ಜಿಲ್ಲಾ ಸುದ್ದಿಗಳು

ಸಾರಿಗೆ ನಿಯಮಗಳ ಕಟ್ಟುನಿಟ್ಟಿನ ಪಾಲನೆಯಾಗಬೇಕು: ಡಿ. ವೀರೇಂದ್ರ ಹೆಗ್ಗಡೆ ಒತ್ತಾಯ

ಪರಿಯಾರಂ ಘಾಟ್ ಅಪಘಾತದಲ್ಲಿ ಹಲವರ ದುರ್ಮರಣಕ್ಕೆ ವಿಷಾದ

ಧರ್ಮಸ್ಥಳ: ಪುತ್ತೂರಿನ ಈಶ್ವರಮಂಗಲದಿಂದ ಭಾನುವಾರ ಮದುವೆ ಕಾರ್ಯಕ್ರಮಕ್ಕೆ ಹೊರಟ ಬಸ್ ಕೇರಳದ ಪೆರಿಯಾರಂ ಘಾಟ್ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ದುರ್ಮರಣ ಹೊಂದಿದವರ ಬಗ್ಗೆ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹಗ್ಗಡೆಯವರು ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರಕಟಣೆ ನೀಡಿರುವ ಅವರು, ಪ್ರಯಾಣದ ವೇಳೆ ಬಸ್‌ ಚಾಲಕ-ನಿರ್ವಾಹಕರು, ಪ್ರಯಾಣದ ಆಯೋಜಕರು ಮತ್ತು ಸ್ವತಃ ಪ್ರಯಾಣಿಕರು ವಹಿಸಬೇಕಾದ ಕಾಳಜಿಯನ್ನು ವಹಿಸದೆ ಅಪಘಾತಗಳಿಗೆ ಕಾರಣವಾಗುತ್ತಿದ್ದಾರೆ ಎಂದು ಅವರು ವಿಚಾದಿಸಿದ್ದಾರೆ.

ತಮ್ಮ ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಆದ ಅನುಭವಗಳನ್ನು ನೆನಪಿಸಿಕೊಂಡಿರುವ ಹೆಗ್ಗಡೆಯವರು, ಸಾರಿಗೆ ನಿಯಮಗಳ ಪಾಲನೆಯಲ್ಲಿ ಅಲ್ಲಿನವರು ವಹಿಸುವ ಕಾಳಜಿ ಮತ್ತು ಶಿಸ್ತನ್ನು ಸ್ಮರಿಸಿಕೊಂಡು, ಅಂತಹ ಶಿಸ್ತು ನಮ್ಮಲ್ಲೂ ಬರಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಪಘಾತದಲ್ಲಿ ಬದುಕಿ ಉಳಿದು ಆಸ್ಪತ್ರೆಯಲ್ಲಿ ಹಿಂಸೆ ಪಡುತ್ತಿರುವವರ ಬಗ್ಗೆ ಚಿಂತಿಸಬೇಕಾಗಿದೆ. ಬಸ್‍ನಲ್ಲಿ ಅಧಿಕ ಸಂಖ್ಯೆಯ ಪ್ರಯಾಣಿಕರಿದ್ದುದೇ ಈ ಅಪಘಾತಕ್ಕೆ ಕಾರಣವಾಗಿದೆ. ಈ ಅಪಘಾತಕ್ಕೆ ಚಾಲಕನ ನಿರ್ಲಕ್ಷ ಎಂದು ಕಂಡು ಬಂದರೂ ಬಸ್ ಕಾಂಟ್ರಾಕ್ಟ್ ವಹಿಸಿಕೊಂಡವರು ಮಿತಿಮೀರಿದ ಜನರನ್ನು ಬಸ್‍ನಲ್ಲಿ ತುಂಬಿಸಿರುವುದೇ ಅಪಘಾತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಬಸ್ ಮಾಲಕರು, ಚಾಲಕರು ಹಾಗೂ ಮದುವೆಯ ಬಸ್ ವಹಿಸಿಕೊಂಡವರು ಮೂವರೂ ಅಪಘಾತಕ್ಕೆ ಜವಾಬ್ದಾರರಾಗುತ್ತಾರೆ.

ನಾವು ಜರ್ಮನಿಗೆ ಹೋದಾಗ 9 ಜನರ ಪ್ರವಾಸಕ್ಕಾಗಿ ವಾಹನ ನಿಗದಿ ಪಡಿಸಿದ್ದೆವು. ಅಲ್ಲಿ ಇದ್ದ ಪರಿಚಿತರೊಬ್ಬರನ್ನು ಕುಳ್ಳಿರಿಸಿಕೊಳ್ಳಲು 3 ಸೀಟುಗಳು ಖಾಲಿ ಇದ್ದರೂ ಕುಳಿತುಕೊಳ್ಳಲು ಆಕ್ಷೇಪಿಸಿದ ಹಾಗೂ ನಿರ್ದಾಕ್ಷಿಣ್ಯವಾಗಿ ವರ್ತಿಸಿದ. ಆ ಕ್ಷಣದಲ್ಲಿ ಅಲ್ಲಿಯ ಚಾಲಕ ನಮಗೆ ನಿಷ್ಕರುಣಿಯಾಗಿ ಅನಿಸಿದರೂ ಅವರ ಶಿಸ್ತನ್ನು ಮೆಚ್ಚಲೇಬೇಕಾಗಿದೆ.

ಲಂಡನ್‍ನಲ್ಲಿ ನನಗೊಂದು ಸನ್ಮಾನ ಏರ್ಪಡಿಸಿದ್ದರು. ಆ ಕಾರ್ಯಕ್ರಮದಲ್ಲಿ ನಿಗದಿಯಾದ ಸಂಖ್ಯೆಗಿಂತ ಹೆಚ್ಚು ಒಬ್ಬರನ್ನೂ ಹಾಲ್‍ನ ಒಳಗೆ ಬಿಡಲಿಲ್ಲ. ನಮ್ಮ ಜೊತೆ ಬಂದವರೆ ಹೊರಗೆ ಉಳಿಯ ಬೇಕಾಯಿತು.

ಈ ಅಪಘಾತದಲ್ಲಿ ಮಡಿದವರ ಬಗ್ಗೆ ಸಂತಾಪ ಸೂಚಿಸುತ್ತಾ, ಇನ್ನು ಆಸ್ಪತ್ರೆಯಲ್ಲಿ ನೋವಿನಿಂದ ಬಳಲುತ್ತಿರುವವರಿಗೆ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದವನ್ನು ಕೋರುತ್ತಾ, ನಮ್ಮ ದೇಶದಲ್ಲಿ ಎಲ್ಲರೂ ಶಿಸ್ತು ಮತ್ತು ಕಾನೂನುಬದ್ಧ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೆಂದು ಆಶಿಸುತ್ತೇನೆ ಎಂದು ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

“ಯಕ್ಷಗಾನದ ಅಂತರಂಗ- ಬಹಿರಂಗ” ಕೃತಿ ಬಿಡುಗಡೆ

Upayuktha

ಉಡುಪಿ ಜಿಲ್ಲೆಯಲ್ಲಿ ಇಂದು ರಾತ್ರಿ 8 ಗಂಟೆಯಿಂದ 14 ದಿನಗಳ ಸೀಲ್ ಡೌನ್: ಜಿಲ್ಲಾಧಿಕಾರಿ ಪ್ರಕಟಣೆ

Upayuktha

‘ಬ್ರೈಟ್ ಸ್ಟೂಡೆಂಟ್’ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Upayuktha