ಅಪರಾಧ ಕ್ರಿಕೆಟ್ ರಾಜ್ಯ

ಕ್ರಿಕೆಟ್ ಬೆಟ್ಟಿಂಗ್; 2 ಆರೋಪಿಗಳ ಬಂಧಿಸಿದ ಸಿಸಿಬಿ ಪೊಲೀಸರು

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಕಟ್ಟಿ ಜೂಜಾಟದಲ್ಲಿ ನಿರತರಾಗಿದ್ದ 2 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 2 ಲಕ್ಷ ರೂ. ನಗದು ಮತ್ತು 2 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಸವನಗುಡಿಯ ಚಿಕ್ಕಮಾವಳ್ಳಿ, ಎಸ್ .ಕೆ.ಲೇನ್, ಮಾರಮ್ಮ ದೇವಸ್ಥಾನ ಸಮೀಪದ ನಿವಾಸಿ ದುಂಗರ್ ಚಂದ್ ಜೈನ್ (49) ಹಾಗೂ ನಗರತ್ ಪೇಟೆ ಮುಖ್ಯರಸ್ತೆ 2ನೇ ಮಹಡಿ ನಿವಾಸಿ ಕಿರಣ್ ಜೈನ್ (24) ಬಂಧಿತ ಆರೋಪಿಗಳು.

ಅವರಿಂದ ಕ್ರಿಕೆಟ್ ಜೂಜಾಟಕ್ಕೆ ಸಂಬಂಧ ಪಟ್ಟಂತೆ 2 ಲಕ್ಷ ರೂ.ನಗದು ಹಾಗೂ 2 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಡಿದ್ದಾರೆ.

ಈ ಬಗ್ಗೆ ಆರೋಪಿಗಳ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

Related posts

ಭಾರತ- ದ. ಆಫ್ರಿಕಾ ಮೊದಲ ಟಿ-20 ಪಂದ್ಯ ಮಳೆಯಿಂದ ರದ್ದು

Upayuktha

ಬಿಎಸ್‌ವೈ ಸರಕಾರದ ಕೋವಿಡ್ 19 ಪರಿಹಾರ ಘೋಷಣೆ ವಿವರಗಳು

Upayuktha

ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಬಿ.ಎಸ್ ಯಡಿಯೂರಪ್ಪ

Harshitha Harish