ಪ್ರಮುಖ ರಾಜ್ಯ

ಕೊರೊನಾ ಆತಂಕ: ನಾಳೆಯಿಂದ ಒಂದು ವಾರ ಇವೆಲ್ಲ ಬಂದ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ ಹರಡುವುದನ್ನು ತಡೆಯುವ ನಿಟ್ಟಿನಿಲ್ಲಿ ಮುಂಜಾಗ್ರತಾ ಕ್ರಮವಾಗಿ ಜನ ಜಂಗುಳಿ ಸೇರಬಹುದಾದ ಎಲ್ಲ ಅವಕಾಶಗಳನ್ನೂ ರದ್ದುಪಡಿಸಲು ಸರಕಾರ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ನಾಳೆಯಿಂದಲೇ (ಶನಿವಾರ) ಜಾರಿಗೆ ಬರುವಂತೆ ಒಂದು ವಾರ ಕಾಲ ಬಾರ್‌, ರೆಸ್ಟೋರೆಂಟ್‌, ಮಾಲ್‌, ವಸ್ತುಪ್ರದರ್ಶನಗಳನ್ನು ಬಂದ್ ಮಾಡುವಂತೆ ಆದೇಶ ನೀಡಿದೆ. ಒಂದು ವಾರ ಕಾಲ ರಾಜ್ಯದ ಎಲ್ಲ ಶಾಲಾ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಮುಚ್ಚಲಿವೆ.

ಮದುವೆಯಂತಹ ಸಮಾರಂಭಗಳನ್ನೂ ಸರಳವಾಗಿ ಆಚರಿಸುವಂತೆ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಜನತೆಗೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ವೈರಸ್ ಹಾವಳಿ ತಡೆಗಟ್ಟಲು ಶನಿವಾರದಿಂದ ಒಂದು ವಾರ ಕಾಲ ಎಲ್ಲ ಶಾಲೆ ಕಾಲೇಜುಗಳು, ವಿಶ್ವವಿದ್ಯಾಲಯಗಳು, ಬಾರ್‌, ರೆಸ್ಟೋರೆಂಟ್‌, ಮಾಲ್‌ಗಳು, ಸಿನಿಮಾ ಥಿಯೇಟರ್‌ಗಳು- ಹೀಗೆ ಜನಜಂಗುಳಿ ಸೇರುವ ಎಲ್ಲ ತಾಣಗಳನ್ನು ಬಂದ್ ಮಾಡಲು ರಾಜ್ಯ ಸರಕಾರ ಆದೇಶಿಸಿದೆ. ಮುಖ್ಯಮಂತ್ರಿ ಬಿಎಸ್‌. ಯಡಿಯೂರಪ್ಪ ಅವರು ಇಂದು ಬೆಂಗಳೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅವರ ‘ಕಲ್ಪಲತಾ’ ಕೃತಿ ಅ.1ರಂದು ಲೋಕಾರ್ಪಣೆ

Upayuktha

ಆಳ್ವಾಸ್‌ ಎಂಜಿನಿಯರಿಂಗ್ ವಿದ್ಯಾರ್ಥಿಯಿಂದ ಸ್ಟಾರ್ಟಪ್

Upayuktha

ಉಡುಪಿಯಲ್ಲಿ ಲಾಕ್‌ಡೌನ್ ಪಾಲನೆ ಬಗ್ಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಪರಿಶೀಲನೆ

Upayuktha