ಕ್ರಿಕೆಟ್ ದೇಶ-ವಿದೇಶ

ಬಾಂಗ್ಲಾದೇಶ ದ ಅಂತರಾಷ್ಟ್ರೀಯ ಟಿ20 ನಾಯಕ ಮಹಮದುಲ್ಲ ಗೆ ಕೋವಿಡ್ ಪಾಸಿಟಿವ್

ಧಾಕಾ: ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಟಿ20 ನಾಯಕ ಮಹಮದುಲ್ಲಗೆ ಕೋವಿಡ್ ಸೋಂಕು ತಗುಲಿ ವರದಿ ಪಾಸಿಟಿವ್ ಬಂದಿದೆ.

ಹೀಗಾಗಿ ಮಹಮದುಲ್ಲ ಅವರು ಮುಂದೆ ನಡೆಯುವ ಪಾಕಿಸ್ತಾನ್ ಸೂಪರ್ ಲೀಗ್‌ (ಪಿಎಲ್‌ಎಲ್) ಭಾಗವಹಿಸಲು ಸಾಧ್ಯವಾಗುತ್ತಿಲ್ಲ.

ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್‌ ನಡೆಯುತ್ತಿರುವ ಯುಎಇ ಯಿಂದಲೇ ಮಹಮದುಲ್ಲ ಅವರು ಪಾಕಿಸ್ತಾನ ಕ್ಕೆ ಪ್ರಯಾಣ ಮಾಡುವುದರಲ್ಲಿದ್ದರು.

34 ವಯಸ್ಸಿನವರಾದ ಮಹಮದುಲ್ಲ ಭಾನುವಾರ ದುಬೈ ಮೂಲಕ ಪಾಕಿಸ್ತಾನಕ್ಕೆ ವಿಮಾನ ಪ್ರಯಾನ ಮಾಡಬೇಕಿತ್ತು. ಆದರೆ ಕೋವಿಡ್ ಟೆಸ್ಟ್ ವರದಿಯಲ್ಲಿ ಪಾಸಿಟಿವ್ ಬಂದಿದ್ದು,  ಸೆಲ್ಫ್ ಐಸೊಲೇಶನ್‌ಗೆ ಒಳಗಾಗಿದ್ದಾರೆ.

ಬಾಂಗ್ಲಾದೇಶ ಸರ್ಕಾರದ ನಿಯಮದ ಪ್ರಕಾರ ದೇಶದಿಂದ ಹೊರ ಹೋಗುವಾಗ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಸಲ್ಲಿಸಬೇಕು.

Related posts

ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನಿಧನ

Upayuktha

ಹಿಮಾಚಲ ಪ್ರದೇಶದಲ್ಲಿ ಪ್ರಧಾನಿಯಿಂದ ಉದ್ಘಾಟನೆ; ಅಟಲ್ ಸುರಂಗ ಮಾರ್ಗ

Harshitha Harish

ಲವ್ ಜಿಹಾದ್ ಪ್ರಕರಣ: ಆಲಿಘಡದಲ್ಲಿ ಯುವಕನ ಮೇಲೆ ಹಲ್ಲೆ

Harshitha Harish