ನಗರ ಸ್ಥಳೀಯ

ದ.ಕ. 16ಕ್ಕೇರಿದ ಕೊರೊನಾ ಪ್ರಕರಣ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಒಂದು ಕೊರೊನಾ ಪಾಸಿಟಿವ್ ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ದಾಖಲಾದ ಪ್ರಕರಣಗಳ ಸಂಖ್ಯೆ 16 ಕ್ಕೆ ಏರಿಕೆಯಾಗಿದೆ.

ಬಂಟ್ವಾಳದಲ್ಲಿ ಕೊರೊನಾದಿಂದ ಭಾನುವಾರ ಮೃತಪಟ್ಟ ಮಹಿಳೆಯ ಪಕ್ಕದ ಮನೆಯ ಮಹಿಳೆಯೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದುವರೆಗೆ 12 ಮಂದಿ ಗುಣಮುಖರಾಗಿದ್ದಾರೆ. ಮೂವರು ಚಿಕಿತ್ಸೆಯಲ್ಲಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಇಂದು ಯಾವುದೇ ಸೋಂಕು ದೃಢಪಟ್ಟಿಲ್ಲ. ಕಾಸರಗೋಡು ಜಿಲ್ಲೆಯಲ್ಲಿ ಹಾಗೂ ಕೇರಳದಲ್ಲಿ ಅಬ್ಬರ ನಿಲ್ಲಿಸಿದ್ದ ಕೊರೊನಾ ಮತ್ತೆ ಸದ್ದು ಮಾಡಿದೆ. ಕಾಸರಗೋಡಿನಲ್ಲಿ ಇಂದು ಮೂರು ಪ್ರಕರಣ ಹಾಗೂ ಕೇರಳದಲ್ಲಿ 19 ಕೊರೊನಾ ಪ್ರಕರಣ ವರದಿಯಾಗಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

‘ಹೋಗಿ ಬನ್ನಿ ಸೀತ’ಕ್ಕ: ಪತ್ರಕರ್ತೆ ಸೀತಾಲಕ್ಷ್ಮೀಗೆ ಶ್ರದ್ಧಾಂಜಲಿ

Upayuktha

ಬೆಳ್ತಂಗಡಿ: ಮೂವರು ಸ್ಕೂಟರ್ ಕಳ್ಳರ ಬಂಧನ

Upayuktha

ಕ್ರಿಸ್ಮಸ್‌, ಹೊಸವರ್ಷಾಚರಣೆ ವಿಶೇಷ: ಬೇಕಲಕೋಟೆಯಲ್ಲಿ ಡಿ.24ರಿಂದ ಕೃಷಿ- ಫಲ-ಪುಷ್ಪ ಮೇಳ

Upayuktha