಯುಕ್ತ ನ್ಯೂಸ್ ಈ ಹಿಂದೆಯೇ ಪ್ರಕಟಿಸಿತ್ತು.
ಪೌರ ರಕ್ಷಣಾ ಪಡೆಯ ಕಾರ್ಯಕರ್ತ ಡಾ. ನಿತಿನ್ ಆಚಾರ್ಯ ಈ ಹಾಡನ್ನು ಹಾಡಿದ್ದಾರೆ. ನೀವೂ ಆಲಿಸಿ,,, ಹೆಚ್ಚು ಹೆಚ್ಚು ಶೇರ್ ಮಾಡಿ ಎಲ್ಲರಲ್ಲೂ ಜಾಗೃತಿ ಮೂಡಿಸಿ…
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ