ಅಪರಾಧ ಕ್ರಿಕೆಟ್ ರಾಜ್ಯ

ಕ್ರಿಕೆಟ್ ಬೆಟ್ಟಿಂಗ್ ; ಆರೋಪಿ ಬಂಧನ ,4ಲಕ್ಷ ನಗದು, ಮೊಬೈಲ್ ಫೋನ್ ವಶಪಡಿಸಿಕೊಂಡ ಸಿಸಿಬಿ ಪೊಲೀಸರು

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ಭಾಗಿಯಾದ ಆರೋಪಿಯೊಬ್ಬನನ್ನು ಬಂಧಿಸಿದ ಸಿಸಿಬಿ ಪೊಲೀಸರು 4 ಲಕ್ಷ ರೂ.ನಗದು ಹಾಗೂ 1 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.

ವರ್ತೂರು ಹಳೇ ಅಂಚೇ ಕಚೇರಿ ಬಳಿಯ ಮಸ್ಜಿದ್ ರೋಡ್ ನಿವಾಸಿ ಶಬ್ಬೀರ್ ಖಾನ್ (32) ವರ್ಷ ದವ ಬಂಧಿತ ಆರೋಪಿ.

ನವೆಂಬರ್ 10ರಂದು ನಡೆದ ಐಪಿಎಲ್ ಕ್ರಿಕೆಟ್ ನ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ ತಂಡಗಳ ನಡುವಿನ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಈ ತಂಡಗಳ ಸೋಲು ಮತ್ತು ಗೆಲುವಿನ ಬಗ್ಗೆ ಸಾರ್ವಜನಿಕರಿಂದ ಮೊಬೈಲ್ ಫೋನ್ ಮೂಲಕ ಬೆಟ್ಟಿಂಗ್ ರೇಶ್ಯೂವನ್ನು ನೋಡಿಕೊಂಡು, ಮೊಬೈಲ್ ಫೋನ್ ಮೂಲಕ ಹಣವನ್ನು ಕಟ್ಟಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ನಡೆಸುತ್ತಿದ್ದರು.

ಆಟಕ್ಕೆ ಸಂಬಂಧಪಟ್ಟಂತೆ ಗೆದ್ದವರಿಗೆ ಹಣ ಕೊಡಲು ಮತ್ತು ಸೋತವರಿಂದ ಹಣ ಪಡೆಯಲು ಒಬ್ಬ ಅಸಾಮಿಯು ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ವರ್ತೂರು ಪೊಲೀಸ್ ಠಾಣೆ ಹತ್ತಿರವಿರುವ ನಂದಿನಿ ಟೀ ಸ್ಟಾಲ್ ಅಂಗಡಿಯ ಮುಂಭಾಗದ ರಸ್ತೆಯಲ್ಲಿ ಬರುವ ಖಚಿತ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗ-ಸಿಸಿಬಿಯ ವಿಶೇಷ ವಿಚಾರಣಾ ದಳದ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

Related posts

ಸಾಹಿತ್ಯ ಒಲಿಯುವುದು ಸಾಧಕನಿಗೆ ಮಾತ್ರ: 11ನೇ ಬೆಳದಿಂಗಳ ಕವಿಗೋಷ್ಠಿಯಲ್ಲಿ ವಿ.ಬಿ. ಕುಳಮರ್ವ

Upayuktha

ದೇರಳಕಟ್ಟೆ ಶ್ರೀ ಅಯ್ಯಪ್ಪ ದೇವಸ್ಥಾನಕ್ಕೆ ನುಗ್ಗಿ ಕಳ್ಳತನ ನಡೆಸಿದ ಇಬ್ಬರ ಬಂಧನ

Upayuktha

ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳ ಮಹಾ ಸಮಾರಾಧನೆ

Upayuktha