ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಪುತ್ತೂರು: ಸಂತ ಫಿಲೋಮಿನಾ ಕಾಲೇಜು ಎನ್ನೆಸ್ಸೆಸ್‍ನಿಂದ ಕೊರೊನಾ ವ್ಯಾಕ್ಸಿನ್ ಜಾಗೃತಿ

ಪುತ್ತೂರು: ಕೇಂದ್ರ ಸರಕಾರದ ಆದೇಶದಂತೆ ಎಪ್ರಿಲ್ 11 ರಿಂದ 14ರ ತನಕ ನಡೆದ ಕೊರೊನಾ ವ್ಯಾಕ್ಸಿನ್ ಫೆಸ್ಟಿವಲ್ ಲಸಿಕಾ ಉತ್ಸವದಲ್ಲಿ ಸಂತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಸಕ್ರಿಯವಾಗಿ ಪಾಲ್ಗೊಂಡರು.

ಕೊರೊನಾ ವ್ಯಾಕ್ಸಿನ್ ಕುರಿತು ಸವಿವರವಾದ ಮಾಹಿತಿಯನ್ನು ಮನೆ ಮನೆಗೆ ತೆರಳಿ ಜನರಿಗೆ ನೀಡುವುದರೊಂದಿಗೆ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಲಸಿಕೆ ಪಡೆದುಕೊಳ್ಳುವಂತೆ ಜಾಗೃತಿ ಮೂಡಿಸಿದರು.

ಮಂಗಳೂರು ವಿವಿಯ ಸೆಮಿಸ್ಟರ್ ಪರೀಕ್ಷಾ ತಯಾರಿಯ ಅವಧಿಯಲ್ಲಿಯೂ ಸೇವಾ ಮನೋಭಾವನೆಯಿಂದ ಈ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎನ್ನೆಸ್ಸೆಸ್ ಸ್ವಯಂ ಸೇವಕರನ್ನು ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಅಭಿನಂದಿಸಿದರು.

ಈ ಕಾರ್ಯಕ್ರಮವು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ಶಶಿಪ್ರಭಾ ಬಿ ಮತ್ತು ದಿನಕರ್ ಅಂಚನ್ ಮಾರ್ಗದರ್ಶನದಲ್ಲಿ ಜರಗಿತು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಲಾಕ್ ಡೌನ್ ನಡುವೆ ಮಾನವೀಯತೆ ಮೆರೆದ ಪ್ರಸೂತಿ ತಜ್ಞೆ ಡಾ. ಪೂರ್ಣಿಮಾ ಭಟ್

Upayuktha

ಮಂಗಳೂರು ಶಾಂತ: ಇಂದು 3ರಿಂದ 6 ಕರ್ಫ್ಯೂ ಸಡಿಲಿಕೆ; ನಾಳೆ ಹಗಲು ಪೂರ್ತಿ ಸಡಿಲಿಕೆ: ಬಿಎಸ್‌ವೈ

Upayuktha

24×7 ನೀರು: ದೇರೆಬೈಲ್‌ ವಾರ್ಡ್ ಮಟ್ಟದ ಸಾರ್ವಜನಿಕ ಸಭೆ ಇಂದು ಸಂಜೆ 6 ಗಂಟೆಗೆ

Upayuktha