ದೇಶ-ವಿದೇಶ

ಒಂದೇ ದಿನ 14 ರಾಷ್ಟ್ರಗಳಲ್ಲಿ ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ

ಹೊಸದಿಲ್ಲಿ: ವಿಶ್ವಾದ್ಯಂತ ವ್ಯಾಪಕವಾಗಿ ಕೊರೊನಾ ವೈರಸ್ ಹರಡುತ್ತಿದ್ದು, ಮಂಗಳವಾರ ಒಂದೇ ದಿನದಲ್ಲಿ 14 ರಾಷ್ಟ್ರಗಳಲ್ಲಿ ಅತೀ ಹೆಚ್ಚು ಸೋಂಕಿತ ಪ್ರಕರಣಗಳು ದಾಖಲಾಗಿವೆ.

ಜಗತ್ತಿನಾದ್ಯಂತ ಲಾಕ್‍ಡೌನ್ ಸಡಿಲಿಕೆ ಬಳಿಕ ವೈರಸ್ ಪಸರಿಸುವುದು ಕೂಡ ಏರಿಕೆಯಾಗುತ್ತಿವೆ. ಮಂಗಳವಾರ ವಿಶ್ವದ 14 ರಾಷ್ಟ್ರಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.

5 ರಾಷ್ಟ್ರಗಳಲ್ಲಿ 500ಕ್ಕೂ ಅಧಿಕ ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿದ್ದಾರೆ. 17 ದೇಶಗಳಲ್ಲಿ 100ಕ್ಕೂ ಹೆಚ್ಚು ಕೋವಿಡ್-19 ಕೇಸುಗಳು ವರದಿಯಾಗಿವೆ. ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾದ ರಾಷ್ಟ್ರಗಳೆಂದರೆ ಅಮೇರಿಕ, ಬ್ರೆಜಿಲ್, ರಷ್ಯಾ, ಭಾರತ, ಇರಾನ್, ಮ್ಯಾಕ್ಸಿಕೋ, ಪಾಕಿಸ್ಥಾನ, ಸೌದಿ ಅರೇಬಿಯಾ, ಬಾಂಗ್ಲಾದೇಶ, ಕತ್ತಾರ್, ಇಂಡೋನೇಷ್ಯಾ, ಓಮನ್, ಪಿಲಿಫೈನ್, ಬೊಲಿವಿಯಾ.

ಅದೇ ರೀತಿ ಐನೂರಕ್ಕೂ ಹೆಚ್ಚು ಕೊರೊನಾ ಕೇಸ್ ದಾಖಲಾದ ರಾಷ್ಟ್ರಗಳೆಂದರೆ ಕುವೈಟ್, ಉಕ್ರೇನ್, ಗ್ವಾಟೆಮಾಲಾ, ಹೊಂಡುರಾಸ್, ನೇಪಾಳ.

ಅತ್ಯಧಿಕ ಅಂದರೆ ಭಾರತದಲ್ಲಿ ಮಂಗಳವಾರ ಒಂದೇ ದಿನದಲ್ಲಿ 9,163 ಮಂದಿಗೆ ಸೋಂಕು ತಗಲಿದೆ. ಉಳಿದಂತೆ ರಷ್ಯಾದಲ್ಲಿ 7,425, ಮ್ಯಾಕ್ಸಿಕೋದಲ್ಲಿ 4,577, ಪಾಕಿಸ್ಥಾನದಲ್ಲಿ 3,946, ಚಿಲಿ ರಾಷ್ಟ್ರದಲ್ಲಿ 3,804, ಬಾಂಗ್ಲಾದೇಶದಲ್ಲಿ 3,412, ಸೌದಿ ಅರೇಬಿಯಾದಲ್ಲಿ 3,139 ಪ್ರಕರಣಗಳು ವರದಿಯಾಗಿವೆ.

ಮಂಗಳವಾರ ಒಂದೇ ದಿನದಲ್ಲಿ ಅತೀ ಹೆಚ್ಚು ಅಂದರೆ ಮ್ಯಾಕ್ಸಿಕೋದಲ್ಲಿ 759 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ರಷ್ಯಾದಲ್ಲಿ 153, ಭಾರತದಲ್ಲಿ 147, ಇರಾನ್‍ನಲ್ಲಿ 121, ಪಾಕಿಸ್ಥಾನದಲ್ಲಿ 105 ಮಂದಿ ಸಾವನ್ನಪ್ಪಿದ್ದಾರೆ.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ದೇಶದ ಮೊದಲ ಸಂಯುಕ್ತ ಸೇನಾ ಮುಖ್ಯಸ್ಥರಾಗಿ ಜ. ಬಿಪಿನ್ ರಾವತ್ ನೇಮಕ

Upayuktha

ದೇಶದಾದ್ಯಂತ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ ಕ್ಕೆ ಡೇಟ್ ಫಿಕ್ಸ್ – ಕೇಂದ್ರ ಸರ್ಕಾರ

Harshitha Harish

ಐತಿಹಾಸಿಕ ಅಯೋಧ್ಯೆ ತೀರ್ಪು ಇಂದು ಪ್ರಕಟ: ದೇಶಾದ್ಯಂತ ಬಿಗಿ ಭದ್ರತೆ

Upayuktha