ನಗರ ಸ್ಥಳೀಯ

ಕೊರೊನಾ ಸೋಂಕಿತನ ಮುಕ್ತ ಓಡಾಟ: ಕಾಸರಗೋಡು, ಮಂಜೇಶ್ವರದ ಶಾಸಕರಿಗೆ ಬಂತು ಪೀಕಲಾಟ

ಕಾಸರಗೋಡು: ಕೊರೊನಾ ವೈರಸ್ ಸೋಂಕಿನ ಸಂದೇಹದ ಮೇರೆಗೆ ಕಾಸರಗೋಡು ಮತ್ತು ಮಂಜೇಶ್ವರದ ಇಬ್ಬರು ಶಾಸಕರು ತಮ್ಮನ್ನು ತಾವು ಮನೆಯಲ್ಲೇ ಪ್ರತ್ಯೇಕವಾಗಿ (ಹೋಮ್ ಕ್ವಾರಂಟೈನ್) ಉಳಿಯುವುದಾಗಿ ಪ್ರಕಟಿಸಿದ್ದಾರೆ.

ಕೊರೊನಾ ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟಿರುವ ವ್ಯಕ್ತಿಯೊಬ್ಬ ಮದುವೆ, ಸಭೆ ಸಮಾರಂಭದಲ್ಲೆಲ್ಲ ಮುಕ್ತವಾಗಿ ಓಡಾಡಿದ ಹಿನ್ನೆಲೆಯಲ್ಲಿ ಹಾಗೂ ಆ ಕಾರ್ಯಕ್ರಮಗಳಲ್ಲಿ ಈ ಶಾಸಕರಿಬ್ಬರೂ ಭಾಗವಹಿಸಿದ ಹಿನ್ನೆಲೆಯಲ್ಲಿ ಹೋಮ್ ಕ್ವಾರಂಟೈನ್‌ಗೆ ಒಳಗಾಗಲು ಮುಂದಾಗಿದ್ದಾರೆ.

ಕಾಸರಗೋಡು ಶಾಸಕ ಎನ್‌ಎ ನೆಲ್ಲಿಕುನ್ನು ಮತ್ತು ಮಂಜೇಶ್ವರದ ಶಾಸಕ ಎಂ.ಸಿ ಕಮರುದ್ದೀನ್ ಅವರೇ ಮುಂಜಾಗ್ರತೆ ಕ್ರಮವಾಗಿ ಗೃಹ ವಿಶ್ರಾಂತಿಗೆ ಒಳಗಾದವರು.

ಕೊರೊನಾ ಸೋಂಕಿತ ವ್ಯಕ್ತಿ ಶಾಸಕ ಕಮರುದ್ದೀನ್ ಅವರ ಕೈಕುಲುಕಿದ ಚಿತ್ರಗಳೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೊರೊನಾ ಸೋಂಕಿತ ರೋಗಿ ದುಬೈನಿಂದ ಹೊರಟು ಮಾರ್ಚ್‌ 11ರಂದು ಬೆಳಗ್ಗೆ 8 ಗಂಟೆಗೆ ಕೋಯಿಕ್ಕೋಡ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಅಲ್ಲಿ ಆ ದಿನ ವಾಸ್ತವ್ಯ ಹೂಡಿ, ಮರುದಿನ ಕೋಯಿಕ್ಕೋಡ್ ನಿಂದ ಕಾಸರಗೋಡಿಗೆ ಮಾವೇಲಿ ಎಕ್ಸ್‌ಪ್ರೆಸ್ ರೈಲಿನ ಎಸ್‌ 9ನ ಸ್ಲೀಪರ್‌ ಕೋಚ್‌ನಲ್ಲಿ ಪ್ರಯಾಣಿಸಿದ್ದ. ಅನಂತರ ಕಾಸರಗೋಡಿನ ಹಲವು ಸ್ಥಳಗಳಲ್ಲಿ ಸಂಚರಿಸಿ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಿದ್ದ. ಈ ಅವಧಿಯಲ್ಲಿ ಸಾವಿರಾರು ಮಂದಿಯನ್ನು ಆತ ಭೇಟಿ ಮಾಡಿದ್ದ.

ಕಾಸರಗೋಡಿನಲ್ಲಿ ಈಗಾಗಲೇ ಒಂದು ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ವರದಿಯಾದ ಬಳಿಕವಷ್ಟೇ ಈ ವ್ಯಕ್ತಿ ಮಾರ್ಚ್ 16ರಂದು ಕಾಸರಗೋಡು ಜನರಲ್ ಆಸ್ಪತ್ರೆಗೆ ತೆರಳಿದ್ದ. ಆತನ ಮಾದರಿಗಳನ್ನು ಪರೀಕ್ಷೆಗೆ ತೆಗೆದುಕೊಂಡು ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ಆತ ಎಲ್ಲೆಲ್ಲ ಹೋಗಿದ್ದ, ಯಾರನ್ನೆಲ್ಲ ಭೇಟಿ ಮಾಡಿದ್ದ ಎಂದು ಹುಡುಕುವ ಕಾರ್ಯದಲ್ಲಿ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಪಡ್ಡಾಯೂರಿನ ಅನ್ನಪೂರ್ಣೇಶ್ವರಿ ಭಜನಾ ಮಂದಿರದಲ್ಲಿ ಸಾರ್ವಜನಿಕ ಗೋ ಪೂಜೆ

Upayuktha

ಕಾನೂನು ಪಾಲಕರ ರಕ್ಷಣೆ- ಸಮಾಜ ವಿರೋಧಿಗಳಿಗೆ ಎಚ್ಚರಿಕೆ: ಎನ್ ಶಶಿಕುಮಾರ್

Upayuktha

ಕರಾವಳಿಗೆ ಮತ್ತೆ ಚಂಡಮಾರುತ: ಕಾಸರಗೋಡು ಜಿಲ್ಲೆಯಲ್ಲಿ ನಾಳೆ ಶಾಲೆ, ಕಾಲೇಜುಗಳಿಗೆ ರಜೆ

Upayuktha