ಜಿಲ್ಲಾ ಸುದ್ದಿಗಳು ಪ್ರಮುಖ

ದ.ಕ. ಜಿಲ್ಲೆಯಲ್ಲಿ ಸೋಮೇಶ್ವರದ ಮಹಿಳೆಗೆ ಕೊರೊನಾ ಸೋಂಕು, ರಾಜ್ಯದಲ್ಲಿ 26 ಪಾಸಿಟಿವ್

ಮಂಗಳೂರು: ರಾಜ್ಯದಲ್ಲಿ ಬುಧವಾರ 26 ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 951ಕ್ಕೆ ತಲುಪಿದೆ. ಕಲಬುರ್ಗಿಯಲ್ಲಿ 60 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 32ಕ್ಕೆ ಏರಿದೆ.

ಬೀದರ್ 11, ಕಲಬುರ್ಗಿ 2, ಬೆಂಗಳೂರು ನಗರ- 1, ದ.ಕ.- 1, ಉತ್ತರ ಕನ್ನಡ 2, ಬಳ್ಳಾರಿ 1, ದಾವಣಗೆರೆ 2, ವಿಜಯಪುರ-2, ಹಾಸನ -4 ಪ್ರಕರಣ ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಇನ್ನೊಂದು ಹೊಸ ಪ್ರಕರಣ ದಾಖಲಾಗಿದೆ. ಸೋಮೇಶ್ವರದ ಪಿಲಾರ್ ನ ಮಹಿಳೆಗೆ ಸೋಂಕು ಧೃಡಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

80ನೇ ಅಖಿಲ ಭಾರತ ಅಂತರ್‌ ವಿವಿ ಕ್ರೀಡಾಕೂಟ: 4ನೇ ದಿನ ಎರಡು ಕೂಟ ದಾಖಲೆ ಬರೆದ ನರೇಂದ್ರ

Upayuktha

ಮೇಳಗಳ ವಿರುದ್ಧ ಅವಹೇಳನ, ಅಶಿಸ್ತಿನ ವರ್ತನೆಗಾಗಿ ಪಟ್ಲ ಸತೀಶ್ ಶೆಟ್ಟರಿಗೆ ಅವಕಾಶ ನೀಡಿಲ್ಲ: ಕಟೀಲು ಮೇಳದ ಯಜಮಾನರ ಸ್ಪಷ್ಟನೆ

Upayuktha

ರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನ ನವೆಂಬರ್ 17: ಅಪಸ್ಮಾರ ಕಾರಣಗಳು, ನಿರ್ವಹಣೆ ಮತ್ತು ಚಿಕಿತ್ಸೆ

Upayuktha

Leave a Comment