ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಆಳ್ವಾಸ್‍ನಲ್ಲಿ ಸೈಕ್ಲಿಂಗ್ ಫಾರ್ ಹ್ಯುಮಾನಿಟಿ ವಿಶೇಷ ಕಾರ್ಯಕ್ರಮ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಎಂ.ಕಾಂ. ಹೆಚ್‍ಆರ್‌ಡಿ‌ ವಿಭಾಗದ ವತಿಯಿಂದ `ಸೈಕ್ಲಿಂಗ್ ಫಾರ್ ಹ್ಯುಮಾನಿಟಿ’ ವಿಶೇಷ ಕಾರ್ಯಕ್ರಮ ನಡೆಯಿತು. ಸೈಕಲ್ ಸವಾರಿಯ ಮೂಲಕ ಸಾಮಾಜಿಕ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಮಣಿಪುರ ಮೂಲದ ಸೈಕಲ್ ಸವಾರ ಫಿಲೆಮ್ ರೋಹನ್ ಸಿಂಗ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಫಿಲೆಮ್ ರೋಹನ್ ಸಿಂಗ್, ನಾವು ಮಾಡುವ ಕೆಲಸಗಳು ಇತರರ ಮೇಲೆ ಪ್ರಭಾವ ಬೀರುವಂತಿರಬೇಕು. ಯಾವುದೇ ನಿರೀಕ್ಷೆ ಇಲ್ಲದೆ ಇತತರಿಗೆ ಸಹಾಯ ಮಾಡಬೇಕು ಎಂದರು. ತಮ್ಮ ಜೀವನಾನುಭವಗಳನ್ನು ಹಂಚಿಕೊಂಡ ರೋಹನ್ ಜೀವನದಲ್ಲಿ ಎದುರಾಗುವ ಸವಾಲುಗಳು ಹಾಗೂ ಅವುಗಳನ್ನು ಎದುರಿಸಬಹುದಾದ ವಿವಿಧ ಸಾಧ್ಯತೆಗಳನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ನಾಳೆ ಏನು ಆಗಬಹುದು ಎಂಬ ಭಯದಲ್ಲಿ ಯಾರು ಇರುತ್ತಾರೋ ಅವರು ಯಾವುದೇ ಸಾಧನೆ ಮಾಡಲಾರರು. ಆದ್ದರಿಂದ ಪ್ರತಿಯೊಬ್ಬರು ಆ ಚೌಕಟ್ಟಿನಿಂದ ಹೊರಗೆ ಬರಬೇಕು ಸಣ್ಣ ಪುಟ್ಟ ಸಹಾಯ ಮಾಡುವುದರ ಮೂಲಕ ಕೆಲಸ ಪ್ರಾರಂಭಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು. ವಿದ್ಯಾರ್ಥಿ ಜೊನಿಟಾ ಡಿಸೋಜ ಸ್ವಾಗತಿಸಿ, ಮಹಿಮ ವಂದಿಸಿ, ಸ್ಟೆಫಿ ನಿರೂಪಿಸಿದರು.

ಫಿಲೆಮ್ ರೋಹನ್ ಸಿಂಗ್ ಮಣಿಪುರಿ ಮೂಲದ ಸೈಕಲ್ ಸವಾರರಾಗಿದ್ದು, ದೇಶಾದ್ಯಂತ ಸೈಕಲ್ ಸವಾರಿ ಮಾಡುವ ಮೂಲಕ ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಮಣಿಪುರದ ಬಡ ಜನರಿಗಾಗಿ ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ. ತಮ್ಮದೇ ಟೀ-ಶರ್ಟ್ ತಯಾರಿಸಿ ಮಾರಾಟ ಮಾಡುತ್ತಿರುವ ಇವರು ಅದರಿಂದ ಬಂದ ಹಣದಲ್ಲಿ ನಿರ್ಗತಿಕರಿಗೆ ಆಹಾರ, ವಸತಿ ಒದಗಿಸುವ, ಪರಿಸರ, ಮಾನವೀಯತೆಗಳ ಬಗ್ಗೆ ಜಾಗೃತಿ ಮೂಡಿಸುವ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಸೈಕ್ಲಿಂಗ್ ಮೂಲಕ ಜಾಗೃತಿ ಮೂಡಿಸುತ್ತಿರುವ ಇವರು ಇದುವರೆಗೆ ದೇಶದಾದ್ಯಂತ 15000 ಕಿ.ಮೀ ಗೂ ಅಧಿಕ ದೂರ ಸಂಚರಿಸಿದ್ದಾರೆ.

ಈ ಬಾರಿ ‘ಫೀಡಿಂಗ್ ದಿ ಹಂಗ್ರಿ’ ಧ್ಯೇಯವನ್ನಿಟ್ಟುಕೊಂಡು ಸೈಕಲ್ ಸವಾರಿ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸಂಗ್ರಹವಾಗುವ ದೇಣಿಗೆಯ ಮೂಲಕ ನಿರ್ಗತಿಕರು, ವಲಸೆ ಕಾರ್ಮಿಕರನ್ನು ಸಲಹುವ ಉದ್ದೇಶವಿಟ್ಟುಕೊಂಡಿದ್ದಾರೆ. ಮಣಿಪುರದ ಇಂಫಾಲದಿಂದ ತಮ್ಮ ಪಯಣವನ್ನು ಆರಂಭಿಸಿರುವ ಇವರು ದಕ್ಷಿಣ ಕನ್ನಡದ ಮೂಡುಬಿದಿರೆಯಲ್ಲಿ ಈ ಬಾರಿಯ ಸೈಕಲ್ ಸವಾರಿಯನ್ನು ಕೊನೆಗೊಳಿಸಲಿದ್ದಾರೆ. ಕೊರೊನಾ ಎರಡನೇ ಅಲೆಯ ಕಾರಣದಿಂದ ಅಭಿಯಾನವನ್ನು ಮೊಟಕುಗೊಳಿಸಿದ್ದೇನೆಂದು ಅವರು ತಿಳಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಉಡುಪಿ: ವಸಂತಿ ಕೆ. ಭಟ್‌ ನಿಧನ

Sushmitha Jain

ಕೋವಿಡ್ ಆಸ್ಪತ್ರೆ ಹಾಸಿಗೆ ಸಾಮರ್ಥ್ಯ ವಿಸ್ತರಣೆ: ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

Upayuktha

ಪಡೀಲ್‌ನ ಫಸ್ಟ್‌ ನ್ಯೂರೋ ಆಸ್ಪತ್ರೆ ಸುತ್ತಲಿನ ಪ್ರದೇಶ ಕಂಟೈನ್‌ಮೆಂಟ್ ಝೋನ್: ಜಿಲ್ಲಾಡಳಿತ ಘೋಷಣೆ

Upayuktha