ದೇಶ-ವಿದೇಶ ನಿಧನ ಸುದ್ದಿ

ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಪುತ್ರ ಕೊರೊನಾಗೆ ಬಲಿ

ಹೊಸದಿಲ್ಲಿ: ಸಿಪಿಎಂ ವರಿಷ್ಠ ನಾಯಕ ಸೀತಾರಾಮ್ ಯೆಚೂರಿ ಅವರ ಹಿರಿಯ ಪುತ್ರ ಅಶೀಷ್ ಯೆಚೂರಿ (35) ಕೋವಿಡ್‌ ಸೋಂಕಿನಿಂದ ಮೃತಪಟ್ಟಿದ್ದಾರೆ.

ಕೆಲವು ದಿನಗಳಿಂದ ಕೋವಿಡ್ ಸೋಂಕಿಗೆ ತುತ್ತಾಗಿ ಗುರುಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಶೀಷ್ ಯೆಚೂರಿ ಇಂದು ಬೆಳಗ್ಗೆ ನಿಧನರಾದರು.

ಸ್ವತಃ ಸೀತಾರಾಮ್ ಯೆಚೂರಿ ಅವರೇ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ನನ್ನ ಹಿರಿಯ ಮಗ ಅಶೀಷ್ ಯೆಚೂರಿ ಕೊರೊನಾ ಸೋಂಕಿನಿಂದ ಮೃತಪಟ್ಟ ವಿಷಯ ತಿಳಿಸಲು ಅತೀವ ದುಃಖವಾಗುತ್ತಿದೆ. ಚಿಕಿತ್ಸೆ ನೀಡಿದ ವೈದ್ಯರು, ದಾದಿಯರು ಮತ್ತು ನಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು’ ಎಂದು ಹೇಳಿದ್ದಾರೆ.

ಯೆಚೂರಿ ಪುತ್ರನ ಅಕಾಲಿಕ ಮರಣಕ್ಕೆ ಕಾಂಗ್ರೆಸ್ ನಾಯಕ ಶಶಿ ತರೂರ್ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಚುನಾವಣೆಗೆ ಮುನ್ನವೇ ಮಹಾರಾಷ್ಟ್ರ, ಹರ್ಯಾಣ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಭಿನ್ನಮತ

Upayuktha

ಅಯೋಧ್ಯೆ ವಿಚಾರಣೆ ಪೂರ್ಣ: ತೀರ್ಪು ಕಾದಿರಿಸಿದ ಸುಪ್ರೀಂ ಕೋರ್ಟ್

Upayuktha

ನಮ್ಮದು ಪ್ರಜಾಪ್ರಭುತ್ವ ದೇಶ, ರೈತರ ಪರ ದನಿ ಎತ್ತುವ ಸ್ವಾತಂತ್ರ್ಯ ಕೂಡಾ ದಿಶಾಗೆ ಇಲ್ಲವೇ..?: ದಿಶಾ ಬೆನ್ನಿಗೆ ನಿಂತ ಸ್ಯಾಂಡಲ್‌ವುಡ್ ಪದ್ಮಾವತಿ

Sushmitha Jain