ಬೆಂಗಳೂರು: ನಿನ್ನೆಯಿಂದ ದೇಶಾದ್ಯಂತ ಕೋವಿಡ್ ಲಸಿಕೆ ವಿತರಣೆಯ ಮೂರನೇ ಹಂತದ ಅಭಿಯಾನ ಆರಂಭ ಆಗಿದ್ದು, ಗಣ್ಯಾತಿಗಣ್ಯರು ಲಸಿಕೆ ಹಾಕಿಸಿಕೊಂಡು ಮಾದರಿ ಆಗುತ್ತಿದ್ದಾರೆ. ಇವತ್ತು ಬೆಂಗಳೂರಿನ ಬೊಮ್ಮಸಂದ್ರ ನಾರಾಯಣ ಹೆಲ್ತ್ ಸಿಟಿಯಲ್ಲಿ ವಿಪ್ರೋ ಕಂಪನಿ ಮುಖ್ಯಸ್ಥ ಅಜೀಂ ಪ್ರೇಮ್ಜೀ ಕೂಡ ಲಸಿಕೆ ಹಾಕಿಸಿಕೊಂಡಿದ್ದಾರೆ.
ಅಜೀಂ ಪ್ರೇಮ್ಜೀ ಜೊತೆಗೆ ಖ್ಯಾತ ವೈದ್ಯ ದೇವಿಶೆಟ್ಟಿ ಸಾಥ್ ನೀಡಿದ್ದು, ನಿನ್ನೆಯಷ್ಟೇ ಇನ್ಫೋಸಿಸ್ನ ನಾರಾಯಣಮೂರ್ತಿ ಮತ್ತು ಇನ್ಪೋಸಿಸ್ ಫೌಂಡೇಶನ್ನ ಸುಧಾ ಮೂರ್ತಿ ಲಸಿಕೆ ಪಡೆಯುವ ಮೂಲಕ ಗಮನ ಸೆಳೆದಿದ್ದರು.