ಆರೋಗ್ಯ ಕ್ರೀಡೆ ದೇಶ-ವಿದೇಶ

ವಿಶ್ವ ದಾಖಲೆಯ ಓಟಗಾರನಿಗೆ ಕೋವಿಡ್ ಧೃಡ

ಜಮೈಕಾದ ವಿಶ್ವ ದಾಖಲೆಯ ಓಟಗಾರ ಉಸೇನ್ ಬೋಲ್ಟ್‌ಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಅವರು ತಮ್ಮ ಮನೆಯಲ್ಲಿಯೇ ಸೆಲ್ಫ್ ಕ್ವಾರಂಟೈನ್ ಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಉಸೇನ್ ಬೋಲ್ಟ್‌ಗೆ ಯಾವುದೇ ರೀತಿಯ ಕೊರೊನಾ ಲಕ್ಷಣಗಳು ಇಲ್ಲದಿರುವುದರಿಂದ ಆರೋಗ್ಯವಾಗಿದ್ದಾರೆ.

ಹಾಗೆಯೇ ಜಮೈಕಾದ ಆರೋಗ್ಯ ಸಚಿವಾಲಯ ಸೋಮವಾರ ತಡರಾತ್ರಿ 100 ಮೀಟರ್ ಹಾಗೂ 200 ಮೀಟರ್ ಓಟದಲ್ಲಿ ವಿಶ್ವದಾಖಲೆಯನ್ನು ಬರೆದಿರುವ ಉಸೇನ್ ಬೋಲ್ಟ್ ಕೊವಿಡ್-19ಗೆ ತುತ್ತಾಗಿರುವ ವಿಚಾರವನ್ನು ಬಹಿರಂಗಪಡಿಸಿದೆ.

ಬಳಿಕ ಉಸೇನ್ ಬೋಲ್ಟ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ತಮ್ಮ ಆರೋಗ್ಯ ಸ್ಥಿತಿಯನ್ನು ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ.

View this post on Instagram

Stay Safe my ppl 🙏🏿

A post shared by Usain St.Leo Bolt (@usainbolt) on

ಕೇವಲ ಸುರಕ್ಷಿತವಾಗಿರುವ ಕಾರಣ ನಾನು ನನ್ನಷ್ಟಕ್ಕೇ ಕ್ವಾರಂಟೈನ್‌ಗೆ ಒಳಪಡುತ್ತಿದ್ದೇನೆ. ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಬೇಡಿ” ಎಂದು ಉಸೇನ್ ಬೋಲ್ಟ್ ಈ ವಿಡಿಯೋದಲ್ಲಿ ಹೇಳಿದ್ದಾರೆ.  ಈ ವಿಡಿಯೋ ಗೆ ಅಭಿಮಾನಿಗಳು ಶೀಘ್ರವಾಗಿ ಗುಣಮುಖರಾಗಿ ಬರುವಂತೆ ಶುಭ ಹಾರೈಸುತ್ತಿದ್ದಾರೆ.

ಹಾಗೆಯೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಮರುದಿನ ಅಂದರೆ ಶನಿವಾರ ಕೊರನಾ ಟೆಸ್ಟ್‌ಗೆ ಒಳಗಾಗಿದ್ದರು. ಆಗ ಕೊರೊನಾ ಸೋಂಕಿನ ಭೀತಿಯ ಮಧ್ಯೆ ಉಸೇನ್ ಬೋಲ್ಟ್  ಸಂಭ್ರಮದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

ಹಾಗೆ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ ಪೋಸ್ಟ್‌ನಲ್ಲಿ “ಹಿಂದೆಂದಿಗಿಂತಲೂ ಅತ್ಯುತ್ತಮ ಹುಟ್ಟುಹಬ್ಬ” ಎಂದು ಬರೆದುಕೊಂಡಿದ್ದರು.

Related posts

ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕ್ಕೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ 5.10 ಲಕ್ಷ ರೂ ದೇಣಿಗೆ

Harshitha Harish

ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು: ಅಯೋಧ್ಯೆಯ ವಿವಾದಿತ ನಿವೇಶನ ರಾಮನಿಗೆ ಸೇರಿದ್ದು; ಮಸೀದಿಗೆ ಪರ್ಯಾಯ ನಿವೇಶನ

Upayuktha

ನಿಫಾ ವೈರಸ್: ಕೊರೊನಾ ಅಷ್ಟೇ ಅಲ್ಲ, ಬಾವಲಿ ಜ್ವರದ ಬಗ್ಗೆಯೂ ಎಚ್ಚರವಿರಲಿ

Upayuktha