ಜಿಲ್ಲಾ ಸುದ್ದಿಗಳು

ಮಡಿಕೇರಿಯ ಕೋವಿಡ್ ವಾರಿಯರ್ ಡಾ. ಸುಷ್ಮಿತಾ ಬಿ

ಕಾಸರಗೋಡು: ಮುಳ್ಳೇರಿಯಾ ಮಂಡಲ ಪಳ್ಳತ್ತಡ್ಕ ವಲಯ ಮುಣ್ಚಿಕ್ಕಾನ ಘಟಕದ ವಿಶ್ವನಾಥ ಶರ್ಮ ಹಾಗೂ ಸುಮನ ಇವರ ಪುತ್ರಿಯಾದ ಡಾ. ಸುಷ್ಮಿತಾ ಬಿ ಇವರು ಮಡಿಕೇರಿಯ ಕೊಡಗು ಇನ್‌ಸ್ಟಿಟ್ಯೂಟ್ ಆಫ್‌ ಮೆಡಿಕಲ್‌ ಸೈನ್ಸ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಕೊರೊನ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಡಾ. ಸುಷ್ಮಿತಾ ಬಿ ಇವರು ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನಲ್ಲಿ ಎ ಪ್ಲಸ್ ಗ್ರೇಡ್‌ನೊಂದಿಗೆ ಹೈಸ್ಕೂಲು ಶಿಕ್ಷಣ ಮುಗಿಸಿ ಪುತ್ತೂರು ವಿವೇಕಾನಂದ ಕಾಲೇಜಿಲ್ಲಿ ಪಿಯುಸಿ ಓದಿದ್ದರು.

ಬಳಿಕ ಶಿವಮೊಗ್ಗದ ಸುಬ್ಬಯ್ಯ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಎಂಬಿಬಿಎಸ್‌ ಶಿಕ್ಷಣ ಮುಗಿಸಿ ಪ್ರಸ್ತುತ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಿರಿಯ ರೆಸಿಡೆಂಟ್ ಡಾಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಪೂಜಾ ಸೇವೆಗಳು ಆರಂಭ

Harshitha Harish

ತೋಟಗಾರಿಕೆ: ನರೇಗಾ ಯೋಜನೆಯಡಿ ರೈತರಿಂದ ಅರ್ಜಿ ಆಹ್ವಾನ

Upayuktha

ಸುಳ್ಯದ ಶಾಸಕರಿಗೂ ಕೋವಿಡ್

Harshitha Harish

Leave a Comment