ದೇಶ-ವಿದೇಶ ಪ್ರಮುಖ

ಕೊರೊನಾ: ದೇಶದಲ್ಲಿ ಒಟ್ಟಾರೆ ಸಂಖ್ಯೆ ಹೆಚ್ಚಿದರೂ ಪಾಸಿಟಿವ್‌ ಪ್ರಕರಣಗಳು ಸ್ಥಿರ: ಐಸಿಎಂಆರ್

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಟ ಪರಿಣಾಮಕಾರಿಯಾಗಿದ್ದು, ಒಂದೂವರೆ ತಿಂಗಳ ಅವಧಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕೇವಲ ಶೇ 3 ರಿಂದ 5 ನಡುವೆ ಇವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಗುರುವಾರ ಹೇಳಿದೆ.

ಒಂದೂವರೆ ತಿಂಗಳ ಅವಧಿಯಲ್ಲಿ ಒಟ್ಟಾರೆ 1,30,000 ಸ್ಯಾಂಪಲ್‌ಗಳ ಪರೀಕ್ಷೆ ನಡೆಸಲಾಗಿದ್ದು ಅವುಗಳ ಪೈಕಿ ಕೇವಲ ಶೇ 3ರಿಂದ 5ರ ಪ್ರಮಾಣದಲ್ಲಿ ಸೋಂಕು ದೃಢಪಟ್ಟಿದೆ.

ಕಳೆದ 10 ದಿನಗಳಲ್ಲಿ ದೇಶಾದ್ಯಂತ ಹಾಟ್‌ಸ್ಪಾಟ್‌ಗಳು ಮತ್ತು ಹೈ ರಿಸ್ಕ್‌ (ಅತ್ಯಧಿಕ ಅಪಾಯ) ಪ್ರದೇಶಗಳನ್ನು ಗುರುತಿಸಿ ಕೋವಿಡ್ 19 ಪರೀಕ್ಷೆಯನ್ನು ತ್ವರಿತಗೊಳಿಸಲಾಗಿದೆ. ಇದರಿಮದಾಗಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ತುಲನಾತ್ಮಕವಾಗಿ ಕಡಿಮೆಯಾಗಿದೆ.

ಪಾಸಿಟಿವ್ ಪ್ರಕರಣಗಳಲ್ಲೂ ಹೆಚ್ಚಿನವರ ಸ್ಥಿತಿ ಸ್ಥಿರವಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ ಹೆಚ್ಚಾದರೂ ತೀವ್ರಗತಿಯ ಏರಿಕೆಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ.

ದೇಶಾದ್ಯಂತ ಈಗ ಪ್ರತಿದಿನ 500ಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದ್ದು, ಕೊರೊನಾ ಹಾಟ್‌ಸ್ಪಾಟ್‌ಗಳನ್ನು ಸಂಪೂರ್ಣ ಮುಚ್ಚಲಾಗಿದೆ. ಸಮುದಾಯದ ಮಟ್ಟದಲ್ಲಿ ಇನ್ನೂ ಸೋಂಕು ಹಬ್ಬಿಲ್ಲ ಎಂಬುದನ್ನು ಈ ಟ್ರೆಂಡ್ ಸೂಚಿಸುತ್ತದೆ ಎಂದು ಐಸಿಎಂಆರ್‌ ಹೇಳಿದೆ.

ಸ್ಥಳೀಯವಾಗಿ ಅತ್ಯಧಿಕ ಸೋಂಕು ಪ್ರಕರಣಗಳು ವರದಿಯಾದ ಪ್ರದೇಶಗಳಲ್ಲಿ ಸಮುದಾಯ ಸೋಂಕಿನ ಸಮೀಪಕ್ಕೆ ತಲುಪುತ್ತಿದೆ.

ಪ್ರತಿದಿನ ಸ್ಯಾಂಪಲ್‌ಗಳ ಪರೀಕ್ಷೆ ನಡೆಸುವ ಸಾಮರ್ಥ್ಯವನ್ನು 5,000ದಿಂದ 13,000ಕ್ಕೆ ಹೆಚ್ಚಿಸಲಾಗಿದೆ. ಕೊರೊನಾ ಶಂಕಿತ ಪ್ರಕರಣಗಳ ತಪಾಸನೆಗೆ ಸುಮಾರು 250 ಟ್ರೂನ್ಯಾಟ್ ಯಂತ್ರಗಳು ಮತ್ತು 200 ಸಿಬಿ-ನ್ಯಾಟ್ ಯಂತ್ರಗಳನ್ನು ಬಳಸಲಾಗುತ್ತಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಕರ್ನಾಟಕ ಉಪಚುನಾವಣೆ ಮುಂದಕ್ಕೆ: ಇದು ಮೊದಲ ಜಯ ಎಂದ ಬಿಜೆಪಿ, ಮೈ ಪರಚಿಕೊಂಡ ಪ್ರತಿಪಕ್ಷಗಳು

Upayuktha

ಮಂಗಳೂರು- ಬೆಂಗಳೂರು ನಡುವೆ 2 ದಸರಾ ವಿಶೇಷ ರೈಲುಗಳ ಓಡಾಟ

Upayuktha

ಈರುಳ್ಳಿ ಬೆಳೆದು ಕೋಟ್ಯಧಿಪತಿಯಾದ ಮಲ್ಲಿಕಾರ್ಜುನ

Upayuktha