ಆರೋಗ್ಯ ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಕೊರೊನಾ ವೈರಸ್‌: ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ ಜಾಗೃತಿ ಅಭಿಯಾನ

ತಲಪಾಡಿ: ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆತಂಕ ಮೂಡಿಸುತ್ತಿರುವ ಕೊರೊನಾ ವೈರಸ್ಸಿನ ಬಗ್ಗೆ ಜನ ಜಾಗೃತಿ ಅಭಿಯಾನವನ್ನು ತಲಪಾಡಿಯ ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಿದ್ಯಾರ್ಥಿಗಳು,ಅಧ್ಯಾಪಕರು ಮತ್ತು ಸಿಬ್ಬಂದಿಗಳು ಸೇರಿ ದೇವಿ ನಗರ, ಕೆಸಿ ರೋಡ್, ಬೀರಿ, ಉಳ್ಳಾಲ, ತೊಕ್ಕೊಟ್ಟು ಮತ್ತು ದೇರಳಕಟ್ಟೆಗಳಲ್ಲಿ ಜಾಥಾ, ಭಿತ್ತಿಪತ್ರ, ಬೀದಿ ನಾಟಕಗಳನ್ನು ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಶಾರದಾ ಆಯುರ್ಧಾಮದಿಂದ ಹೊರಟ ಜಾಥಕ್ಕೆ ತುಳುನಾಡು ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಪ್ರೊ. ಎಂ. ಬಿ. ಪುರಾಣಿಕ್ ಹಸಿರು ನಿಶಾನೆ ತೋರಿಸಿ, ‘ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಜೊತೆಗೆ ಸದಾ ಸಮುದಾಯದಲ್ಲಿ ನೈಜ ಮತ್ತು ನಿಖರವಾದ ಮಾಹಿತಿಯನ್ನು ನೀಡುವ ಮೂಲಕ ಪ್ರಜ್ಞಾವಂತ ಸ್ವಸ್ಥ ಸಮಾಜವನ್ನು ನಿರ್ಮಿಸುವ ಜವಾಬ್ದಾರಿಯನ್ನು ಹೊಂದಿದ್ದೀರಿ’ ಎಂದರು.

ಟ್ರಸ್ಟ್ ನ ವಿಶ್ವಸ್ಥರಾದ ಡಾ. ಸೀತಾರಾಮ್ ಭಟ್ ದಂಡತೀರ್ಥ, ಆಡಳಿತಾಧಿಕಾರಿ ವಿವೇಕ್ ತಂತ್ರಿ , ಶಾರದಾ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ರವಿ ಗಣೇಶ್ ಮೊಗ್ರ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಶ್ ಪಾದೆಕಲ್ ಇನ್ನಿತರರು ಉಪಸ್ಥಿತರಿದ್ದರು. ಕೆಸಿ ರೋಡಿನಲ್ಲಿ ನಡೆದ ಅಭಿಯಾನದಲ್ಲಿ ತಲಪಾಡಿ ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ, ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು, ಮೊದಲಾದವರು ಭಾಗವಹಿಸಿದ್ದರು.

ಉಳ್ಳಾಲದಲ್ಲಿ ಬಿಜೆಪಿಯ ಬ್ಲಾಕ್ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ಬೀರಿ, ತೊಕ್ಕೊಟ್ಟು ಮತ್ತು ದೇರಳಕಟ್ಟೆಗಳಲ್ಲಿ ಸಾರ್ವಜನಿಕರು ಭಾಗವಹಿಸಿ ಸೂಕ್ತ ಮಾಹಿತಿ ಪಡೆದುಕೊಂಡರು. ಶಾರದಾ ಆಯುರ್ಧಾಮ ವತಿಯಿಂದ ಹಲವು ದೃಶ್ಯ-ಶ್ರಾವ್ಯ ಮಾಧ್ಯಮಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅರಿವು ಆಂದೋಲನ ನಡೆಯುತ್ತಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಭಾರತೀಯ ವೈದ್ಯಶಾಸ್ತ್ರ ಜಗತ್ತಿಗೆ ಪರಿಚಯವಾಗಲಿ: ಡಾ. ಕಿರಿಶಾಲ್

Upayuktha

ಜೆ.ಎಫ್‌ ಡಿ’ಸೋಜಾಗೆ ಕೊಂಕಣಿ ಕುಟಮ್ ಪ್ರಶಸ್ತಿ ಪ್ರದಾನ

Upayuktha

ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ

Harshitha Harish

Leave a Comment