ಆರೋಗ್ಯ ಗ್ರಾಮಾಂತರ ಪ್ರಮುಖ ಸ್ಥಳೀಯ

ಶಿರ್ಲಾಲು: ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮ

ಶಿರ್ಲಾಲು: ಅಳದಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಶಿರ್ಲಾಲು ಗ್ರಾ.ಪಂ ಸಹಭಾಗಿತ್ವದಲ್ಲಿ ಇಲ್ಲಿನ ವ್ಯಾಪ್ತಿಯ ನಾಗರೀಕರಿಗೆ ಕೋವಿಡ್ ಲಸಿಕೆ ವಿತರಣ ಕಾರ್ಯಕ್ರಮ ಶಿರ್ಲಾಲು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಶಿರ್ಲಾಲು ಗ್ರಾ.ಪಂ ಅಧ್ಯಕ್ಷ ತಾರಾನಾಥ ಗೌಡ, ಅಳದಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಚೈತ್ರಾ, ಗ್ರಾ.ಪಂ. ಸದಸ್ಯರಾದ ಮಾಧವ, ಕೊರಗಪ್ಪ, ಜ್ಯೋತಿ, ಗೀತಾ, ಪ್ರಕಾಶ್ ಹೆಗ್ಡೆ, ಸೋಮನಾಥ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜು, ಆರೋಗ್ಯ ಸಹಾಯಕಿ ಜಯಲಕ್ಷ್ಮಿ, ಪ್ರೀತಿ, ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪಂಚಾಯತ್ ಸಿಬ್ಬಂದಿ ಸುಪ್ರೀತಾ ಎಸ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಶಿರ್ಲಾಲು, ಕರಂಬಾರು ವ್ಯಾಪ್ತಿಯ ಸುಮಾರು 146 ಮಂದಿ ನಾಗರೀಕರಿಗೆ ಕೋವಿಡ್ ಲಸಿಕೆ ನೀಡಲಾಯಿತು.

Related posts

ಫಿಲೋಮಿನಾ ಕಾಲೇಜಿನಲ್ಲಿ ಮಂಗಳೂರು ವಿವಿ ಪುತ್ತೂರು ವಲಯದ ಕ್ರಿಕೆಟ್ ಪಂದ್ಯಾಟ

Upayuktha

ದೂರಸಂವೇದಿ ದತ್ತಾಂಶಕ್ಕೆ ನಿರ್ಬಂಧ ರಹಿತ ಪ್ರವೇಶ ಅಗತ್ಯ

Upayuktha

ಮಂಗಳೂರು ದಸರಾ ಚಿತ್ರಗಳು

Upayuktha