ದೇಶ-ವಿದೇಶ ಪ್ರಮುಖ

ದೇಶೀಯ ಪಿಪಿಇ ಕಿಟ್‌ ಮತ್ತು ಎನ್‌-95 ಮಾಸ್ಕ್‌ಗಳ ದೈನಂದಿನ ಉತ್ಪಾದನೆ 3 ಲಕ್ಷಕ್ಕೆ ಏರಿಕೆ

ಕೋವಿಡ್ 19 ಕುರಿತ ಸಚಿವರ ಗುಂಪಿನ 15ನೇ ಸಭೆ (ಚಿತ್ರ ಕೃಪೆ: ಡಾ. ಹರ್ಷವರ್ಧನ್‌ ಅವರ ಟ್ವಿಟರ್ ಹ್ಯಾಂಡಲ್)

ಹೊಸದಿಲ್ಲಿ:

ಕೋವಿಡ್ 19 ಕುರಿತ ಸಚಿವರ ಗುಂಪಿನ 15ನೇ ಸಭೆಯನ್ನು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ಶುಕ್ರವಾರ ನಡೆಸಿದ್ದಾರೆ. ಕೋವಿಡ್ 19 ನಿಯಂತ್ರಣ ಕಾರ್ಯತಂತ್ರ ಮತ್ತು ನಿರ್ವಹಣಾ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಕೇಂದ್ರ ಹಾಗೂ ವಿವಿಧ ರಾಜ್ಯಗಳು ಕೈಗೊಂಡ ಕ್ರಮಗಳ ಬಗ್ಗೆಯೂ ಪರಾಮರ್ಶೆ ನಡೆಸಲಾಯಿತು.

ದೇಶೀಯ ಪಿಪಿಇ (ಪರ್ಸನಲ್ ಪ್ರೊಟೆಕ್ಷನ್ ಎಕ್ವಿಪ್‌ಮೆಂಟ್‌) ಗಳ ದೈನಂದಿನ ಉತ್ಪಾದನೆ ಪ್ರಮಾಣ 3 ಲಕ್ಷ ದಾಟಿದ್ದು ಎನ್‌-95 ಮಾಸ್ಕ್‌ಗಳ ಉತ್ಪಾದನೆಯೂ 3 ಲಕ್ಷದ ಗಡಿ ದಾಟಿದೆ. ನಿಕಟ ಭವಿಷ್ಯದಲ್ಲಿ ದೇಶದ ಅಗತ್ಯಗಳನ್ನು ಪೂರೈಸಲು ಇದು ಸಾಕಾಗುತ್ತದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಕೋವಿಡ್ ವಿರುದ್ಧ ಸೆಣಸಲು ಪ್ರಸ್ತುತ 18,000 ವೆಂಟಿಲೇಟರ್‌ಗಳು ಕೂಡ ಲಭ್ಯವಿವೆ. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರೀಯ ಸಂಸ್ಥೆಗಳಿಗೆ 84.22 ಲಕ್ಷ ಎನ್‌95 ಮಾಸ್ಕ್‌ಗಳು ಮತ್ತು 47.98 ಲಕ್ಷ ಪಿಪಿಇ ಗಳನ್ನು ಈ ವರೆಗೆ ಒದಗಿಸಲಾಗಿದೆ. 919 ಕೋವಿಡ್‌ ವಿಶೇಷ ಆಸ್ಪತ್ರೆಗಳು, 2,036 ಕೋವಿಡ್ ಹೆಲ್ತ್‌ ಸೆಂಟರ್‌ಗಳು ಮತ್ತು 5,739 ಕೋವಿಡ್ ಕೇರ್‌ ಸೆಂಟರ್‌ಗಳ ಸಹಿತ ಒಟ್ಟು 8,694 ವಿಶೇಷ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ದೇಶದ ಒಟ್ಟಾರೆ ಕೋವಿಡ್‌ ಪ್ರಕರಣಗಳಲ್ಲಿ ಶೇ 79ರಷ್ಟು ಕೇಸುಗಳು 30 ಮುನಿಸಿಪಲ್ ಪ್ರದೇಶಗಳ ವ್ಯಾಪ್ತಿಯಲ್ಲಿವೆ ಎಂದು ಸಚಿವರ ಗುಂಪಿಗೆ ತಿಳಿಸಲಾಯಿತು. ಅತಿಹೆಚ್ಚಿನ ಸೋಂಕು ಪ್ರಕರಣಗಳು ಮತ್ತು ಅತಿ ಹೆಚ್ಚು ಸಾವಿನ ಪ್ರಕರಣಗಳು ದಾಖಲಾದ ರಾಜ್ಯಗಳಲ್ಲಿ ಚಿಕಿತ್ಸೆ, ಮಾರಣಾಂತಿಕತೆಯ ನಿರ್ವಹಣೆಗೆ ಮತ್ತಷ್ಟು ಪರಿಣಾಮಕಾರಿ ಕಾರ್ಯತಂತ್ರ ಬಳಸಬೇಕು ಎಂಬ ಸಲಹೆ ಸಭೆಯಲ್ಲಿ ವ್ಯಕ್ತವಾಯಿತು.

ವಲಸೆ ಕಾರ್ಮಿಕರ ವಾಪಸಾತಿ ಮತ್ತು ವಿದೇಶಗಳಿಂದ ಹಿಂದಿರುಗುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎದುರಾಗುವ ಸವಾಲುಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್‌, ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್ ಪುರಿ ಮತ್ತು ಗೃಹಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಸಹಿತ ಹಲವರು ಭಾಗವಹಿಸಿದ್ದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಭೂ ಕಕ್ಷೆ ತೊರೆದು ಚಂದ್ರನ ಪಥದತ್ತ ಹೊರಟ ಚಂದ್ರಯಾನ-2

Upayuktha

ಸಂಜೆಯ ಅಪ್‌ಡೇಟ್: ದ.ಕ., ಉಡುಪಿ ಕೊರೊನಾ ಪಾಸಿಟಿವ್ ಇಲ್ಲ, ಕಾಸರಗೋಡಿನಲ್ಲಿ ಒಂದು ಪಾಸಿಟಿವ್

Upayuktha

ರಾಜ್ಯಪಾಲ ಭೇಟಿ ಮಾಡಿದ ಸಿಎಂ ಬಿಎಸ್‌ವೈ: ಕೋವಿಡ್ ಸ್ಥಿತಿಗತಿ ವಿವರಣೆ

Upayuktha