ದೇಶ-ವಿದೇಶ ಪ್ರಮುಖ

ಕೋವಿಡ್-19: ಭಾರತದಲ್ಲಿ ಶೇ. 52 ಮಂದಿ ಸೋಂಕಿತರು ಗುಣಮುಖ

(ಪಿಟಿಐ ಚಿತ್ರ, ಕೃಪೆ: ಹಿಂದೂಸ್ಥಾನ್ ಟೈಮ್ಸ್)

ಹೊಸದಿಲ್ಲಿ: ದೇಶದಲ್ಲಿ ಕೋವಿಡ್ -19 ಪ್ರಕರಣಗಳು ಪ್ರತಿದಿನ ವ್ಯಾಪಕವಾಗಿ ಹೆಚ್ಚುತ್ತಿದೆ. ಆದರೆ ಆಶಾದಾಯಕ ಬೆಳವಣೆಗೆಯೆಂದರೆ ಭಾರತದಲ್ಲಿ ಸೋಂಕಿತರ ಪೈಕಿ ಶೇ. 52ರಷ್ಟು ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ ಎಂದು ದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ 10,667 ಹೊಸ ಪ್ರಕರಣಗಳು ವರದಿಯಾಗಿದ್ದು, ಪರಿಣಾಮ ಭಾರತದಲ್ಲಿ ಮಂಗಳವಾರ ಕೋವಿಡ್ -19 ಸೋಂಕುಗಳು 3.43 ಲಕ್ಷಕ್ಕೆ ಏರಿದೆ. ಕಳೆದ ಒಂದು ದಿನದಲ್ಲಿ 380 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 9,900 ಏರಿಕೆಯಾಗಿದೆ. ಈ ವರೆಗೆ ಸುಮಾರು 1,80,013ರಷ್ಟು ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಇದರಿಂದ ದೇಶದಲ್ಲಿ ಕೋವಿಡ್ ಸೋಂಕಿತರ ಪೈಕಿ ಶೇಕಡಾ 52.46ರಷ್ಟು ಮಂದಿಯ ಆರೋಗ್ಯ ವೃದ್ಧಿಸಿದೆ. ಹಾಗಾಗಿ ಮಹಾಮಾರಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತದ ವೈದ್ಯರು, ಆರೋಗ್ಯ ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿಗಳು ಮೇಲುಗೈ ಸಾಧಿಸಿದಂತಾಗಿದೆ.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಈಗ ಲಭ್ಯ. ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

ಟೆಲಿಗ್ರಾಂ ಬ್ರಾಡ್‌ಕಾಸ್ಟ್‌ ಮೂಲಕ ಉಪಯುಕ್ತ ನ್ಯೂಸ್‌ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ.

Related posts

ನಾವು ಅನರ್ಹರೂ ಅಲ್ಲ, ಅನಾಥರೂ ಅಲ್ಲ: ಶಿವರಾಮ ಹೆಬ್ಬಾರ್

Upayuktha

ಕೊರೊನಾ 2ನೇ ಅಬ್ಬರ: ನಿಯಮ ಅನುಸರಿಸದಿದ್ದರೆ ಮತ್ತೆ ಲಾಕ್​​ಡೌನ್​ ಎಂದ ಮಹಾ ಸಿಎಂ

Sushmitha Jain

ಸ್ಟೇಟ್ ಬ್ಯಾಂಕ್ ಇಂಡಿಯಾ ಅಧ್ಯಕ್ಷರಾಗಿ ದಿನೇಶ್ ಕುಮಾರ್ ಖರಾ ನೇಮಕ

Harshitha Harish