ಅಪರಾಧ ಗ್ರಾಮಾಂತರ ಸ್ಥಳೀಯ

ಕಾರಿಗೆ ಸೈಡ್ ಕೊಡೋ ವಿಚಾರಕ್ಕೆ ರಸ್ತೆಯಲ್ಲೇ ಸಿನೆಮಾ ನಟಿಯಿಂದ ಫೈಟ್

ಬಂಟ್ವಾಳ: ಕಾರಿಗೆ ಸೈಡ್ ಕೊಡುವ ವಿಚಾರಕ್ಕೆ ನಟಿ ಹಾಗೂ ಇನ್ನೊಂದು ಕಾರಿನವರ ನಡುವೆ ರಸ್ತೆಯಲ್ಲಿ ಸಿನೆಮಾ ಮಾದರಿ ಹೊಡೆದಾಟ ನಡೆದಿದ್ದು, ಹೊಡೆದಾಟದ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಬಳಿ ಈ ಘಟನೆ ನಡೆದಿದೆ. ಕಾರಿನಲ್ಲಿ ನಾಯಕ ನಟನೊಂದಿಗೆ ಹೋಗುತ್ತಿದ್ದ ನಟಿ ಶೋಭಿತ ಮತ್ತು ಮತ್ತೊಂದು ಕಾರಿನವರೊಂದಿಗೆ ಸೈಡ್‌ ಕೊಡೋ ವಿಚಾರದಲ್ಲಿ ವಾಗ್ವಾದ ನಡೆದಿದ್ದು ಮಿತಿಮೀರಿ ಸಾರ್ವಜನಿಕರ ಎದುರೇ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಫೆಬ್ರವರಿ 10 ರಂದು ನಡೆದಿದ್ದು ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಹೊಡೆದಾಟದ ದೃಶ್ಯಗಳು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.

ಎದುರು ಕಾರಿನವರು ನಟಿ ಮೇಲೆ ಕೈ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದನ್ನು ಗಮನಿಸಿದ ಸ್ಥಳೀಯರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ರಿಕ್ಷಾ ಚಾಲಕರಿಗೆ ಮುಖಕವಚ, ಸ್ಯಾನಿಟೈಸರ್, ಹೋಮಿಯೋಪಥಿ ಔಷಧಿ ವಿತರಣೆ

Upayuktha

ಎಂಜಿನಿಯರಿಂಗ್‌ನಲ್ಲಿ 6 ಚಿನ್ನದ ಪದಕಗಳೊಂದಿಗೆ ಪ್ರಥಮ ರ‍್ಯಾಂಕ್‌ ಪಡೆದ ಸಿಂಧೂರ ಸರಸ್ವತಿ

Upayuktha

ಪದವಿ-ಪದಕ ಪಡೆಯುವುದೇ ವಿದ್ಯಾರ್ಜನೆಯ ಉದ್ದೇಶವಲ್ಲ: ಡಾ. ಪದ್ಮನಾಭ ಆಚಾರ್ಯ

Upayuktha