ಜಿಲ್ಲಾ ಸುದ್ದಿಗಳು ಪ್ರಮುಖ

ದ.ಕ. 23 ಕೊರೊನಾ ಪಾಸಿಟಿವ್, ಉಡುಪಿಯಲ್ಲಿ ಇಂದು ಶೂನ್ಯ

ಮಂಗಳೂರು: ಕಳೆದೊಂದು ವಾರದಿಂದ ಅತಿ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳಿಂದ ಸುದ್ದಿಯಲ್ಲಿದ್ದ ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಯಾವುದೇ ಹೊಸ ಕೊರೊನಾ ಸೋಂಕಿತ ಪ್ರಕರಣ ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 947 ಇದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 23 ಹೊಸ ಪ್ರಕರಣ ವರದಿಯಾಗಿದೆ. ಇವರಲ್ಲಿ ಇಬ್ಬರು ಮಹಾರಾಷ್ಟ್ರದಿಂದ, ಮೂವರು ದುಬೈ ಹಾಗೂ ಉಳಿದ 18 ಮಂದಿ ಸೌದಿ ಅರೇಬಿಯಾದಿಂದ ಬಂದವರು. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 218ಕ್ಕೇರಿದೆ.

ಕರ್ನಾಟಕ ರಾಜ್ಯದಲ್ಲಿ ಇಂದು 161 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇವರಲ್ಲಿ 91 ಮಂದಿ ಹೊರ ದೇಶ/ರಾಜ್ಯ ದಿಂದ ಬಂದವರು. ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 5921ಕ್ಕೇರಿದೆ. ಇಂದು ಇಬ್ಬರು ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 66ಕ್ಕೆ ಏರಿದೆ.

ಕೇರಳದಲ್ಲಿ ಇಂದು 91 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇವರಲ್ಲಿ ಕಾಸರಗೋಡಿನ ಇಬ್ಬರು ಸೇರಿದ್ದಾರೆ.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

ಟೆಲಿಗ್ರಾಂ ಬ್ರಾಡ್‌ಕಾಸ್ಟ್‌ ಮೂಲಕ ಉಪಯುಕ್ತ ನ್ಯೂಸ್‌ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ.

Related posts

ಕೊರೊನಾ ಅಪ್ ಡೇಟ್: ದ.ಕ.- 17, ಉಡುಪಿ- 22, ಕರ್ನಾಟಕ- 271 ಪಾಸಿಟಿವ್

Upayuktha

52 ಚೈನೀಸ್ ಮೊಬೈಲ್‌ ಆಪ್‌ಗಳನ್ನು ನಿಷೇಧಿಸಲು ಗುಪ್ತಚರ ಸಂಸ್ಥೆ ಶಿಫಾರಸು

Upayuktha

ಪೆರ್ಲ ನಾಲಂದಾ ಕಾಲೇಜ್‌ನಲ್ಲಿ ಉದ್ಯೋಗ ನೈಪುಣ್ಯ ತರಬೇತಿ- ನಾಳೆಯಿಂದ ಡಿ.26ರ ವರೆಗೆ

Upayuktha