ಅಪರಾಧ ದೇಶ-ವಿದೇಶ

ಜಯಾ ಜೇಟ್ಲಿ, ಸಂಗಡಿಗರಿಗೆ 4 ವರ್ಷ ಜೈಲು, 1 ಲಕ್ಷ ರೂ ದಂಡ ವಿಧಿಸಿದ ದಿಲ್ಲಿ ವಿಶೇಷ ನ್ಯಾಯಾಲಯ

 

ಹೊಸದಿಲ್ಲಿ:  ವಾಜಪೇಯಿ ಸರಕಾರದ ಅವಧಿಯಲ್ಲಿ ರಕ್ಷಣಾ ಖರೀದಿಗಳ ಮೇಲೆ ಪ್ರಭಾವ ಬೀರಿದ್ದಕ್ಕೆ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ರವರ ನಿಕಟವರ್ತಿ ಸಮತಾ ಪಾರ್ಟಿ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ಅವರಿಗೆ 4 ವರ್ಷಗಳ ಜೈಲು ಶಿಕ್ಷೆಯನ್ನು ಹಾಗೂ ಮೂವರಿಗೂ ತಲಾ ಒಂದು ಲಕ್ಷ ದಂಡವನ್ನು ವಿಧಿಸಿ ದಿಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.  ಆದರೆ ಅದರ ಬೆನ್ನಿಗೇ ದಿಲ್ಲಿ ಹೈಕೋರ್ಟ್‌ ಶಿಕ್ಷೆಯನ್ನು ಅಮಾನತುಗೊಳಿಸಿದೆ.

ವಿಶೇಷ ನ್ಯಾಯಾಲಯದ ತೀರ್ಪು ಹೊರಬೀಳುತ್ತಲೇ ಜೇಟ್ಲಿ ಅವರ ವಕೀಲರು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿದರು. ಇದೊಂದು ತುರ್ತು ಪ್ರಕರಣವೆಂದು ಪರಿಗಣಿಸಿ ತ್ವರಿತವಾಗಿ ಆಲಿಸುವಂತೆ ಕೋರಿದರು.

78 ವರ್ಷ ವಯಸ್ಸಿನ ಜಯಾ ಜೇಟ್ಲಿ ಮತ್ತು ಸಮತಾ ಪಕ್ಷದ ಅವರ ಸಹೋದ್ಯೋಗಿ ಗೋಪಾಲ್ ಪಚೇರ್ವಾಲ್ ಹಾಗೂ ನಿವೃತ್ತ ಮೇಜರ್ ಜನರಲ್ ಎಸ್‌ಪಿ ಮುರುಗೈ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯವು 4 ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ ದಂಡ ವಿಧಿಸಿ ಆದೇಶ ಹೊರಡಿಸಿತ್ತು ಅಲ್ಲದೆ ಗುರುವಾರ ಸಂಜೆ 5 ಗಂಟೆಯೊಳಗೆ ಕೋರ್ಟಿಗೆ ಶರಣಾಗುವಂತೆಯೂ ಆದೇಶಿಸಿತ್ತು.

ಮುರುಗೈ ಮತ್ತು ಪಚೇರ್ವಾಲ್ ಅವರ ವಕೀಲರು ವಿಚಾರಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಬಳಿಕ ನ್ಯಾಯಾಲಯ ಅವರಿಬ್ಬರಿಗೆ ಕ್ರಮವಾಗಿ ಆಗಸ್ಟ್ 3 ಮತ್ತು ಆಗಸ್ಟ್ 5ರಂದು ಶರಣಾಗುವಂತೆ ಸೂಚಿಸಿ ಕಾಲಾವಕಾಶ ನೀಡಿತು.

ಈಗಾಗಲೇ ಆರೋಪಿಗಳು 2001ರಲ್ಲಿ ವೆಸ್ಟೆಂಡ್ ಇಂಟರ್ನ್ಯಾಷನಲ್ ಕಂಪೆನಿಯ ಪ್ರತಿನಿಧಿ ಯಾಗಿರುವ ಮ್ಯಾಥ್ಯೂ ಸ್ಯಾಮ್ಯುಯೆಲ್ ಅವರಿಂದ 2006ರಲ್ಲಿ ಅಕ್ರಮವಾಗಿ ಹಣ ಸ್ವೀಕರಿಸಿದ ಆರೋಪಿಗಳು ಈ‌ ಹಣವನ್ನು ಸೈನ್ಯ ದಿಂದ ಥರ್ಮಲ್ ಇಮೇಜರುಗಳಿಗೆ ಸರಬರಾಜು ಆದೇಶ ಪಡೆಯಲು ಸ್ವೀಕರಿಸಿದ್ದಾರೆ ಎಂಬ ಆರೋಪ ಇವರ ಮೇಲಿದ್ದು ವಿಚಾರಣೆ ನಡೆಸಿದ ದಿಲ್ಲಿಯ ವಿಶೇಷ ಕೋರ್ಟ್ ಈ‌ ತೀರ್ಪು ನೀಡಿತ್ತು.

ಇದರಿಂದಾಗಿ ರಕ್ಷಣಾ ಸಚಿವ ಸ್ಥಾನದಿಂದ ಫರ್ನಾಂಡಿಸ್ ಕೆಳಗಿಳಿಯಬೇಕಾಯಿತು. ಬಂಗಾರು ಲಕ್ಷ್ಮಣ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಹಲವು ಸೇನಾ ಮುಖ್ಯಸ್ಥರನ್ನು ವಿಚಾರಣೆಗೆ ಒಳಪಡಿಸಲಾಯಿತು. ನಂತರ ಕೇಸಿನ ವಿಚಾರಣೆಗೆ ಎನ್.ಡಿ.ಎ ಫುಕಾನ್ ಕಮಿಷನ್ ಅನ್ನು ನೇಮಿಸಲಾಯಿತು. ಆದರೆ ಯು.ಪಿ.ಎ ಆಡಳಿತದಲ್ಲಿ ಕೇಸನ್ನು ಸಿ ಬಿ ಐ ಗೆ ಹಸ್ತಾಂತರಿಸಿತು.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ವರದಕ್ಷಿಣೆ ಕಿರುಕುಳ: ಕೋಡಿಜಾಲ್ ಇಬ್ರಾಹಿಂ ಸಿರಾಜ್ ಸಹಿತ ನಾಲ್ವರ ವಿರುದ್ಧ ಕೇಸು

Upayuktha

ಎಂಜಲಿನಿಂದ ಮಸಾಜ್‌: ವೈರಲ್ ವೀಡಿಯೋ ವಿರುದ್ಧ ಉಡುಪಿ ಸವಿತಾ ಸಮಾಜದಿಂದ ದೂರು

Upayuktha

ಕೋವಿಡ್ 19 ಲಸಿಕೆ ಅಭಿವೃದ್ಧಿಗೆ 900 ಕೋಟಿ ರೂಗಳ ಪ್ಯಾಕೇಜ್ ಘೋಷಿಸಿದ ಸರಕಾರ

Upayuktha