ಪ್ರಮುಖ ರಾಜ್ಯ

ಕೊರೊನಾ ಅಪ್‌ಡೇಟ್: ರಾಜ್ಯದಲ್ಲಿ ಸತತ ಎರಡನೇ ದಿನ ನಾಲ್ಕೂವರೆ ಶತಕ ಸಮೀಪಿದ ಸೋಂಕಿತರ ಸಂಖ್ಯೆ

ದ.ಕ. 33, ಉಡುಪಿ 9, ಕರ್ನಾಟಕ 445

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 33 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಸೋಂಕಿತರಲ್ಲಿ 15 ಮಂದಿ ಗಲ್ಫ್ ರಾಷ್ಟ್ರಗಳಾದ ಸೌದಿ, ಕತಾರ್, ದಮಾಮ್ ನಿಂದ ಬಂದವರು. 6 ಮಂದಿಗೆ ಉಸಿರಾಟ ಸಮಸ್ಯೆಯಿಂದ ಸೋಂಕು ಪತ್ತೆಯಾಗಿದೆ. ಇಬ್ಬರಿಗೆ ಸೋಂಕು ಹರಡಿರುವುದರ ಮೂಲ ಪತ್ತೆಯಾಗಲಿಲ್ಲ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 527ಕ್ಕೇರಿದೆ.

ಉಡುಪಿ ಜಿಲ್ಲೆಯಲ್ಲಿ ಇಂದು 9 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಎಲ್ಲರೂ ಹೊರ ಪ್ರದೇಶದಿಂದ ಬಂದವರು. ಈ ಮೂಲಕ ಉಡುಪಿಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1125ಕ್ಕೆ ಏರಿದೆ.

ಕರ್ನಾಟಕ ರಾಜ್ಯದಲ್ಲಿ ಇಂದು 445 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 11005 ಕ್ಕೇರಿದೆ. ಇಂದು 10 ಮಂದಿ ಕೊರೊನಾದಿಂದ ಮೃತಪಟ್ಟಿದ್ದು, ರಾಜ್ಯದಲ್ಲಿ ಒಟ್ಟು 180 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಕೇರಳದಲ್ಲಿ ಇಂದು 150 ಮಂದಿಯಲ್ಲಿ ಕೊರೊನಾ ಸೋಂಕು ತಗುಲಿದ್ದು, ಕಾಸರಗೋಡು ಜಿಲ್ಲೆಯಲ್ಲಿ 2 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಸವಾಲುಗಳನ್ನೇ ಹಾಸಿ ಹೊದ್ದರೂ ‘ಯುದ್ಧ’ ಗೆದ್ದ ಗಡಿನಾಡಿನ ಕುವರಿಯ ಕಥೆ

Upayuktha

ಓದುವಿಕೆ ಇಲ್ಲದೆ ಸಮಾಜ ಪತನದ ಹಾದಿ ಹಿಡಿದಿದೆ: ಜಿ.ಎಸ್. ನಟೇಶ್

Upayuktha

ಕೋವಿಡ್-19: ಕರ್ನಾಟಕದ ಗಡಿ ಮುಚ್ಚಿದರೆಂದು ಹುಯಿಲೆಬ್ಬಿಸುತ್ತಿರುವ ಕೇರಳ

Upayuktha

Leave a Comment