ಪದ್ಯರೂಪಿ ಭಗವದ್ಗೀತೆ: ಅಗಾಧ ಜ್ಞಾನ ಭಂಡಾರದ ಸರಳ ಪ್ರಸ್ತುತಿ
ಅಧ್ಯಾಯ..೫ ಶ್ಲೋಕ..೨೧
*********
ಬಾಹ್ಯಸ್ಪರ್ಶೇಷ್ವಸಕ್ತಾತ್ಮಾ ವಿಂದತ್ಯಾತ್ಮನಿ ಯತ್ ಸುಖಮ್ ।
ಸ ಬ್ರಹ್ಮಯೋಗಯುಕ್ತಾತ್ಮಾ ಸುಖಮಕ್ಷಯಮಶ್ನುತೇ॥
ಪದ್ಯ-21
***
ಹೊರ ಜಗದ ವಿಷಯದಲಿ
ಆಸಕ್ತಿ ಇರದವನು
ಈಶನನು ನೆನೆಯುತ್ತ
ಯಾವ ಸುಖ ಕಾಣುವನೊ।
ಭಗವಂತನನವರತ
ಛಲ ಬಿಡದೆ ನೆನೆವವನು
ಅಕ್ಷಯಾನಂದವನು
ದಿನವು ಅನುಭವಿಸುವನು ॥
ಅಧ್ಯಾಯ..೫ ಶ್ಲೋಕ..೨೨
********
ಯೇ ಹಿ ಸಂಸ್ಪರರ್ಶಜಾ ಭೋಗಾ ದುಃಖಯೋನಯ ಏವ ತೇ।
ಆದ್ಯಂತವಂತಃ ಕೌಂತೇಯ ನ ತೇಷು ರಮತೇ ಬುಧಃ ॥
ಪದ್ಯ -22
***
ಇಂದ್ರಿಯದ ಜತೆಗೂಡಿ
ವಿಷಯಗಳ ಭೋಗಿಸುತ
ಇರುವ ಮನುಜನ ಸುಖವು
ದುಃಖ ತರುವಂತಹುದು ।
ಸತ್ಯವಲ್ಲದ ಸುಖಕೆ
ಜಾಣರಾದವರೆಂದು
ಮರುಳಾಗದೇ ಪಾರ್ಥ
ವಿರಕ್ತಿಯ ಹೊಂದುವರು ॥
********
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.