ಕತೆ-ಕವನಗಳು ಭಾಷಾ ವೈವಿಧ್ಯ

ಕೊರೋನಾದ ಆಟ ನಿಲ್ಲದ್ದರೆ?

 

ಮಕ್ಕಳ ಮನೆಲಿ ಎತ್ತಿ ಪ್ರೀತಿಲಿ ಬೆಳಶುವವು


ಎಕ್ಕಸಕ್ಕ ಅವರ ಕೊಂಡಾಟ ಮಾಡುವವು
ಅಬ್ಬೆ ಅಪ್ಪ° ಅಜ್ಜ° ಅಜ್ಜಿ, ಮುದಿಯಜ್ಜ, ಮಾವ
ಅಪ್ಪಚ್ಚಿ ದೊಡ್ಡಪ್ಪ °ಸತ್ತು ಸೇರುಗು ಸ್ವರ್ಗವ

ಇರುಳು ಬೇಗ ಮನುಗಿ ಒರಗುವವು
ಸೂರ್ಯ°ಕಾಂಬ ಮೊದಲೇ ಏಳುವವು
ಜಾಲ ಕರೆಲಿಪ್ಪ ಗೆಡುಗೊಕ್ಕೆ ನೀರೆರವವು
ದೇವರ ಪೂಜೆಗೆ ಹೂ ಕೊಯ್ವವು ಇರವು!

ಜೆನರ ಕಂಡಪ್ಪದ್ದೆ ನೆಗೆ ಮಲ್ಲಿಗೆ ಅರಳಿಸುವವು
ನೆರೆಕರೆಯವರ ಸುಖ ದುಃಖ ವಿಚಾರಿಸುವವು
ಕೈ ಎರಡರ ಸೇರಿಸಿ ಕೈ ಮುಗಿವವು
ಇರವು ಹಳೆಯ ಫೋನಿಲ್ಲಿ ಮಾತಾಡುವವು

ನಿತ್ಯವೂ ದಿನಚರಿಯ ತಪ್ಪದ್ದೆ ಬರವವು
ಪತ್ರಿಕೆ ಇಡೀ ಓದುವವು ವ್ರತ ಆಚರಿಸುವವು
ಹಳೆಯ ವಸ್ತ್ರಗಳ ಇಡ್ಕದ್ದೆ ಉಡುವವು
ಮಕ್ಕಳ ಕೂರಿಸಿ ಕತೆ ಹೇಳುವವು ಇರವು.

*ಗುಣಾಜೆ ರಾಮಚಂದ್ರ ಭಟ್*

Related posts

ಕವನ: ಸಾಧನಕೇರಿಯ ಸಾಧಕರು

Upayuktha

ಕವನ: ಮಮಕಾರದ ಮನಸು

Upayuktha

*ಪ್ರೇಯಸಿ*

Harshitha Harish