ಜಿಲ್ಲಾ ಸುದ್ದಿಗಳು ಪ್ರಮುಖ ಸ್ಥಳೀಯ

ಕರಾವಳಿ ಜಿಲ್ಲೆಗಳ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: ಬೆಂಗಳೂರು- ಮಂಗಳೂರು ನಡುವೆ ಪ್ರತಿದಿನ ಮೂರು ಎಕ್ಸ್‌ಪ್ರೆಸ್ ರೈಲು

ಮಂಗಳೂರು: ಕರಾವಳಿ ಜಿಲ್ಲೆಗಳ ರೈಲು ಪ್ರಯಾಣಿಕರ ಪಾಲಿಗೆ ಇದು ಯುಗಾದಿಯ ಸಿಹಿಸುದ್ದಿಯಾಗಲಿದೆ.  ಬೆಂಗಳೂರು- ಮಂಗಳೂರು ನಡುವೆ ಏಪ್ರಿಲ್ 10ರಿಂದ ಪ್ರತಿದಿನ ಮೂರು ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ನಡೆಸಲಿದ್ದು ರಾಜಧಾನಿ ಮತ್ತು ಕರಾವಳಿ ನಡುವೆ ಸಂಚರಿಸುವ ಜನರಿಗೆ ಅನುಕೂಲವಾಗಲಿದೆ.

ಪ್ರತಿದಿನ ಮೂರು ಎಕ್ಸ್‌ಪ್ರೆಸ್ ರೈಲುಗಳು ಕುಣಿಗಲ್, ಶ್ರವಣಬೆಳಗೊಳ ಮತ್ತು ಹಾಸನ ಮಾರ್ಗವಾಗಿ ಬೆಂಗಳೂರಿನಿಂದ ಮಂಗಳೂರಿಗೆ ಸಂಚಾರ ನಡೆಸಲಿವೆ. ಹಾಸನ- ಶ್ರವಣಬೆಳಗೊಳ- ಚಿಕ್ಕಬಾಣಾವರ ನಡುವೆ ನೂತನ ರೈಲು ಮಾರ್ಗ ನಿರ್ಮಾಣವಾಗಿದ್ದು ಅದೀಗ ಉಪಯೋಗಕ್ಕೆ ಬರುತ್ತಿದೆ.

ಈ ಮೂರು ರೈಲುಗಳ ಜೊತೆ ಬೆಂಗಳೂರು – ಹಾಸನ ನಡುವೆ ಸಂಚರಿಸುತ್ತಿರುವ ಡೆಮೋ ರೈಲು ಜೊತೆಗೆ ಮತ್ತೆರಡು ರೈಲುಗಳ ಸಂಚಾರ ಎಂದಿನಂತೆ ಇರಲಿವೆ. ಸೊಲ್ಹಾಪುರ- ಹಾಸನ ನಡುವೆ ಪ್ರತಿದಿನ ಸಂಚರಿಸುವ ರೈಲು ಸಹ ಏಪ್ರಿಲ್ 10 ರಿಂದ ಆರಂಭವಾಗುತ್ತಿದೆ. ಕೊರೊನಾ ಲಾಕ್ಡೌನ್ ವರ್ಷದ ಬಳಿಕ ಮೊದಲ ಬಾರಿಗೆ ರೈಲು ಪೂರ್ಣ ಮಟ್ಟದಲ್ಲಿ ಸಂಚಾರಕ್ಕೆ ಬರಲಿದೆ.

ಬೆಂಗಳೂರು – ಮಂಗಳೂರು ನಡುವೆ ಶ್ರವಣಬೆಳಗೊಳ ಮಾರ್ಗವಾಗಿ ರಾತ್ರಿ 2 ರೈಲು, ಬೆಳಗ್ಗೆ 1 ರೈಲು ಸಂಚಾರ ನಡೆಸಲಿದೆ. ಬೆಂಗಳೂರು, ಮಂಗಳೂರು, ಹಾಸನ ಜಿಲ್ಲೆಗಳ ನಡುವೆ ಸಂಚರಿಸುವ ನಿತ್ಯ ಪ್ರಯಾಣಿಕರಿಗೆ ಇದು ಅತೀ ಉಪಯುಕ್ತವಾಗಲಿದೆ .

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ (ಮೆಜೆಸ್ಟಿಕ್‌)ನಿಂದ ಸಂಜೆ 6.40ಕ್ಕೆ ಹೊರಡುವ ರೈಲು 9.30ಕ್ಕೆ ಹಾಸನವನ್ನು ತಲುಪಲಿದೆ. ಮರುದಿನ ಬೆಳಗ್ಗೆ 8.35ಕ್ಕೆ ಕಾರವಾರ ತಲುಪಲಿದೆ. ಈ ರೈಲು ಮಂಗಳೂರು ನಿಲ್ದಾಣಕ್ಕೆ ಹೋಗದೆ ಪಡೀಲ್ ರೈಲು ನಿಲ್ದಾಣದಿಂದ ಕಾರವಾರಕ್ಕೆ ಸಂಚರಿಸಲಿದೆ. ಕಾರವಾರದಿಂದ ಸಂಜೆ 6.30ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 7 ಗಂಟೆಗೆ ಬೆಂಗಳೂರಿನ ಮೆಜೆಸ್ಟಿಕ್ ತಲುಪಲಿದೆ.

ಬೆಂಗಳೂರು-ಹಾಸನ- ಮಂಗಳೂರು
ಪ್ರತಿದಿನ ರಾತ್ರಿ 9.30ಕ್ಕೆ ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಹೊರಡುವ ರೈಲು 12.30ಕ್ಕೆ ಹಾಸನ ತಲುಪಲಿದೆ. ಮರುದಿನ ಬೆಳಗ್ಗೆ 7.50ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ. ಮಂಗಳೂರಿನಿಂದ ಬೆಳಗ್ಗೆ 8.50ಕ್ಕೆ ಹೊರಡುವ ರೈಲು ಸಂಜೆ 7.30ಕ್ಕೆ ಬೆಂಗಳೂರಿಗೆ ಬಂದು ತಲುಪಲಿದೆ.

ಯಶವಂತಪುರ- ಹಾಸನ-ಮಂಗಳೂರು ರೈಲು
ಬೆಂಗಳೂರು ನಗರದ ಯಶವಂತಪುರದಿಂದ ಪ್ರತಿದಿನ ಬೆಳಗ್ಗೆ 7.10ಕ್ಕೆ ಹೊರಡುವ ಎಕ್ಸ್‌ಪ್ರೆಸ್ ರೈಲು 10.05ಕ್ಕೆ ಹಾಸನ ತಲುಪಲಿದೆ. ಹಾಸನದಿಂದ ಹೊರಟ ರೈಲು ಸಂಜೆ 4.55ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ವಾರದಲ್ಲಿ 4 ದಿನ ಮಂಗಳೂರು ಜಂಕ್ಷನ್ ಮತ್ತು 3 ದಿನ ಕಾರವಾರದ ತನಕ ಈ ರೈಲು ಸಂಚಾರ ನಡೆಸಲಿದೆ.

ವಾರದ 7 ದಿನವೂ ಸಂಚಾರ
ಇಷ್ಟು ದಿನ ವಾರದಲ್ಲಿ 4 ದಿನ ಕುಣಿಗಲ್, ಶ್ರವಣಬೆಳಗೊಳ ಹಾಸನ ಮಾರ್ಗವಾಗಿ, ವಾರದಲ್ಲಿ ಮೂರು ದಿನ ಮಂಡ್ಯ, ಮೈಸೂರು, ಹಾಸನ ಮಾರ್ಗವಾಗಿ ಸಂಚಾರ ನಡೆಸುತ್ತಿದ್ದ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 10ರಿಂದ ವಾರದ 7 ದಿನವೂ ಬೆಂಗಳೂರಿನಿಂದ ಕುಣಿಗಲ್, ಶ್ರವಣಬೆಳಗೊಳ, ಹಾಸನ ಮಾರ್ಗವಾಗಿ ಮಂಗಳೂರು ಸೆಂಟ್ರಲ್‌ಗೆ ಸಂಚಾರ ನಡೆಸಲಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಬಲವಂತದ ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ಉತ್ತರಪ್ರದೇಶದ ರಾಜ್ಯಪಾಲರ ಒಪ್ಪಿಗೆ

Upayuktha

ಎರಡನೇ ಹಂತದ ಕೋವಿಡ್ ನಿರೋಧಕ ಲಸಿಕೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ

Upayuktha

ತಲೆ ನೋವುಗಳ ರಾಜ ಮೈಗ್ರೇನ್: ಕಾರಣವೇನು? ಶಮನ ಹೇಗೆ?

Upayuktha