ಅಪರಾಧ ಸ್ಥಳೀಯ

ಕೆಲಸದಾಕೆಯಿಂದಲೇ ಕೊಲೆಗೆ ಸ್ಕೆಚ್, ಆರೋಪಿಗಳು ಪೊಲೀಸರ ವಶಕ್ಕೆ

ಬಂಟ್ವಾಳ ವೃದ್ಧೆಯ ಅಸಹಜ ಸಾವಿನ ಪ್ರಕರಣಕ್ಕೆ ತಿರುವು

ಬಂಟ್ವಾಳ: ಅಮ್ಮುಂಜೆ ಗ್ರಾಮದಲ್ಲಿ ವೃದ್ಧೆಯೋರ್ವರು ಅಸಹಜವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದ್ದ ಘಟನೆಗೆ ದೊಡ್ಡ ತಿರುವೊಂದು ದೊರಕಿದ್ದು ಇದೀಗ ಮೃತ ಮಹಿಳೆಯನ್ನು ನೋಡಿಕೊಳ್ಳುತ್ತಿದ್ದ ಕೆಲಸದಾಕೆ ಹಾಗೂ ಅಕೆಯ ಸ್ನೇಹಿತರು ಸೇರಿ ವೃಧ್ಧೆಯನ್ನು ಕೊಲೆಗೈದಿರುವ ವಿಚಾರ ತನಿಖೆಯ ಬಳಿಕ ಬೆಳಕಿಗೆ ಬಂದಿದೆ.

ಜನವರಿ 26ರಂದು ನಡೆದ ಈ ಘಟನೆ ಅಸಹಜ ಸಾವಲ್ಲ ಎಂದು ಅನುಮಾನ ಪಟ್ಟ ಮೃತ ಮಹಿಳೆಯ ಮಗ ಹೆಚ್ಚಿನ ತನಿಖೆ ನಡೆಸಲು ಪೊಲೀಸರಿಗೆ ದೂರು ನೀಡಿದ್ದರು.

ವಿಚಾರಣೆ ಕೈಗೆತ್ತಿಕೊಂಡ ಬಂಟ್ವಾಳ ಉಪ ವಿಭಾಗದ ಪೊಲೀಸ್ ಉಪಧೀಕ್ಷಕ ವೆಲೈಂಟೆನ್ ಡಿಸೋಜಾ ಹಾಗೂ ತಂಡವು ಹತ್ಯೆ ಆರೋಪಿಗಳಾಗಿರುವ ಕೆಲಸದಾಕೆ ಪ್ರಶ್ಚಿತಾ ಬರೆಟ್ಟೊ ಹಾಗೂ ಆಕೆಯ ಸ್ನೇಹಿತರು, ನರಿಕೊಂಬು ನಿವಾಸಿಗಳದ ಸತೀಶ್ ಮತ್ತು ಚರಣ್‌ ಎಂಬಾತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಘಟನೆಯ ಪ್ರಮುಖ ಆರೋಪಿ ಪ್ರಶ್ಚಿತಾ ಮೃತ ವೃದ್ಧೆಯನ್ನು ನೋಡಿಕೊಳ್ಳುತ್ತಿದ್ದು ವೃಧ್ಧೆ ಬಳಿಯಿರುವ ಚಿನ್ನಾಭರಣವನ್ನು ದೋಚಲು ಕೊಲೆ ನಡೆಸಲಾಗಿದೆ. ಜನವರಿ 25ರಂದು ಹಿಂದಿನಿಂದ ಬಂದು ಬೆನೆಡಿಕ್ಟ್‌ ಅವರನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೈದಿದ್ದಾರೆ. ಇದೀಗ ಅರೋಪಿಗಳು ದೋಚಿದ್ದ 94 ಗ್ರಾಂ ಚಿನ್ನವನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಮೈಸೂರಿನಲ್ಲೊಂದು ವಿನೂತನ ಪ್ರಯತ್ನ; 30 ಅಡಿ ಎತ್ತರದ ಜೀವಂತ ಅರಳೀ ಮರ ಯಶಸ್ವೀ ಸ್ಥಳಾಂತರ

Upayuktha

ಫಿಲೋಮಿನಾ ಸ್ನಾತಕೋತ್ತರ ಗಣಕ ವಿಜ್ಞಾನ ವಿಭಾಗಕ್ಕೆ ಶೇ.100 ಫಲಿತಾಂಶ

Upayuktha

ಪೌರ ರಕ್ಷಣಾ ಕಾರ್ಯಕರ್ತರಿಗೆ ಹೋಮಿಯೋಪಥಿ ಔಷಧಿ ವಿತರಣೆ

Upayuktha